ನಳಿನ್ ಕುಮಾರ್‌ಗೆ ಸಿಎಂ‌ ಯೋಗ? ತಾಯಿ ಆಶೀರ್ವಾದ ಪಡೆದು ದಿಢೀರ್ ದೆಹಲಿಗೆ ಪಯಣ

ಮಂಗಳೂರು, ಜುಲೈ 26: ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಬಿಜೆಪಿಯಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ಜೋರಾಗಿದೆ.

ಮುಖ್ಯಮಂತ್ರಿ ಕುರ್ಚಿ ರೇಸ್‌ನಲ್ಲಿ ಹಲವರ ಹೆಸರು ಕೇಳಿ ಬರುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೆಸರೂ ಪ್ರಸ್ತಾಪದಲ್ಲಿದೆ.

BJP President Nalin Kumar kateel to Become New CM of Karnataka? He Went to Delhi

ಕುತೂಹಲ ಎಂಬಂತೆ ಸಂಸದ ನಳಿನ್ ಕುಮಾರ್ ಕಟೀಲ್ ದೆಹಲಿ ಪ್ರಯಾಣ ಮಾಡಿದ್ದು, ಬೆಳಗ್ಗಿನ 11.30 ವಿಮಾನದಲ್ಲಿ ಮಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ದೆಹಲಿಗೆ ಹೋಗುವ ಮುನ್ನ ನಳಿನ್ ಕುಮಾರ್ ಕಟೀಲ್ ತವರು ಮನೆಯ ಪೂಜಿಸುವ ದೈವಗಳ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ ತಾಯಿ ಸುಶೀಲಾವತಿ. ಎನ್. ಶೆಟ್ಟಿಯವರ ಕಾಲು ಮುಟ್ಟಿ ಆಶೀರ್ವಾದ ಪಡೆದು ದೆಹಲಿ ಪ್ರಯಾಣ ಮಾಡಿದ್ದಾರೆ.

BJP President Nalin Kumar kateel to Become New CM of Karnataka? He Went to Delhi

Recommended Video

      ಸಿದ್ದು ವಿರುದ್ದ ತಿರುಗಿ ಬಿದ್ದ ಕಟೀಲ್ | Oneindia Kannada

      ಹೀಗಾಗಿ ಹೈಕಮಾಂಡ್ ಆತ್ಯಾಪ್ತರಾಗಿರುವ ನಳಿನ್ ಕುಮಾರ್ ಕಟೀಲ್‌ಗೆ ಕರ್ನಾಟಕ ಮುಖ್ಯಮಂತ್ರಿಯಾಗುವ ಯೋಗ ಇದೆಯಾ ಅನ್ನೋದು ಸದ್ಯ ಬಿಜೆಪಿ ಕಾರ್ಯಕರ್ತರ ಕುತೂಹಲ ಕೆರಳಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+