ಸಿಎಎ ಬೆಂಬಲಿಸಿ ಮಂಗಳೂರಲ್ಲಿಂದು ಬೃಹತ್ ಸಮಾವೇಶ: ರಾಜನಾಥ್ ಸಿಂಗ್ ಭಾಗಿ
ಮಂಗಳೂರು, ಜನವರಿ 27: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಭಾರತೀಯ ಜನತಾ ಪಕ್ಷವು ಇಂದು ಮಂಗಳೂರಿನಲ್ಲಿ ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ.
ಬಿಜೆಪಿ ಪಕ್ಷವು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ದೇಶಾದ್ಯಂತ ಕೈಗೊಳ್ಳಲಾಗಿದ್ದ, ಮಂಗಳೂರಿನ ಸಮಾವೇಶದಲ್ಲಿ ರಾಜನಾಥ್ ಸಿಂಗ್ ಅವರಿಗೆ ಕೇಂದ್ರ ಸಚಿವರಾದ ಸದಾನಂದಗೌಡ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಮತೆ ಇತರ ನಾಯಕರು ಸಾಥ್ ನೀಡಲಿದ್ದಾರೆ.
ಮಂಗಳೂರು ನಗರ ಹೊರವಲಯದ ಬಂಗ್ರ ಕುಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ.

ಸಿಎಎ ಜನಜಾಗೃತಿ ಸಮಾವೇಶ ಕಾರಣ ಮಂಗಳೂರಿನ ಹಲವೆಡೆ ಸಂಚಾರ ಮಾರ್ಗ ಬದಲಾವಣೆ ಮಾಡಿದೆ. ಬೆಳಗ್ಗೆ 9 ರಿಂದ ರಾತ್ರಿ 9 ರ ವರೆಗೂ ಮಾರ್ಗ ಬದಲಾವಣೆಯನ್ನು ಮಂಗಳೂರು ಸಂಚಾರಿ ಪೊಲೀಸರು ಮಾಡಿದ್ದಾರೆ.
ಉಡುಪಿಯಿಂದ ಬೆಂಗಳೂರಿಗೆ ಹೋಗುವವರು ಪಡುಬಿದ್ರೆ, ಕಾರ್ಕಳ, ಧರ್ಮಸ್ಥಳ, ಶಿರಾಡಿ ಘಾಟ್ ಮೂಲಕ ಹೋಗಬೇಕು. ಬೆಂಗಳೂರಿನಿಂದ ಉಡುಪಿ ಹೋಗುವವರು ಕೂಡ ಇದೇ ಮಾರ್ಗ ಅನುಸರಿಸರಿಸಬೇಕು.
ಮಂಗಳೂರಿನಿಂದ ಉಡುಪಿ ಹೋಗುವವರು ಕೈಕಂಬ, ಮೂಡಬಿದರೆ ಮೂಲಕ ಉಡುಪಿ ತಲುಪಬಹುದು ಎಂದು ಮಂಗಳೂರು ನಗರ ಪೊಲೀಸರಿಂದ ಟ್ರಾಫಿಕ್ ಅಡ್ವೈಜರಿಯಲ್ಲಿ ಹೇಳಲಾಗಿದೆ.











Click it and Unblock the Notifications