ರಾಹುಲ್ ಗಾಂಧಿ ಕೇವಲ ವ್ಯಕ್ತಿಯಲ್ಲ, ಶಕ್ತಿ; ಯು. ಟಿ. ಖಾದರ್

ಮಂಗಳೂರು, ಜೂ 15: "ರಾಹುಲ್ ಗಾಂಧಿ ಕೇವಲ ವ್ಯಕ್ತಿಯಲ್ಲ. ಅವರು ಶಕ್ತಿ ಅನ್ನುವುದನ್ನು ಬಿಜೆಪಿ ಸರಕಾರ ಸಾಬೀತು ಮಾಡಿದೆ. ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಸರಕಾರಕ್ಕೆ ಭಯವಿದೆ. ರಾಹುಲ್ ಗಾಂಧಿ ಹೆಸರಿಗೆ ಕಳಂಕ ತರಲು ನೋಡುತ್ತಿದ್ದಾರೆ" ಎಂದು ಮಂಗಳೂರಿನಲ್ಲಿ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು. ಟಿ. ಖಾದರ್ ಹೇಳಿದರು.

ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, "ದೇಶದ ಜನ ರಾಹುಲ್ ನಾಯಕತ್ವವನ್ನು ಒಪ್ಪುತ್ತಿದ್ದಾರೆಂಬ ಭಯದಲ್ಲಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಸುಳ್ಳು ಆರೋಪಗಳನ್ನು ಮಾಡಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ" ಎಂದು ದೂರಿದರು.

"ಹಿಂದೆ ರಾಜೀವ್ ಗಾಂಧಿ ಬಗ್ಗೆ ಬೋಫೋರ್ಸ್ ಹಗರಣ ನೆಪದಲ್ಲಿ ಕಿರುಕುಳ ನೀಡಲಾಗಿತ್ತು‌. ಬೋಫೋರ್ಸ್ ಕಾರಣದಿಂದ ಕಾರ್ಗಿಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆಲ್ಲುವಂತಾಗಿತ್ತು. ರಾಜೀವ್ ಗಾಂಧಿ ತನಿಖೆಯ ಬಳಿಕ ಆರೋಪ ಮುಕ್ತರಾಗಿದ್ದಾರೆ. ರಾಹುಲ್ ಗಾಂಧಿ ಕೇವಲ ವ್ಯಕ್ತಿಯಲ್ಲ. ಅವರು ಶಕ್ತಿ ಅನ್ನುವುದನ್ನು ಬಿಜೆಪಿ ಸರಕಾರ ಸಾಬೀತು‌ ಮಾಡಿದೆ. ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಸರಕಾರಕ್ಕೆ ಭಯವಿದೆ" ಎಂದು ಯು. ಟಿ. ಖಾದರ್ ತಿಳಿಸಿದರು.

