ಬೀಕನ್ಸ್ ನಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಚಾಂಪಿಯನ್ಸ್
ಮಂಗಳೂರು, ಅಕ್ಟೋಬರ್. 07: ನಿಟ್ಟೆ ಸಮೂಹ ಸಂವಹನ ಸಂಸ್ಥೆಯ ವತಿಯಿಂದ ನಡೆದ ಆರನೇ ಆವೃತ್ತಿಯ ರಾಷ್ಟ್ರ ಮಟ್ಟದ ಬೀಕನ್ಸ್ ಮಾಧ್ಯಮೋತ್ಸವದಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳ ತಂಡ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು.
ಗೋವಾದ ಸೇಂಟ್ ಕ್ಸೇವಿಯರ್ ಕಾಲೇಜು ತಂಡ ರನ್ನರ್-ಅಪ್ ಆಗಿ ಹೊರಹೊಮ್ಮಿತು. ಬೀಕನ್ಸ್ ನಲ್ಲಿ ವಿದ್ಯಾರ್ಥಿಗಳಿಗಾಗಿ ಡಾಕ್ಯೂಮೆಂಟರಿ, ಪಿಎಸ್ ಆಡ್, ಕಿರುಚಿತ್ರ, ಪಾಟ್ ಪೌರಿ, ನ್ಯೂಸ್ ಬುಲೆಟಿನ್, ಮಾಕ್ ಪ್ರೆಸ್, ಕ್ರಿಯೇಟಿವ್ ರೈಟಿಂಗ್, ಡಿಬೇಟ್, ರೇಡಿಯೋಜಾಕಿ, ಪ್ರಾಡಕ್ಟ್ ಲಾಂಚ್, ಕ್ರೈಸಿಸ್ ಮ್ಯಾನೇಜ್ ಮೆಂಟ್, ಕ್ವಿಜ್, ಮೂವಿ ಸ್ಪೂಫ್, ಎಸ್ಕೇಪ್‍ರೂಮ್, ಬೀದಿ ನಾಟಕ ಸೇರಿದಂತೆ ಅನೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಆಳ್ವಾಸ್ ನ ಶ್ರೀರಾಜ್, ಜಾಫರ್, ಅಕ್ಷಯ, ನಿವೇದಿತಾ, ಅನುಷಾ, ಚೈತ್ರಾ, ವರುಣ್, ತೇಜು ಹಾಗೂ ಓಂಕಾರರನ್ನು ಒಳಗೊಂಡ ವಿದ್ಯಾರ್ಥಿ ತಂಡ ಬೀದಿ ನಾಟಕದಲ್ಲಿ ಪ್ರಥಮ, ಪಿಎಸ್ ಆಡ್ ನಲ್ಲಿ ರಕ್ಷಿತ, ಸುಶಾಂತ್, ವರುಣ್, ಅಭಿನಂದನ್ ತಂಡ ಪ್ರಥಮ, ಹಾಗೂ ಎಸ್ಕೇಪ್‍ರೂಮ್ ಸ್ಪರ್ಧೆಯಲ್ಲಿ ತೆಂಝಿಲ್ ಪ್ರಥಮ ಸ್ಥಾನ ಪಡೆದರು.

ಮಾಕ್ ಪ್ರೆಸ್ ನಲ್ಲಿ ಶ್ರೇಯಾ ಶೆಟ್ಟಿ ದ್ವಿತೀಯ, ಪ್ರಾಡಕ್ಟ್ ಲಾಂಚ್ ನಲ್ಲಿ ಶ್ರೇಯಾ ಶೆಟ್ಟಿ ಹಾಗೂ ಓಂಕಾರ್ ದ್ವಿತೀಯ, ಕ್ರೈಸಿಸ್ ಮ್ಯಾನೇಜ್ ಮೆಂಟ್ ನಲ್ಲಿ ಗಗನ್ ದೀಪ್ ಹಾಗೂ ಪುನೀತ್ ತಂಡ ದ್ವಿತೀಯ ಪ್ರಶಸ್ತಿಯನ್ನು ಬಾಚಿಕೊಂಡರು.
ವಿದ್ಯಾರ್ಥಿಗಳಲ್ಲಿ ಮಾಧ್ಯಮದ ಕುರಿತು ಅರಿವು ಮೂಡಿಸುವ ಹಾಗೂ ಅದರ ಸಾಧನೆಗಳನ್ನು ಸ್ಮರಿಸುವ ಉದ್ದೇಶದಿಂದ ನಿಟ್ಟೆ ಸಂಸ್ಥೆ ಪ್ರತಿವರ್ಷ ಬೀಕನ್ಸ್ ಮಾಧ್ಯಮೋತ್ಸವವನ್ನು ನಡೆಸಿಕೊಂಡು ಬಂದಿದೆ. ನಿಟ್ಟೆ ವಿಜ್ಞಾನ ಮತ್ತು ತಂತ್ರಜ್ಞಾನ ಕಾಲೇಜಿನ ಡಾ. ಸ್ಮಿತಾ ಹೆಗ್ಡೆ ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಿದರು.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications