ದೇಶಭಕ್ತಿಯನ್ನು ಬಿಜೆಪಿಯವರು ಗುತ್ತಿಗೆ ಪಡೆದುಕೊಂಡಿದ್ದಾರಾ?: ಮಂಗಳೂರಿನಲ್ಲಿ ಸಿದ್ದರಾಮಯ್ಯ ಪ್ರಶ್ನೆ
ಮಂಗಳೂರು, ಡಿಸೆಂಬರ್, 18: ಜಾತಿ ವ್ಯವಸ್ಥೆ, ಧರ್ಮ ರಾಜಕಾರಣ, ಮನುಸ್ಮೃತಿಯಲ್ಲಿ ಬಿಜೆಪಿ ನಂಬಿಕೆ ಇಟ್ಟಿದೆ. ಸಂವಿಧಾನದ ಜ್ಯಾತ್ಯಾತೀತ ರಾಜ್ಯ ಮಾಡಬೇಕು ಅಂತಾ ಹೇಳುತ್ತದೆ. ಆದರೆ ಬಿಜೆಪಿಯವರು ಹಿಂದೂ ರಾಷ್ಟ್ರ ಆಗಬೇಕು ಅಂತಾ ಹೇಳುತ್ತಾರೆ. ಯಾವ ರಾಜಕೀಯ ಪಕ್ಷ ಕೂಡ ಧರ್ಮಾಧರಿತ ಪಕ್ಷ ಆಗಬಾರದು. ಯುವಕರಲ್ಲಿ ಜಾತಿ ಧರ್ಮದ ಅಫೀಮವನ್ನು ಹುಟ್ಟು ಹಾಕಲಾಗಿದೆ. ಭಾರತ ಒಂದು ಧರ್ಮ, ಜಾತಿಯ ದೇಶವಲ್ಲ ಎಂದು ಮಂಗಳೂರಿನಲ್ಲಿ ಸಿದ್ದರಾಮಯ್ಯನವರು ವಿವರಿಸಿದರು. ಹಾಗೆಯೇ ದೇಶಭಕ್ತಿ ಹೆಸರಿನಲ್ಲಿ ಬಿಜೆಪಿ ಮಾಡುತ್ತಿರುವುದಾದರೇನು? ದೇಶಭಕ್ತಿಯನ್ನು ಬಿಜೆಪಿಯವರು ಗುತ್ತಿಗೆ ಪಡೆದುಕೊಂಡಿದ್ದಾರಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
"ಇಲ್ಲಿ ಆನೇಕ ಜಾತಿ, ಧರ್ಮ ಭಾಷೆಗಳಿವೆ. ಇದನ್ನು ನಾನು ಪ್ರಸ್ತಾಪ ಮಾಡಿದರೆ ಸಿ.ಟಿ. ರವಿಯಂತಹ ಮತಾಂಧ ನನಗೆ ಮುಸಲ್ಮಾನನ ಹೆಸರು ಇಡುತ್ತಾನೆ. ಅಪ್ಪ, ಅಮ್ಮ ನನಗೆ ಸಿದ್ಧರಾಮಯ್ಯ ಅಂತಾ ಹೆಸರಿಟ್ಟಿದ್ದಾರೆ. ಇವನು ಯಾವ ಗಿರಾಕಿ ನನಗೆ ಮುಸಲ್ಮಾನನ ಹೆಸರು ಇಡುವುದಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ಸಿ.ಟಿ.ರವಿಗಿಂತ ಹೆಚ್ಚು ಹಿಂದೂ, ಆದರೆ ಅವನ ತರ ಬೇರೆ ಧರ್ಮವನ್ನು ದ್ವೇಷಿಸಲ್ಲ," ಎಂದು ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್
ಬಿಜೆಪಿ ದೇಶಭಕ್ತರ ಪಕ್ಷ ಅಂತಾ ಅವರು ಹೇಳುತ್ತಿದ್ದಾರೆ. ಹಾಗಾದರೆ ಮಹಾತ್ಮ ಗಾಂಧಿ, ನೆಹರೂ, ಪಟೇಲ್, ರಾಜೇಂದ್ರ ಪ್ರಸಾದ್, ಮೌಲಾನಾ ಅಜಾದ್, ಅಂಬೇಡ್ಕರ್, ಶಾಸ್ತ್ರಿ, ಇಂದಿರಾ ಗಾಂಧಿ ದೇಶಭಕ್ತರಲ್ವಾ? ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಆಗಿದೆ.1925ರಲ್ಲಿ ಹೆಡಗೇವಾರ್ ಆರ್‌ಎಸ್‌ಎಸ್ ಸ್ಥಾಪನೆ ಮಾಡಿದರು. ಆರ್‌ಎಸ್‌ಎಸ್‌ನವರು ಯಾರಾದರೂ ದೇಶಕ್ಕಾಗಿ ಹೋರಾಡಿ ಹುತಾತ್ಮರಾಗಿದ್ದಾರಾ?. ಯುವಕರು ಈ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾಂಗ್ರೆಸ್‌ನ ಲಕ್ಷಾಂತರ ಜನ ಹುತಾತ್ಮರಾಗಿದ್ದಾರೆ
1925ರಿಂದ 1947ರ ತನಕ ಎಷ್ಟು ಮಂದಿ ಆರ್‌ಎಸ್‌ಎಸ್‌ವರು ಹೋರಾಡಿ ಹುತಾತ್ಮರಾಗಿದ್ದಾರೆ ಲೆಕ್ಕ ಕೊಡಿ. ಕಾಂಗ್ರೆಸ್‌ನ ಲಕ್ಷಾಂತರ ಜನರು ಹುತಾತ್ಮರಾಗಿದ್ದಾರೆ. ಈ ಸತ್ಯವನ್ನು ಹೇಳಿದರೆ ಸಿದ್ರಾಮ್ಮುಲ್ಲಾ ಖಾನ್ ಅಂತಾ ಹೇಳುತ್ತಾರೆ ಎಂದು ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ದೇಶಭಕ್ತಿಯನ್ನು ಬಿಜೆಪಿ ಗುತ್ತಿಗೆ ಪಡೆದುಕೊಂಡಿದ್ಯಾ?
