ಬಂಟ್ವಾಳ; ಬಾಲಕಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್!
ಮಂಗಳೂರು, ಅಕ್ಟೋಬರ್ 10: ಬಂಟ್ವಾಳದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅತ್ಯಾಚಾರಕ್ಕೊಳಗಾದ ಬಾಲಕಿಯ ಅಪಹರಣ ನಡೆದಿಲ್ಲ. ಆರೋಪಿಗಳ ಬಳಿ ಬಾಲಕಿಯೇ ತೆರಳಿದ್ದಳು. ಮಂಗಳೂರಿನ ಲಾಡ್ಜ್‌ನಲ್ಲಿ ಅತ್ಯಾಚಾರ ನಡೆದಿತ್ತು ಎನ್ನುವುದು ಪೊಲೀಸರ ತನಿಖೆಯಿಂದ
ಧೃಡಪಟ್ಟಿದೆ.
ಬಂಟ್ವಾಳದ ಅಮ್ಟಾಡಿಯ 16 ವರ್ಷದ ಬಾಲಕಿಗೆ ಮತ್ತು ಬರುವ ಚಾಕಲೇಟ್ ನೀಡಿ ಅಪಹರಣ ಮಾಡಲಾಗಿತ್ತು. ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಬಾಲಕಿಯನ್ನು ಕಾರಿನಲ್ಲಿ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಬಿಡಲಾಗಿತ್ತು ಎಂಬ ಸುದ್ದಿ ಹಬ್ಬಿತ್ತು.
ಬಂಟ್ವಾಳದ ಈ ಗ್ಯಾಂಗ್‌ರೇಪ್ ಪ್ರಕರಣದ ರಾಜ್ಯದಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ ಪೊಲೀಸ್ ತನಿಖೆ ಈ ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ. ಪೊಲೀಸರು ನಾಲ್ವರು ಆರೋಪಿಗಳನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದು, ಪ್ರಕರಣದ ಪಿನ್ ಟು ಪಿನ್ ಮಾಹಿತಿ ತೆರೆದಿಟ್ಟಿದ್ದಾರೆ.

ಆಗಿದ್ದೇನು?; ಅಕ್ಟೋಬರ್ 8ರಂದು ಈ ಘಟನೆ ನಡೆದಿದ್ದು, ಮಂಗಳೂರಿನ ಸಿಟಿ ಮಹಲ್ ಬಳಿ ಬಾಲಕಿ ಆರೋಪಿಗಳನ್ನು ಭೇಟಿಯಾಗಿದ್ದಾಳೆ. ಬಾಲಕಿ ಆರೋಪಿಗಳಲ್ಲಿ ಒಬ್ಬನಾದ ಉಡುಪಿ ಜಿಲ್ಲೆಯ ಕಾಪು ನಿವಾಸಿ ಶರತ್ ಶೆಟ್ಟಿ ಎಂಬಾತನ ಫೇಸ್ ಬುಕ್ ಸ್ನೇಹಿತೆಯಾಗಿದ್ದಳು.
ಆಬಳಿಕ ಮೊಬೈಲ್‌ನಲ್ಲಿ ಇಬ್ಬರ ನಡುವೆ ಸಲುಗೆಯ ಮಾತುಕತೆಯಾಗಿದೆ. ಆರೋಪಿ ಶರತ್ ಬಾಲಕಿಯನ್ನು ತನ್ನ ಸ್ನೇಹಿತ ಮಾರುತಿ ಮಂಜುನಾಥ್‌ಗೆ ಪರಿಚಯ ಮಾಡಿಕೊಟ್ಟಿದ್ದಾನೆ. ಬಳಿಕ ಬಾಲಕಿ ಮಂಜುನಾಥ್ ಜೊತೆಗೆ ಸಲುಗೆಯಿಂದ ಇದ್ದಳು. ಮಂಜುನಾಥ್ ಜೊತೆ ವಾಟ್ಸಪ್‌ನಲ್ಲಿ ಅಶ್ಲೀಲ ವಿಡಿಯೋ ಚಾಟ್ ಕೂಡಾ ಮಾಡಿದ್ದಳು.
ಅಕ್ಟೋಬರ್ 8ರಂದು ಬಾಲಕಿಯನ್ನು ಆರೋಪಿ ಶರತ್ ಶೆಟ್ಟಿ ಮಂಗಳೂರಿಗೆ ಬರಲು ಹೇಳಿದ್ದಾಳೆ. ನಗರದ ಸಿಟಿ ಮಹಲ್ ಬಳಿ ಭೇಟಿಯಾದ ಇವರು ಬಳಿಕ ಲಾಡ್ಜ್‌ಗೆ ತೆರಳಿದ್ದಾರೆ. ಲಾಡ್ಜ್ ನಲ್ಲಿ ಶರತ್ ಶೆಟ್ಟಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದು, ಬಳಿಕ ಶರತ್ ಶೆಟ್ಟಿ ತನ್ನ ಸ್ನೇಹಿತ ಇದಾಯತ್ತುಲ್ಲನಿಗೆ ಕರೆ ಮಾಡಿ ಬರಲು ಹೇಳಿದ್ದಾನೆ.
ಇದಾಯುತ್ತಲ್ಲನೂ ಬಾಲಕಿಯ ಅತ್ಯಾಚಾರ ಮಾಡಿ ತೆರಳಿದ್ದಾನೆ. ಅತ್ಯಾಚಾರ ಮಾಡಲು ಅವಕಾಶ ನೀಡಿದ್ದ ಲಾಡ್ಜ್ ಸಿಬ್ಬಂದಿ ಸತೀಶ್, ಇಬ್ಬರು ಅತ್ಯಾಚಾರ ಮಾಡಿದ ಬಳಿಕ ಬಾಲಕಿಗೆ ಲೈಂಗಿಕ ಶೋಷಣೆ ಮಾಡಿದ್ದಾನೆ. ನಂತರ ಬಾಲಕಿ ಮಂಗಳೂರಿನಿಂದ ಬಸ್ ಮೂಲಕ ಬಂಟ್ವಾಳಕ್ಕೆ ತೆರಳಿದ್ದಾಳೆ. ಅತ್ಯಾಚಾರವಾದ ಬಗ್ಗೆ ಸ್ಥಳೀಯನೋರ್ವನ ಬಳಿ ಹೇಳಿ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ.
ಬಾಲಕಿ ದೂರು ದಾಖಲು ಮಾಡುತ್ತಿದ್ದಂತೆಯೇ ಪೊಲೀಸ್ ತಂಡಗಳು ಆರೋಪಿಗಳ ಹೆಡೆಮುರಿ ಕಟ್ಟಿದೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ಕಾಪು ನಿವಾಸಿ ಕೆ. ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸಿಬ್ಬಂದಿ ಸತೀಶ್ ಮತ್ತು ಇದಾಯುತ್ತಲ್ಲನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸಕ್ಷನ್ 366 (A), 376 (D), 506 ಮತ್ತು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.












Click it and Unblock the Notifications