ಭಾರತ್ ಬಂದ್: ಕರಾವಳಿಯಲ್ಲಿ ತಟ್ಟಿದ ಪ್ರತಿಭಟನೆಯ ಬಿಸಿ

ಮಂಗಳೂರು, ಸೆಪ್ಟೆಂಬರ್‌ 10: ಭಾರತ್ ಬಂದ್ ಕಾವು ಕರಾವಳಿ ಭಾಗದಲ್ಲಿ ತೀವ್ರವಾಗಿ ತಟ್ಟಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಎಡಪಕ್ಷಗಳ ಕಾರ್ಯಕರ್ತರು ಮಂಗಳೂರು, ಉಡುಪಿ ಮುಂತಾದೆಡೆ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೆಲವೆಡೆ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದ್ದು, ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಹಾಗು ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಸೋಮವಾರ ಬೆಳಗ್ಗೆ ಬಂಟ್ವಾಳದಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕರು ಯಾವುದೇ ತೊಂದರೆಗೊಳಗಾಗದೆ ಪಾರಾಗಿದ್ದಾರೆ.

ಪಂಪ್‌ವೆಲ್‌ನಿಂದ ಗ್ಯಾರೇಜ್‌ನತ್ತ ಹೋಗುತ್ತಿದ್ದ ಖಾಲಿ ಖಾಸಗಿ ಬಸ್‌ ಮೇಲೆ ಕೂಡ ಪಿವಿಎಸ್‌ನಲ್ಲಿ ಕಲ್ಲು ತೂರಾಟ ನಡಸಲಾಗಿದೆ.

Bharat bandh: stone pelting on buses at mangaluru

ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಬಳಿಯ ಕೋಡಾಜೆಯಲ್ಲಿ ಕಿಡಿಗೇಡಿಗಳು ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಸಂಚಾರಕ್ಕೆ ಅಡ್ಡಿ ಪಡಿಸಿದರು. ಬಳಿಕ ಪೊಲೀಸರು ಬೆಂಕಿ ನಂದಿಸಿ ಟೈರ್‌ಗಳನ್ನು ತೆರವುಗೊಳಿಸಿದರು.

ಬಂಟ್ವಾಳದ ಕಲ್ಲಡ್ಕದಲ್ಲಿ ರಸ್ತೆ ಮಧ್ಯೆ ಟೈರ್‌ಗೆ ಬೆಂಕಿಹಾಕಿ ಕಿಡಿಗೇಡಿಗಳು ಪ್ರಯತ್ನಿಸಿದರು. ಮಂಗಳೂರು ಹೊರವಲಯದ ಕುಲಶೇಖರ ಬಳಿ ರಸ್ತೆಯಲ್ಲಿ ಕೂಡ ಟೈರ್‌ಗೆ ಬೆಂಕಿ ಹಚ್ಚುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು.

Bharat bandh: stone pelting on buses at mangaluru

ಮಂಗಳೂರಿನ ಕದ್ರಿ ಶಿವಭಾಗ್‌ನಲ್ಲಿ ಶಿವಭಾಗ್ ಹೊಟೇಲ್ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಬೈಕಿನಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಯೊಬ್ಬ ಕಲ್ಲು ತೂರಿ ಓಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಂದ್‌ಗೆ ಕರೆ ನೀಡಿದ್ದರೂ ಮಂಗಳೂರಿನ ವಿವಿಧೆಡೆ ಹೋಟೆಲ್‌ಗಳು ತೆರೆದು ವ್ಯಾಪಾರ ವಹಿವಾಟು ನಡೆಸಿದ್ದವು. ಕೆಲವೆಡೆ ಪ್ರತಿಭನಾಟಕಾರರು ಬಲವಂತವಾಗಿ ಹೋಟೆಲ್‌ಗಳನ್ನು ಮುಚ್ಚಿಸಿದ್ದಾರೆ.

Bharat bandh: stone pelting on buses at mangaluru

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಖಾಸಗಿ ಬಸ್ ಸಂಚಾರ ಸ್ಥಗಿತವಾಗಿದೆ. ಮುಂಜಾನೆಯಿಂದಲೇ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಮಂಗಳೂರು ನಗರದಲ್ಲಿ ಖಾಸಗಿ ಸಿಟಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಅಲ್ಲಲ್ಲಿ ಆಟೋಗಳ ಓಡಾಟ ಕಂಡುಬಂದಿದೆ. ಜಿಲ್ಲೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಂಚಾರಕ್ಕೆ ತೊಂದರೆಯಾಗದಂತೆ ದಕ್ಷಿಣ ಕನ್ನಡದಲ್ಲಿ ಹೆದ್ದಾರಿ ಉದ್ದಕ್ಕೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+