ಸಂವಿಧಾನವನ್ನು ವಿರೋಧ ಮಾಡುವವರು ದೇಶಭಕ್ತರಲ್ಲ. ಸಂವಿಧಾನದ ಪ್ರಕಾರ ನಡೆಯುವವರು ದೇಶಭಕ್ತರು. ದೇಶಭಕ್ತಿಯನ್ನುಇವರು ಗುತ್ತಿಗೆ ಹಿಡಿದುಕೊಂಡಿದ್ದಾರೆ. ಮಹಾತ್ಮಗಾಂಧಿಯವರನ್ನು ಕೊಂದವರಿಂದ ದೇಶಭಕ್ತಿಯ ಪಾಠ ಕೇಳಬೇಕಾ?. ಗಾಂಧಿ ಕೊಂದ ಗೋಡ್ಸೆಯ ಮೂರ್ತಿ ಆರಾಧಿಸಿ ಗುಡಿ ಕಟ್ಟುತ್ತಾರೆ. ನಾನು ತಂದ ಭಾಗ್ಯಗಳನ್ನು ಬಿಜೆಪಿಯವರು ನಿಲ್ಲಿಸಿದ್ದಾರೆ. ಏಳು ಕೆ.ಜಿ ಅಕ್ಕಿ ಕೊಟ್ಟರೆ ಇವರ ಗಂಟು ಹೋಗುತ್ತಿತ್ತಾ? ಬಡವರಿಗೆ ಕೊಟ್ಟ ಕಾರ್ಯಕ್ರಮಗಳನ್ನು ನಿಲ್ಲಿಸಲು ಹೋರಟಿದ್ದೀರಲ್ಲ ನಾಚಿಗೆ ಆಗಲ್ವಾ? ವಿಧಾನಸೌಧದ ಗೋಡೆಗಳು 40% ಕಮೀಷನ್ ಬಗ್ಗೆ ಮಾತನಾಡುತ್ತಿವೆ. ಇಂತಹ ಸರ್ಕಾರ ಬೇಡ ಅಂದರೆ ಕೋಮುವಾದಿ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತನ್ನಿ ಎಂದರು ಸಿದ್ಧರಾಮಯ್ಯ ಜನರಿಗೆ ಮನವಿ ಮಾಡಿದರು.

ತನ್ನ ಬಾಲ್ಯವನ್ನು ನೆನಪಿಸಿಕೊಂಡ ಸಿದ್ಧರಾಮಯ್ಯ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬೂತ್ ಮಟ್ಟದ ಕಾರ್ಯಕರ್ತರಿಗಾಗಿ ಕಬ್ಬಡಿ ಪಂದ್ಯಾವಳಿ ನಡೆದಿದ್ದು, ಈ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ತನ್ನ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಪ್ರಸನ್ನ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಕಬ್ಬಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ನಾನೂ ಶಾಲಾ ದಿನದಲ್ಲಿ ಕಬ್ಬಡಿ ಆಟವನ್ನು ಆಡುತ್ತಿದ್ದೆ. ಆ ಕಾಲದಲ್ಲಿ ನಾನು ಒಳ್ಳೆಯ ರೈಡರ್ ಆಗಿದ್ದೆ. 2005ರಲ್ಲಿ ನಡೆದ ಶಾಸಕರ ದಿನಾಚರಣೆಯಲ್ಲೂ ಟೀಂ ಮಾಡಿ ಕಬ್ಬಡಿ ಆಡಿದ್ದೆ. ಆಗ ಶಾಸಕರಾಗಿದ್ದ ವಿಶ್ವನಾಥ್ ದೈಹಿಕವಾಗಿ ತೂಕವಾಗಿದ್ದರು. ನನ್ನನ್ನು ಹಿಡಿಯಲು ಬಂದು ವಿಶ್ವನಾಥ್ ನನ್ನ ಮೇಲೆ ಬಿದ್ದಿದ್ದರು. ಆಗ ನನ್ನ ಕಾಲು ಫ್ಯಾಕ್ಚರ್ ಆಗಿತ್ತು. ನಂತರ ಕಬ್ಬಡಿ ಆಡಿಲ್ಲ ಎಂದು ತಿಳಿಸಿದರು.












Click it and Unblock the Notifications