ಮಂಗಳೂರಿನಲ್ಲಿ ಇದು ಕೇವಲ ಮನೆಯಲ್ಲ ಮ್ಯೂಸಿಯಂ!

ಇದು ಅಂತಿಂತಹ ಮನೆಯಲ್ಲ! 250 ವರ್ಷಗಳ ಇತಿಹಾಸವನ್ನು ಸಾರುವ ಮ್ಯೂಸಿಯಂ!. ಈ ಅಪರೂಪದ ಸಂಗ್ರಹಾಲಯವಿರುವುದು ಮಂಗಳೂರಿನಲ್ಲಿ. ಈ ಮನೆಗೆ ಕಾಲಿಡುತ್ತಿದ್ದಂತೆ ಹಿತ್ತಾಳೆ, ತಾಮ್ರದ ಪಾತ್ರೆಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ಪ್ರಾಣಿಗಳ ಮೂರ್ತಿಗಳು ನಿಮ್ಮನ್ನು ಸ್ವಾಗತಿಸುತ್ತವೆ. ಪೂರ್ವಜರಿಂದ ಬಳುವಳಿಯಾಗಿ ಬಂದ ವಸ್ತುಗಳನ್ನು ಇಲ್ಲಿ ಜೋಪಾನವಾಗಿ ಸಂಗ್ರಹಿಸಿಡಲಾಗಿದೆ.

ಮಂಗಳೂರು ನಗರದ ಮಂಗಳಾದೇವಿ ರಸ್ತೆಯಲ್ಲಿ ಈ ಅಪರೂಪದ ವಸ್ತು ಸಂಗ್ರಹಾಲಯವಿದೆ. ಹೊರಗಿನಿಂದ ಆಧುನಿಕ ಮನೆಯಂತೆ ಕಾಣುವ ಮನೆಯೊಳಗೆ ಕಾಲಿಟ್ಟರೆ ಪುರಾತನ ಪ್ರಪಂಚವೊಂದು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಪ್ರತಿಯೊಂದು ವಸ್ತುವನ್ನು ಮನೆಯಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಗಿದ್ದು, ಅವುಗಳ ಅಂದಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಲಾಗುತ್ತಿದೆ.

250 ವರ್ಷಗಳ ಪುರಾತನ ಗೃಹಪಯೋಗಿ ವಸ್ತುಗಳು. ತಾಮ್ರ, ಕಂಚು, ಹಿತ್ತಾಳೆ ಪಾತ್ರೆಗಳು. ಗಡಿಯಾರ, ವಾಚು, ಗ್ರಾಮ ಫೋನ್ ಗಳು. ನೇಗಿಲು, ಜೋಕಾಲಿ, ಹೂ ದಾನಿ ಹೀಗೆ ಮನೆಯ ತುಂಬಾ ಪುರಾತನ ವಸ್ತುಗಳು ತುಂಬಿ ಹೋಗಿವೆ. ತಮ್ಮ ಮನೆಯನ್ನೇ ವಸ್ತು ಸಂಗ್ರಹಾಲಯವಾಗಿಸಿಕೊಂಡಿರುವ ಇವರ ಕುಟುಂಬ ಇದೇ ಮನೆಯಲ್ಲಿ ಯಾವುದೇ ವಸ್ತುಗಳಿಗೂ ಹಾನಿಯಾಗದಂತೆ ಅಚ್ಚುಕಟ್ಟಾಗಿ ಜೀವನ ನಡೆಸುತ್ತಿದೆ. ಬನ್ನಿ ಈ ಮನೆಯಲ್ಲಿ ಒಂದು ಸುತ್ತು ಹಾಕಿ ಬರೋಣ

ಮಂಗಳೂರಿನಲ್ಲಿದೆ ಮ್ಯೂಸಿಯಂ

ಮಂಗಳೂರಿನಲ್ಲಿದೆ ಮ್ಯೂಸಿಯಂ

ಮಂಗಳೂರು ನಗರದ ಮಂಗಳಾದೇವಿ ದೇವಾಲಯದ ರಸ್ತೆಯಲ್ಲಿ ಈ ಮ್ಯೂಸಿಯಂ ಇದೆ. ಉದ್ಯಮಿಯಾಗಿರುವ ಮನೆಯ ಮಾಲೀಕರು ಪುರಾತನ ವಸ್ತುಗಳನ್ನು ಸಂಗ್ರಹಿಸಿ ಮನೆಯಲ್ಲಿ ಜೋಪಾನವಾಗಿ ಸಂಗ್ರಹಿಸಿಟ್ಟಿದ್ದಾರೆ.

