ಮಂಗಳೂರಿನಲ್ಲಿ ಅಮಲೇರಿಸುವ ತಿನಿಸು: ಭಾಂಗ್ ಚಾಕಲೇಟ್ ಮಾರುತ್ತಿದ್ದ ಅಂಗಡಿ ಮಾಲೀಕ ಹೇಳಿದ್ದೇನು?
ಮಂಗಳೂರು, ಜುಲೈ 21: ಮಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಮಲು ಭರಿಸುವ ಭಾಂಗ್ ಚಾಕಲೇಟ್‌ಗಳ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರು ನಗರದ ಕಾರ್ ಸ್ಟ್ರೀಟ್ ಹಾಗು ಹೈಲ್ಯಾಂಡ್ ಎಂಬಲ್ಲಿನ ಅಂಗಡಿಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು ಮಾದಕ ವಸ್ತು ಮಿಶ್ರಿತ ಭಾಂಗ್ ಚಾಕಲೇಟ್‌ಗಳನ್ನು ಪತ್ತೆ ಹಚ್ಚಿದ್ದಾರೆ.
ಆರೋಪಿಗಳು ಉತ್ತರ ಭಾರತದಿಂದ ಈ ಮತ್ತು ಭರಿಸುವ ಭಾಂಗ್ ಚಾಕಲೇಟ್‌ಗಳನ್ನು ತಂದು ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಸದ್ಯ ಆರೋಪಿಗಳಿಂದ 100 ಕೆ.ಜಿ ಭಾಂಗ್ ಚಾಕಲೇಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಮಂಗಳೂರಿನಲ್ಲಿ ಭಾಂಗ್ ಚಾಕಲೇಟ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಕಲೇಟ್ ಮಾರಾಟ ಮಾಡಿದ ಇಬ್ಬರು ಅಂಗಡಿ ಮಾಲಿಕರಿಗೆ ಪೊಲೀಸರು ನೊಟೀಸ್ ನೀಡಿದ್ದಾರೆ. ಪೊಲೀಸರ ನೊಟೀಸ್ ಬಗ್ಗೆ ರಥಬೀದಿಯ ಪೂಜಾ ಸಾಮಾಗ್ರಿಗಳ ಅಂಗಡಿಯ ಮಾಲೀಕ ಮನೋಹರ್ ಶೇಟ್ ಪ್ರತಿಕ್ರಿಯೆ ನೀಡಿದ್ದಾರೆ.
ವೆಂಕಟರಮಣ ದೇವಸ್ಥಾನದ ರಥೋತ್ಸವಕ್ಕೆ ಭಾಂಗ್ ಚಾಕಲೇಟ್‌ಗೆ ಬೇಡಿಕೆ ಇತ್ತು. ಇಲ್ಲಿ ಜನರು ಭಾಂಗ್ ಚಾಕಲೇಟ್ ತರಲು ಬೇಡಿಕೆ ಇಟ್ಟಿದ್ದರು. ಉತ್ತರ ಪ್ರದೇಶದಿಂದ ಈ ಚಾಕಲೇಟ್ ಕಾಮನ್ ಆಗಿದೆ. ಮೆಡಿಟೇಷನ್‌ಗಾಗಿ ಈ ಚಾಕಲೇಟ್ ಅನ್ನು ಬಳಸುತ್ತಾರೆ. ನನಗೆ ಇಲ್ಲಿ ಮಾರಾಟ ಮಾಡೋದು ಅಪರಾಧ ಅಂತಾ ಗೊತ್ತಿತ್ತು. ಆದರೂ ನನ್ನ ಮೂರ್ಖತನದ ನಿರ್ಧಾರದಿಂದ ಈ ರೀತಿ ಆಗಿದೆ ಎಂದರು.
