ಮಂಗಳೂರು: ಬಲೆಗೆ ಬಿದ್ದ 75 ಕೆ.ಜಿ. ತೂಕದ ಬೃಹತ್ ಮೀನು, ಇದರ ಮೌಲ್ಯ ಎಷ್ಟು ಗೊತ್ತಾ?
ಮಂಗಳೂರು, ಸೆಪ್ಟೆಂಬರ್, 28: ಮಂಗಳೂರಿನ ಸೋಮೇಶ್ವರ ಉಚ್ಚಿಲ ಸಮುದ್ರ ತಟದ ಸಮೀಪ ನಿನ್ನೆ (ಸೆಪ್ಟೆಂಬರ್ 27) ಸಂಜೆ ವೇಳೆ ಮೀನುಗಾರರು ಬೀಸಿದ ಬಲೆಗೆ 75 ಕೆ.ಜಿ. ತೂಕದ ದೈತ್ಯಗಾತ್ರದ ಪಿಲಿ ತೊರಕೆ ಮೀನೊಂದು ಬಿದ್ದಿದೆ.
ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬುವರು ಸಮುದ್ರ ತೀರದಲ್ಲಿ ಬಲೆ ಹಾಕಿದ್ದರು. ಆಗ ಈ ಪಿಲಿ ತೊರಕೆ ಮೀನು ಈ ವೇಳೆ ಬಲೆಗೆ ಬಿದ್ದಿದೆ. ಈ ಬಾರಿ ತಮ್ಮ ಮೀನುಗಾರಿಕೆಯಲ್ಲಿ ದೊರೆತ ಅತಿದೊಡ್ಡ ಮೀನು ಇದಾಗಿದೆ ಎಂದು ಮೀನುಗಾರರು ಹೇಳಿದ್ದಾರೆ.

ಪ್ರತಿವರ್ಷದಂತೆ ಈ ಬಾರಿಯೂ ಸಮುದ್ರದಲ್ಲಿ ಕೆಸರಿನಂತಹ ಅಲೆಗಳು ಬರುತ್ತಿದೆ. ಈ ನೀರಿಗೆ ಮೀನುಗಾರಿಕೆಯಲ್ಲಿ ಅತ್ಯಂತ ಪಾವಿತ್ರ್ಯತೆ ಇದೆ. ಅದರಲ್ಲಿ ಹಲವು ಬಗೆಯ ಮೀನುಗಳು ಬರುವ ಐತಿಹ್ಯವಿದೆ. ಆದರೆ ಈ ಬಾರಿ ದೊಡ್ಡ ಗಾತ್ರದ ಪಿಲಿತೊರಕೆ ಬಂದಿರುವುದು ಮೀನುಗಾರರಲ್ಲಿ ಉತ್ಸಾಹ ಮೂಡಿಸಿದೆ. ವ್ಯಾಪಾರ ಮಾಡುತ್ತಿದ್ದರೆ ಕೆ.ಜಿ.ಗೆ 200 ರೂಪಾಯಿಯಷ್ಟು ಮೌಲ್ಯವಿರುವ ಮೀನು ಇದಾಗಿದೆ. ಆದರೆ ಈದ್ ಮಿಲಾದ್ ಹಬ್ಬ ಇರುವುದರಿಂದ ಈ ಮೀನನ್ನು ವ್ಯಾಪಾರ ಮಾಡದೇ, ಮೀನುಗಾರರು ತಮ್ಮೊಳಗೆ ಹಂಚಿಕೊಂಡಿದ್ದಾರೆ.
ಬೆಲೆಗೆ ಬಿತ್ತು ಬೃಹತ್ ಬಂಗುಡೆ ಮೀನು
ಇತ್ತೀಚೆಗಷ್ಟೆ 48 ಸೆ.ಮೀಟರ್ ಉದ್ದದ ಬೃಹತ್ ಬಂಗುಡೆ ಮೀನೊಂದು ಕಾರವಾರದ ಮೀನುಗಾರರಿಗೆ ಸಿಕ್ಕಿದ್ದು, ದೇಶದಲ್ಲಿಯೇ ಈವರೆಗೆ ಸಿಕ್ಕಿರುವ ಬಂಗುಡೆ ಮೀನುಗಳ ಪೈಕಿ ಇದು ಅತೀ ದೊಡ್ಡ ಮೀನಾಗಿದೆ.
ಭಾರತದಲ್ಲಿ ಇದುವರೆಗೆ ಪತ್ತೆಯಾದ ಬಂಗಡೆಗಳಲ್ಲೇ ಅತೀ ದೊಡ್ಡದಾದ ಹಾಗೂ ಉದ್ದವಾದ ಬಂಗಡೆ ಇದಾಗಿದೆ. ಕಾರವಾರದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಆನಂದು ರಾಮಾ ಹರಿಕಂತ್ರ ಅವರಿಗೆ ಸಂಬಂಧಪಟ್ಟ, ಎಂ.ಐ. ಇಂಜೀನ ಹೊಂದಿದ ಪಾತಿ ದೋಣಿಯ ಬೀಡು ಬಲೆಗೆ ಬಿದ್ದ ಮೀನುಗಳಲ್ಲಿ ಒಂದು ದೊಡ್ಡ ಗಾತ್ರದ ಬಂಗಡೆ ಮೀನು ದೊರೆತಿತ್ತು.