ಬಿಜೆಪಿ ರಾಹುಲ್ ವ್ಯಕ್ತಿತ್ವಕ್ಕೆ ಕಳಂಕ ತರುವ ಕೆಲಸ

ಬಿಜೆಪಿ ರಾಹುಲ್ ವ್ಯಕ್ತಿತ್ವಕ್ಕೆ ಕಳಂಕ ತರುವ ಕೆಲಸ

"ರಾಹುಲ್ ಗಾಂಧಿಯವರ ಬದ್ಧತೆ, ವಾಕ್ ಚಾತುರ್ಯ, ವಿಷಯ ಜ್ಞಾನದ ಬಗ್ಗೆ ಬಿಜೆಪಿಗೆ ಭಯ ಇದೆ. ಆದರೆ ಜನ ಸತ್ಯದ ವಿಚಾರವನ್ನು ಅರಿತುಕೊಳ್ಳುತ್ತಾರೆ. ದೂರದರ್ಶಿತ್ವದ ನಾಯಕತ್ವವನ್ನು ಜನ ಒಪ್ಪುತ್ತಾರೆ. ಬಿಜೆಪಿ ರಾಹುಲ್ ವ್ಯಕ್ತಿತ್ವಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ ಇದು ಜಾಸ್ತಿ ದಿನ ನಡೆಯೋದಿಲ್ಲ. ಜನ ಸತ್ಯವನ್ನು ಅರಿತುಕೊಳ್ಳುತ್ತಾರೆ. ರಾಜಕೀಯ ಪ್ರೇರಿತ ಸುಳ್ಳು ಆರೋಪ, ಇಲ್ಲಸಲ್ಲದ ಆರೋಪಗಳ ಬಗ್ಗೆ ಜನ ತಿಳಿದುಕೊಳ್ಳುತ್ತಾರೆ. ಇಂದು ಪಾಕಿಸ್ತಾನ ಗಡಿಯಿಂದ 250 ಕಿಲೋ ಆರ್ ಡಿಎಕ್ಸ್ ತಂದಿಟ್ಟರೂ ಸರ್ಕಾರಕ್ಕೆ ತಿಳಿಯೋದಿಲ್ಲ. ಇವತ್ತು ಚುನಾವಣೆ ಕಾಲದಲ್ಲಿ ನಾಯಕರ ಮೇಲೆ ಟಾರ್ಗೆಟ್ ಪಾಲಿಟಿಕ್ಸ್ ನಡೆಯುತ್ತಿದೆ. ಎಫ್‌ಐಆರ್ ಇಲ್ಲದೇ ರಾಜಕೀಯ ನಾಯಕರನ್ನು ಚುನಾವಣೆ ಸಂದರ್ಭದಲ್ಲಿ ಕಿರುಕುಳ ನೀಡುತ್ತಿರುವುದು ಸರಿಯಲ್ಲ. ಬಿಜೆಪಿ ಸರಕಾರದಲ್ಲಿ ಪತ್ರಕರ್ತರು ಸೇರಿದಂತೆ ಯಾರು ಕೂಡ ನೆಮ್ಮದಿ ಇಲ್ಲದಂತಾಗಿದ್ದಾರೆ" ಅಂತಾ ವಿಪಕ್ಷ ಉಪ ನಾಯಕ ಯು. ಟಿ. ಖಾದರ್ ಹೇಳಿದ್ದಾರೆ.

ಸಮಾಜದ್ರೋಹಿಗೆ ಕ್ಷಮೆ ಯಾಕೆ ನೀಡಬೇಕು: ಖಾದರ್

ಸಮಾಜದ್ರೋಹಿಗೆ ಕ್ಷಮೆ ಯಾಕೆ ನೀಡಬೇಕು: ಖಾದರ್

ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ರಾಷ್ಟ್ರದ್ಯಾಂತ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಯು. ಟಿ. ಖಾದರ್, "ದ್ವೇಷದ ಮಾತು, ಧರ್ಮನಿಂದನೆ ಭಾರತವನ್ನು ಯಾವ ಕಾಲ ಘಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ವಿದೇಶಗಳ ಮುಂದೆ ಭಾರತ ತಲೆ ತಗ್ಗುವಂತೆ ಮಾಡಿದೆ. ಯಾರೋ ಒಬ್ಬಾಕೆ ಸಮಾಜದ್ರೋಹಿ ಮಾಡಿದ ನಿಂದನೆಗೆ ಭಾರತ ಯಾಕೆ ಕ್ಷಮೆ ಕೇಳಬೇಕು. ಭಾರತದ ಜನರು ಕ್ಷಮೆ ಕೇಳುವಂತಹ ತಪ್ಪು ಏನು ಮಾಡಿದ್ದಾರೆ. ನೂಪುರ್ ಶರ್ಮಾರನ್ನು ಮೊದಲು ಒದ್ದು ಒಳಗೆ ಹಾಕಬೇಕು. ಸಮಾಜದ್ರೋಹಿಗೆ ಕ್ಷಮೆ ಯಾಕೆ ನೀಡಬೇಕು. ಅವರ ಮೇಲೆ ಕಾನೂನು ಕ್ರಮ ತಡವಾಗುತ್ತಿದೆ. ಆದರೆ‌ ನಾನು ಗಲಾಟೆಯನ್ನು ಸಮರ್ಥಿಸೋದಿಲ್ಲ. ಅಶಾಂತಿ ಸೃಷ್ಠಿಸುವವರ ವಿರುದ್ಧ ಕ್ರಮ ಆಗಬೇಕು. ಅವರಿಗಾದ ನೋವು ಶಾಂತಿಯುತವಾಗಿ ವ್ಯಕ್ತಪಡಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಪ್ರತಿಭಟನೆ ಯೂ ನಡೆಯೋದಿಲ್ಲ. ಈ ಬಗ್ಗೆ ಖಾಝಿ, ಧರ್ಮ ಗುರುಗಳು ತೀರ್ಮಾನ ಮಾಡುತ್ತಾರೆ. ಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ಬರೆದು ಹಾಕುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ" ಎಂದು ಖಾದರ್ ಹೇಳಿದರು.