ಪೊಲೀಸರು ದಾಳಿ ಮಾಡಿದ ದಿನವೇ ಆ ಚಾಕಲೇಟ್ ಬಂದಿತ್ತು. ದುರಾದೃಷ್ಟವಶಾತ್ ಆ ದಿನವೇ ಚಾಕಲೇಟ್ ಬಂದಿತ್ತು. ಈ ಚಾಕಲೇಟ್‌ಗೆ ಎರಡು ವರ್ಷಗಳ ವ್ಯಾಲಿಡಿಟಿ ಇದೆ. ನಾನು ವ್ಯಾಪಾರ ಉದ್ದೇಶಕ್ಕಾಗಿ ಭಾಂಗ್ ಚಾಕಲೇಟ್ ತಂದಿಲ್ಲ. ಸ್ನೇಹಿತರ ಒತ್ತಾಯದಿಂದ ಚಾಕಲೇಟ್ ತರಿಸಿದ್ದೇನೆ. ಮೂವತ್ತು ವರ್ಷದ ಒಳಗಿನವರಿಗೆ ಈ ಚಾಕಲೇಟ್ ಕೊಡಲ್ಲ. ಪೊಲೀಸರ ತನಿಖೆಗೆ ಸಹಕಾರ ನೀಡುತ್ತಿದ್ದೇನೆ ಎಂದು ಅಂಗಡಿ ಮಾಲೀಕ ಮನೋಹರ್ ಶೇಟ್ ಹೇಳಿದ್ದಾರೆ.

ಭಾಂಗ್ ಅನ್ನು ಕಾನೂನುಬದ್ಧ ಮಾಡಬೇಕೆಂದು ಪತಂಜಲಿಯ ಬಾಬಾ ರಾಮ್‌ದೇವ್ ಅವರು ಕಾನೂನು ಹೋರಾಟ ಮಾಡುತ್ತಿದ್ದಾರೆ. ರಥೋತ್ಸವ ಮತ್ತು ಹೋಳಿ ಆಟದ ಸಂಧರ್ಭದಲ್ಲಿ ಇಲ್ಲಿ ಸ್ನೇಹಿತರು ಭಾಂಗ್‌ಗಾಗಿ ಬೇಡಿಕೆ ಇಡುತ್ತಿದ್ದರು. ಅದಕ್ಕಾಗಿ ತರಿಸಿದ್ದೇನೆ. ಅದನ್ನು ಮಾರಾಟ ಮಾಡುವ ಉದ್ದೇಶ ನನಗೆ ಇಲ್ಲ ಎಂದು ಮನೋಹರ್ ಶೇಟ್ ಹೇಳಿದ್ದಾರೆ.
ಈ ಭಾಂಗ್ ಚಾಕಲೇಟ್‌ಗೆ ಎರಡು ವರ್ಷಗಳ ವ್ಯಾಲಿಡಿಟಿ ಇದೆ. ಈ ಚಾಕಲೇಟ್ ಸೇವನೆ ಮಾಡಿದರೆ ಮನಸ್ಸು ಉದ್ರಿಕ್ತ ಆಗಲ್ಲ. ಮನಸ್ಸು ಶಾಂತವಾಗಿ ಇರುತ್ತದೆ. ಧ್ಯಾನಕ್ಕಾಗಿ ಸಾಧುಗಳು ಈ ಭಾಂಗ್ ಸೇವನೆ ಮಾಡುತ್ತಾರೆ. ನಾನು ಆರ್ಡರ್ ಮಾಡಿ ಆರು ತಿಂಗಳು ಕಳೆದ ಬಳಿಕ ಈ ಬಾಂಗ್ ಚಾಕಲೇಟ್ ಬಂದಿದೆ. ಬೆಳಗ್ಗೆ 11.30ರ ವೇಳೆಗೆ ಚಾಕಲೇಟ್‌ಗಳು ಬಂದಿದೆ. ಸಂಜೆ ನಾಲ್ಕರ ವೇಳೆಗೆ ಚಾಕಲೇಟ್‌ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೂರು ದಿನದಿಂದ ಪೊಲೀಸ್ ಠಾಣೆಗೆ ಹೋಗುತ್ತಿದ್ದೇನೆ. ಪೊಲೀಸರ ತನಿಖೆಗೆ ಸಹಕಾರ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.












Click it and Unblock the Notifications