250 ವರ್ಷಗಳ ಕಥೆ ಹೇಳುತ್ತವೆ

250 ವರ್ಷಗಳ ಕಥೆ ಹೇಳುತ್ತವೆ

ಈ ಮನೆಯು ಸಹ ಪೂರ್ವಜರಿಂದ ಸಿಕ್ಕಿದ ಕೊಡುಗೆ. ಹೊರಗೆ ಇಂದಿನ ಕಾಲಕ್ಕೆ ತಕ್ಕಂತೆ ಆಧುನೀಕರಣಗೊಂಡಿದೆ. ಆದರೆ, ಒಳಗೆ ಕಾಲಿಟ್ಟರೆ ಇದೊಂದು ಪುರಾತನ ಇತಿಹಾಸ ಸಾರುವ ಮ್ಯೂಸಿಯಂ.

ಸಾವಿರ ವಸ್ತುಗಳಿವೆ

ಸಾವಿರ ವಸ್ತುಗಳಿವೆ

ಈ ಮನೆಯಲ್ಲಿ ಸಾವಿರಕ್ಕೂ ಅಧಿಕ ಪುರಾತನ ವಸ್ತುಗಳಿವೆ. ಇವುಗಳಲ್ಲಿ ಪೂರ್ವಜರಿಂದ ಹಲವು ಬಳುವಳಿಯಾಗಿ ಬಂದಿದ್ದರೆ, ಕೆಲವು ವಸ್ತುಗಳನ್ನು ಸಿಕ್ಕ ಕಡೆ ಖರೀದಿ ಮಾಡಿ ತಂದು ಅಚ್ಚುಕಟ್ಟಾಗಿ ಸಂಗ್ರಹಿಸಲಾಗಿದೆ.

ತುಂಬು ಕುಟುಂಬವಿದೆ

ತುಂಬು ಕುಟುಂಬವಿದೆ

ಈ ಮನೆಯಲ್ಲಿ ಸುಮಾರು 6-7 ಜನರು ವಾಸಿಸುತ್ತಿದ್ದಾರೆ. ಮನೆಗೆ ಕಾಲಿಟ್ಟ ತಕ್ಷಣವೇ ಹಲವಾರು ವಸ್ತಗಳು ಕಾಣಸಿಗುತ್ತವೆ. ಮನೆಯಲ್ಲಿ ಹೆಚ್ಚು ಜನರಿದ್ದರೂ ಪುರಾತನ ವಸ್ತುಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಈ ಮನೆಯಲ್ಲಿ ಏನಿದೆ

ಈ ಮನೆಯಲ್ಲಿ ಏನಿದೆ

ಗೃಹಪಯೋಗಿ ವಸ್ತುಗಳು, ತಾಮ್ರ, ಹಿತ್ತಾಳೆ, ಕಂಚಿನ ಪಾತ್ರೆಗಳು, ಹೂದಾನಿ, ಗ್ರಾಮ ಪೋನ್, ಗಡಿಯಾರ, ನೇಗಿಲು, ಜೋಕಾಲಿ, ಎಣ್ಣೆ ಕಾಯಿಸುವ ಕೇರಳ ಮಾದರಿಯ ಒರಳಿ, ಬುದ್ಧನ ವಿಗ್ರಹ, ಹಿಂದೆ ಶ್ರೀಮಂತರು ಬಳಸುತ್ತಿದ್ದ ಕಲಂದಿ ಮುಂತಾದ ವಸ್ತುಗಳಿಗೆ ಸುಮಾರು 10 ವಿವಿಧ ಪುರಾತನ ಕೈಗಡಿಯಾರಗಳು ಈ ಮ್ಯೂಸಿಯಂನಲ್ಲಿವೆ.

ಮೂರು ವರ್ಷಕ್ಕೊಮ್ಮೆ ನಿರ್ವಹಣೆ

ಮೂರು ವರ್ಷಕ್ಕೊಮ್ಮೆ ನಿರ್ವಹಣೆ

ಮನೆಯ ತುಂಬಾ ಇರುವ ವಸ್ತುಗಳನ್ನು ಮೂರು ವರ್ಷಕ್ಕೊಮ್ಮೆ ನಿರ್ವಹಣೆ ಮಾಡಲಾಗುತ್ತದೆ. ಅವುಗಳಿಗೆ ಪಾಲಿಶ್ ಹಾಕಿಸಿ, ಸರಿಮಾಡಿಸಿ ಜೋಪಾನವಾಗಿ ಜೋಡಿಸಲಾಗುತ್ತದೆ. ಉಳಿದಂತೆ ವಸ್ತುಗಳನ್ನು ಪ್ರತಿದಿನ ಕ್ಲೀನ್ ಮಾಡಲು ಮನೆಯಲ್ಲಿ ಕೆಲಸಗಾರರಿದ್ದಾರೆ.