ಈ ಬಂಗುಡೆ 48 ಸೆಂಟಿ ಮೀಟರ್ ಉದ್ದವಿದ್ದು ಸುಮಾರು 12 ಸೆಂ.ಮೀ ಅಗಲವಿದೆ. ಅಲ್ಲದೇ ಬರೋಬ್ಬರಿ 1.2 ಕೆ.ಜಿ. ತೂಕವಿದ್ದು, ಪಶ್ಚಿಮ ಕರಾವಳಿ ಭಾಗದಲ್ಲಿ ಸಿಕ್ಕಿರುವುದರಲ್ಲಿ ಇದು ಅತೀ ಹೆಚ್ಚು ತೂಕದ್ದಾಗಿದೆ. ಈ ಹಿಂದೆ 36 ಸೆಂ.ಮೀ. ಗಂಡು ಬಾಂಗುಡೆ, 42 ಸೆಂ.ಮೀ. ಹೆಣ್ಣು ಬಂಗುಡೆ ಸಿಕ್ಕಿರುವುದು ದಾಖಲೆಯಾಗಿದ್ದು, ಈಗ ಸಿಕ್ಕಿರುವುದು ಅವೆರಡಕ್ಕಿಂತ ದೊಡ್ಡದಿದೆ. ಸಾಮಾನ್ಯವಾಗಿ ದೊಡ್ಡ ಬಂಗುಡೆ 25 ರಿಂದ 30 ಸೆಂ.ಮೀ ಮಾತ್ರ ಬೆಳೆಯುತ್ತದೆ. ಹೀಗಾಗಿ ಈಗ ಸಿಕ್ಕಿರುವ ಮೀನು ದಾಖಲೆಯಾಗಿದೆ.
ಇನ್ನು ಭಾರತದಲ್ಲಿ ದೊರೆತ ಬಂಗಡೆ ಮೀನುಗಳಲ್ಲಿ ಅತ್ಯಂತ ದೊಡ್ಡದಾದ ಬಂಗಡೆ ಮೀನು ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಬಂಗಡೆ ಮೀನನ್ನು ಮಾರಾಟ ಮಾಡದೇ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ನೀಡುವ ಶ್ಲಾಘನೀಯ ನಿರ್ಧಾರವನ್ನು ಮೀನುಗಾರರು ತೆಗೆದುಕೊಂಡಿದ್ದಾರೆ. ಈ ಬಂಗಡೆ ಮೀನನ್ನು ಕೋಲ್ಡ್ ಸ್ಟೋರೆಜ್‌ನಲ್ಲಿ ಇರಿಸಲಾಗಿತ್ತು. ಸೋಮವಾರ ಮರೈನ್ ಬಯೋಲಜಿ ವಿಭಾಗದ ಪ್ರಾಧ್ಯಾಪಕ ಶಿವಕುಮಾರ್ ಹರಗಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ತಂಡ ಬೈತಖೋಲಕ್ಕೆ ಭೇಟಿ ನೀಡಿ ಮೀನನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಶಿವಕುಮಾರ್ ಹರಗಿ, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ವೀಕ್ಷಣೆಗೆ, ಅಧ್ಯಯನಕ್ಕೆ ಅನುಕೂಲವಾಗುವಂತೆ ಫಾರ್ಮಾಲಿನ್ ಹಾಕಿ ಈ ಬಂಗಡೆ ಮೀನನ್ನು ಸಂರಕ್ಷಿಸಿ ಇಡಲಾಗುವುದು. ಮೀನುಗಾರರೂ ಸಹ ಇಷ್ಟು ದೊಡ್ಡ ಬಂಗುಡೆ ಕಂಡು ಖುಷಿಯಾಗಿದ್ದು, ಇತರರಿಗೂ ನೋಡಲು ಅವಕಾಶ ಸಿಗಲಿ ಎನ್ನುವ ಉದ್ದೇಶದಿಂದ ಮರೈನ್ ಬಯೋಲಜಿ ವಿಭಾಗಕ್ಕೆ ಮೀನನ್ನು ಹಸ್ತಾಂತರಿಸಿದ್ದಾರೆ ಎಂದು ಮರೈನ್ ಬಯೋಲಜಿ ವಿಭಾಗದ ಪ್ರಾಧ್ಯಾಪಕ ಶಿವಕುಮಾರ್ ಹರಗಿ ತಿಳಿಸಿದ್ದಾರೆ.
ಬಲೆಗೆ ಬಿದ್ದ 56 ಕೆ.ಜಿ.ತೂಕದ ಬೃಹತ್ ಮೀನು
ಇನ್ನೂ ಇತ್ತೀಚೆಗಷ್ಟೇ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಭದ್ರಾ ಹಿನ್ನೀರಿನಲ್ಲಿ 56 ಕೆ.ಜಿ.ತೂಕದ ಬೃಹತ್ ಮೀನೊಂದು ಬಲೆಗೆ ಬಿದ್ದಿತ್ತು.
ಭದ್ರಾ ಹಿನ್ನೀರಿನಲ್ಲಿ ಸಿಕ್ಕ 56 ಕೆ.ಜಿ.ತೂಕದ ಕಾಟ್ಲಾ ಮೀನನ್ನು ಫೈರೋಜ್ ಎಂಬುವವರ ಅಂಗಡಿಗೆ ತರಲಾಗಿದ್ದು, ಇದನ್ನು 4 ಜನ ಸೇರಿ 12 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದರು.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ












Click it and Unblock the Notifications