ಕೆ. ಎಸ್‌. ಈಶ್ವರಪ್ಪ ಮೇಲಿನ ಕೇಸ್‌ ತನಿಖೆ ಪೂರ್ಣಗೊಳಿಸಲಿ

ಕೆ. ಎಸ್‌. ಈಶ್ವರಪ್ಪ ಮೇಲಿನ ಕೇಸ್‌ ತನಿಖೆ ಪೂರ್ಣಗೊಳಿಸಲಿ

"ರಾಹುಲ್‌ ಗಾಂಧಿ ಮೂರನೇ ದಿನ ಕೂಡ ವಿಚಾರಣೆ ಹೋಗಿದ್ದಾರೆ. ನ್ಯಾಷನಲ್‌ ಹೆರಾಲ್ಡ್‌ನ ಯಾವ ಕೇಸ್‌ನಲ್ಲಿ ವಿಚಾರಣೆ ಮಾಡ್ತಿದ್ದಾರೆ ಎಂಬುದು ಬಿಜೆಪಿಯವರಿಗೂ ತಿಳಿದಿಲ್ಲ, ಇಡಿಯವರಿಗೂ ತಿಳಿದಿಲ್ಲ" ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಕಲಬುರಗಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜಾರಿ ನಿರ್ದೇಶನಾಲಯ ಯಾರ ಅಣತಿಯಂತೆ ನಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಮೊದಲು ಮಾಜಿ ಸಚಿವ ಕೆ. ಎಸ್‌. ಈಶ್ವರಪ್ಪ ಮೇಲೆ ಕೇಸ್‌ ದಾಖಲಾಗಿತ್ತು. ಮೊದಲು ಅದರ ತನಿಖೆ ಪೂರ್ಣಗೊಳಿಸಲಿ" ಎಂದರು.


"ಎರಡು ವಿಚಾರಣೆಗೆ ಹಾಜರಾಗಿದ್ದರು, ಇನ್ನೂ ಪ್ರಶ್ನೆಗಳು ಪೂರ್ಣಗೊಳ್ಳದ ಕಾರಣ ಇಂದು ಕೂಡ ವಿಚಾರಣೆಯನ್ನು ಎದುರಿಸಬೇಕಿದೆ ಎಂದರು. 90 ಕೋಟಿ ರೂ. ಸಾಲ ನ್ಯಾಷನಲ್‌ ಹೆರಾಲ್ಡ್‌ಗೆ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಸಾಲ ಕೊಡಬಾರದು ಎಂದು ಎಲ್ಲಾದರೂ ಕಾನೂನು ಇದೆಯಾ?. ಅವರು ಕೊಟ್ಟ ಹಣದಲ್ಲಿ 60 ಕೋಟಿ ರೂ. ಖರ್ಚಾಗಿದೆ. ಉಳಿದ ಹಣ ಮೂಲ ಸೌಕರ್ಯ ಕಲ್ಪಿಸಕೊಳ್ಳಲು ನೀಡಿದ್ದಾರೆ" ಎಂದು ಹೇಳಿದರು.

ಚುನಾವಣೆ ಸಮೀಪ ಬರುತ್ತಿದ್ದಂತೆ ರಾಹುಲ್‌ ಗಾಂಧಿ ಕಾಣುತ್ತಾರೆ

ಚುನಾವಣೆ ಸಮೀಪ ಬರುತ್ತಿದ್ದಂತೆ ರಾಹುಲ್‌ ಗಾಂಧಿ ಕಾಣುತ್ತಾರೆ

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸತತ ಮೂರನೇ ದಿನವಾದ ಇಂದು ಮತ್ತೆ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆ ಹಾಜರಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪವನ್ನು ಎದುರಿಸುತ್ತಿದ್ದಾರೆ.

"ಸೋನಿಯಾ ಗಾಂಧಿಗೂ ಇಡಿ ಸಮನ್ಸ್ ನೀಡಿದ್ದು, ಕೋವಿಡ್ ಕಾರಣದಿಂದಾಗಿ ಅವರು ವಿಚಾರಣೆಗೆ ಗೈರಾಗಿದ್ದಾರೆ. ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ಕಾರ್ಯಕರ್ತರು ದೇಶದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಯಾವ ಕಾನೂನಿನಡಿ ಜಾರಿ ನಿರ್ದೇಶನಾಲಯದವರು ಬಂಧನ ಮಾಡುತ್ತಾರೆ?" ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+