ಗಮನ ಸೆಳೆಯುವ ಬುದ್ಧನ ಪ್ರತಿಮೆ

ಗಮನ ಸೆಳೆಯುವ ಬುದ್ಧನ ಪ್ರತಿಮೆ

ಈ ಮನೆಯಲ್ಲಿರುವ ಬುದ್ಧನ ಪ್ರತಿಮೆ ಬಹಳ ವಿಶಿಷ್ಟವಾದದ್ದು, ತಲೆಯಿಂದ ಪಾದದ ವರೆಗೆ ಈ ಪ್ರತಿಮೆಯಲ್ಲಿ ಬುದ್ಧನ ಹುಟ್ಟು, ಅವರ ಸಾಧನೆ ಕುರಿತಂತೆ ಸೂಕ್ಷವಾಗಿ ಕೆತ್ತನೆ ಮಾಡಲಾಗಿದೆ.

ಗುಜರಿ ಅಂಗಡಿಯಲ್ಲಿತ್ತು ಹಲವು ಪಾತ್ರೆಗಳು

ಗುಜರಿ ಅಂಗಡಿಯಲ್ಲಿತ್ತು ಹಲವು ಪಾತ್ರೆಗಳು

ಈ ಮನೆಯಲ್ಲಿರುವ ಕೆಲವು ವಸ್ತು ಮತ್ತು ಪಾತ್ರೆಗಳನ್ನು ಬೆಂಗಳೂರಿನ ಗುಜರಿಯಿಂದ ಖರೀದಿ ಮಾಡಲಾಗಿದೆ. ಅಲ್ಲಿ ಬೇಡವಾದ ವಸ್ತುಗಳುಗಳನ್ನು ತಂದು ಪಾಲಿಶ್ ಹಾಕಿಸಿ ಇಲ್ಲಿ ಜೋಪಾನವಾಗಿ ಜೋಡಿಸಿಡಲಾಗಿದೆ.

ಕೇರಳದ ಒರಳಿ ಇಲ್ಲಿದೆ

ಕೇರಳದ ಒರಳಿ ಇಲ್ಲಿದೆ

ಕೇರಳದಲ್ಲಿ ಎಣ್ಣೆ ಕಾಯಿಸಲು ಬಳಸುವ ಒರಳಿ ಈ ಮನೆಯ ಪ್ರಮುಖ ಆಕರ್ಷಣೆಯಾಗಿದೆ. ಸುಮಾರು 80 ಕೆಜಿ ತೂಕದ ಈ ಒರಳಿಯನ್ನು ಕೇರಳದಿಂದ ಇಲ್ಲಿಗೆ ತರಿಸಲಾಗಿದೆ.

ಹಿತ್ತಾಳೆ ಆನೆಯ ತೂಕ 75 ಕೆಜಿ

ಹಿತ್ತಾಳೆ ಆನೆಯ ತೂಕ 75 ಕೆಜಿ

ಈ ಮನೆಯಲ್ಲಿ ಹಿತ್ತಾಳೆಯ ಆನೆಯ ಮೂರ್ತಿಯೊಂದಿಗೆ. ಇದು ಸುಮಾರು 75 ಕೆಜಿ ತೂಕವಿದೆ.

ಈ ಕುದುರೆ ನೋಡಿ

ಈ ಕುದುರೆ ನೋಡಿ

ಈ ಮನೆಯಲ್ಲಿರುವ ಕುದುರೆಯೂ ವಿಶೇಷವಾಗಿದ್ದು ಚರ್ಮದಿಂದ ಇದರ ಆಕೃತಿಯನ್ನು ತಯಾರಿಸಲಾಗಿದೆ.

ಶ್ರೀಮಂತಿಕೆಯ ಪ್ರತಿಬಿಂಬ ಕಲಂದಿ

ಶ್ರೀಮಂತಿಕೆಯ ಪ್ರತಿಬಿಂಬ ಕಲಂದಿ

ಹಿಂದಿನ ಕಾಲದಲ್ಲಿ ಶ್ರೀಮಂತರು, ರಾಜರು ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಲಂದಿಯಲ್ಲಿಡುತ್ತಿದ್ದರು. ಈ ಮನೆಗೆ ಪ್ರವೇಶ ಮಾಡುತ್ತಿದ್ದಂತೆ ಕಲಂದಿ ನಿಮಗೆ ಕಾಣಸಿಗುತ್ತದೆ.

ಗ್ರಾಮಫೋನ್, ಗಡಿಯಾರ

ಗ್ರಾಮಫೋನ್, ಗಡಿಯಾರ

ಈ ಮನೆಯಲ್ಲಿ ಹಳೆಯ ಗ್ರಾಮಫೋನ್ ಮತ್ತು ನಾನಾ ವಿಧಧ ಗಡಿಯಾರಗಳನ್ನು ನೋಡಬಹುದಾಗಿದೆ.

ಬ್ರಿಟಿಷರು ಬಳಸುತ್ತಿದ್ದ ಟಿಫನ್ ಬಾಕ್ಸ್

ಬ್ರಿಟಿಷರು ಬಳಸುತ್ತಿದ್ದ ಟಿಫನ್ ಬಾಕ್ಸ್

ಈ ಮನೆಯಲ್ಲಿ ಬ್ರಿಟಿಷರು ಹಡಗುಗಳಲ್ಲಿ ಬಳಸುತ್ತಿದ್ದ ಟಿಫನ್ ಬಾಕ್ಸ್ ಗಳಿವೆ.

ಮಾರಾಟ ಮಾಡುವುದಿಲ್ಲ

ಮಾರಾಟ ಮಾಡುವುದಿಲ್ಲ

ಮನೆಯಲ್ಲಿ ಸಂಗ್ರಹಿಸಿರುವ ಪುರಾತನ ವಸ್ತುಗಳು ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ. ಆದರೆ, ಅವುಗಳನ್ನು ಇವರು ಮಾರಾಟ ಮಾಡುವುದಿಲ್ಲ.

ಮುಂದಿನ ಪೀಳಿಗೆಗೆ ತಿಳಿಯಲಿ

ಮುಂದಿನ ಪೀಳಿಗೆಗೆ ತಿಳಿಯಲಿ

ಮೂಲತಃ ಉದ್ಯಮಿಯಾಗಿರುವ ಮನೆಯ ಯಜಮಾನರು, ಮುಂದಿನ ಪೀಳಿಗೆಯವರಿಗೆ ಇಂತಹ ವಸ್ತುಗಳನ್ನು ಜನರು ಬಳಸುತ್ತಿದ್ದರು ಎಂದು ತಿಳಿಯಲಿ ಎಂದು ಇದನ್ನು ಸಂಗ್ರಹಿಸಿಟ್ಟಿದ್ದಾರೆ. ಇದನ್ನು ಮಾರಾಟ ಮಾಡಿ ಲಾಭಗಳಿಸುವ ಉದ್ದೇಶ ಅವರಿಗಿಲ್ಲ.

ಇಲ್ಲಿವೆ ಗಡಿಯಾರಗಳು

ಇಲ್ಲಿವೆ ಗಡಿಯಾರಗಳು

ಈ ಮನೆಯಲ್ಲಿ ನಾನಾ ರೀತಿಯ ಗಡಿಯಾರಗಳಿವೆ.

ಇಸ್ತ್ರೀ ಪೆಟ್ಟಿಗೆ ಸ್ಟ್ಯಾಂಡ್

ಇಸ್ತ್ರೀ ಪೆಟ್ಟಿಗೆ ಸ್ಟ್ಯಾಂಡ್

ಹಿಂದಿನ ಕಾಲದಲ್ಲಿ ಇಸ್ತ್ರೀ ಪೆಟ್ಟಿಗೆ ಇಡಲು ಬಳಸುತ್ತಿದ್ದ ಸ್ಟ್ಯಾಂಡ್ ಅನ್ನು ಈ ಮನೆಯಲ್ಲಿ ನೀವು ಕಾಣಬಹುದಾಗಿದೆ.

ಹೀಗಿದೆ ನೋಡಿ ಮಳೆಯ ಒಳನೋಟ

ಹೀಗಿದೆ ನೋಡಿ ಮಳೆಯ ಒಳನೋಟ

ಮನೆಯ ತುಂಬಾ ವಸ್ತುಗಳಿದ್ದರೂ ಮನೆಯನ್ನು ಎಷ್ಟು ಅಂದವಾಗಿಟ್ಟುಕೊಂಡಿದ್ದಾರೆ ನೋಡಿ.

ಫಳ-ಫಳ ಹೊಳೆಯುತ್ತವೆ ಪಾತ್ರೆಗಳು

ಫಳ-ಫಳ ಹೊಳೆಯುತ್ತವೆ ಪಾತ್ರೆಗಳು

ಈ ಮನೆಯಲ್ಲಿ ಇಷ್ಟೊಂದು ಪಾತ್ರೆಗಳಿದ್ದೂ ಅವುಗಳನ್ನು ಚೆನ್ನಾಗಿ ಪಾಲಿಶ್ ಮಾಡಿಸಿ ಇಡಲಾಗಿದೆ. ಎಲ್ಲಾ ಪಾತ್ರೆಗಳ ಫಳ-ಫಳ ಹೊಳೆಯುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+