ಮಂಗಳೂರು ಭಜರಂಗದಳದ ಭದ್ರತಾ ಜಾಲ ಬಿಚ್ಚಿಟ್ಟ 'ಶ್ಯಾಡೋ ಆರ್ಮೀಸ್’
'ಶ್ಯಾಡೋ ಆರ್ಮೀಸ್' ಹಿಂದುತ್ವ ಸಂಘಟನೆಗಳ ಕುರಿತಾದ ಪುಸ್ತಕವಾಗಿದ್ದು ಅದರಲ್ಲಿ ಒಂದು ಅಧ್ಯಾಯ ಮಂಗಳೂರಿನ ಭಜರಂಗದಳದ ಕುರಿತು ಮಾತನಾಡುತ್ತದೆ. ಆ ಅಧ್ಯಾಯದ ಸಂಗ್ರಹಾನುವಾದ ಇಲ್ಲಿದೆ.
ಮಂಗಳೂರು, ಏಪ್ರಿಲ್ 27: ಮಂಗಳೂರಿನಲ್ಲಿ ಬಹಳಷ್ಟು ಸಕ್ರಿಯವಾಗಿರುವ ವಿಶ್ವ ಹಿಂದೂ ಪರಿಷತ್ತಿನ ಪ್ರಖರ ಉಪ ಸಂಘಟನೆಯಾದ ಭಜರಂಗದಳದ ಅಸ್ತಿತ್ವಕ್ಕೆ ಲಾಭದ ಗುರಿಯೇ ಎನ್ನುತ್ತಿದೆ ಧೀರೇಂದ್ರ ಕೆ ಝಾ ಅವರ ಕೃತಿ ಶ್ಯಾಡೋ ಆರ್ಮೀಸ್ : ಫ್ರಿಂಜ್ ಆರ್ಗನೈಝೇಶನ್ಸ್ ಎಂಡ್ ಫೂಟ್ ಸೋಲ್ಜರ್ಸ್ ಆಫ್ ಹಿಂದುತ್ವ.'
'ಶ್ಯಾಡೋ ಆರ್ಮೀಸ್' ಹಿಂದುತ್ವ ಸಂಘಟನೆಗಳ ಕುರಿತಾದ ಪುಸ್ತಕವಾಗಿದ್ದು ಅದರಲ್ಲಿ ಒಂದು ಅಧ್ಯಾಯ ಮಂಗಳೂರಿನ ಭಜರಂಗದಳದ ಕುರಿತು ಮಾತನಾಡುತ್ತದೆ. ಆ ಅಧ್ಯಾಯದ ಸಂಗ್ರಹಾನುವಾದ ಇಲ್ಲಿದೆ.[ಮಂಗಳೂರಿನಲ್ಲಿ ಮದುವೆಗೆ ತಂದಿದ್ದ ಚಿನ್ನವನ್ನೇ ಹೊತ್ತೊಯ್ದ ಕಳ್ಳರು]
ಮಂಗಳೂರಿನ ಭಜರಂಗದಳ ನಾಯಕ 40 ವರ್ಷದ ಶರಣ್ ಪಂಪ್ವೆಲ್ ಅವರೆಷ್ಟು ಸ್ನೇಹಶೀಲರಾಗಿದ್ದಾರೆಂದರೆ ವ್ಯಾಪಾರದಲ್ಲಿ ಅವರಿಗಿರುವ ಕುಶಾಗ್ರಮತಿಯನ್ನು ತಕ್ಷಣ ಗುರುತಿಸುವುದು ಕಷ್ಟಕರವಾಗುತ್ತದೆ. ಒಬ್ಬ ಒಳ್ಳೆಯ ಉದ್ಯಮಿಯಂತೆ ಬೇಡಿಕೆ ಮತ್ತು ಪೂರೈಕೆಯ ನಿಯಮಗಳಿಗೆ ಅವರು ಬದ್ಧರಾಗಿದ್ದಾರೆ.

ಅವರು ನಡೆಸುತ್ತಿರುವ ಭಜರಂಗದಳ ಕಾರ್ಯಚಟುವಟಿಕೆಗಳ ನೇರ ಪ್ರಭಾವವೆಂಬಂತೆ ಸ್ಥಳೀಯ ಉದ್ಯಮಿಗಳು ಎದುರಿಸುತ್ತಿರುವ ಆತಂಕವನ್ನು ಚೆನ್ನಾಗಿಯೇ ಉಪಯೋಗಿಸುತ್ತಿದ್ದಾರೆ. ವಿಶೇಷ ಎಂದರೆ ಶರಣ್ ಪಂಪ್ ವೆಲ್ ಈ ಉದ್ಯಮಿಗಳಿಗೆ ತಾವು ಪ್ರತಿನಿಧಿಸುವ ಹಿಂದುತ್ವ ಸಂಘಟನೆಯ ಕಾರ್ಯಕರ್ತರನ್ನೇ ಸೆಕ್ಯುರಿಟಿ ಗಾರ್ಡುಗಳನ್ನಾಗಿ ನೇಮಿಸುತ್ತಾರೆ.
ನಾವು ಭದ್ರತಾ ಸೇವೆಗಳನ್ನು ನ್ಯಾಯಸಮ್ಮತ ದರಗಳಿಗೆ ಒದಗಿಸುವುದರಿಂದ ಉದ್ಯಮಿಗಳು ನಮ್ಮನ್ನು ನೇಮಿಸಲು ಸಿದ್ಧರಿದ್ದಾರೆ ಎಂದು ಶರಣ್ ಹೇಳುತ್ತಾರೆ. ವಿಶ್ವ ಹಿಂದು ಪರಿಷತ್ತಿನ ಪ್ರಖರ ಹಿಂದುತ್ವ ಸಂಘಟನೆಯಾದ ಭಜರಂಗದಳದ ಅಸ್ತಿತ್ವಕ್ಕೆ ಒಂದೊಮ್ಮೆ ರಾಜಕೀಯ ಪ್ರಮುಖ ಕಾರಣವಾಗಿದ್ದಿರಬಹುದು. ಆದರೆ ಇಂದು ಮಂಗಳೂರಿನಲ್ಲಿ ಬಹಳಷ್ಟು ಸಕ್ರಿಯವಾಗಿರುವ ಈ ಸಂಘಟನೆಗೆ ಲಾಭದ ಗುರಿಯೇ ತನ್ನ ಚಟುವಟಿಕೆಗಳನ್ನು ನಡೆಸಲು ಪ್ರೇರಣೆಯಾಗಿದೆ ಎಂದು ಪುಸ್ತಕದಲ್ಲಿ ಹೇಳಲಾಗಿದೆ.[ಇಂಟರ್ನ್ಯಾಷನಲ್ ಹೊಟೇಲ್ ಮೇಲಿಂದ ಹಾರಿ ಆತ್ಮಹತ್ಯೆ]
ಮೊದಲು ಭಜರಂಗ ದಳ ನೈತಿಕ ಪೊಲೀಸಗಿರಿ, ಗೂಂಡಾಗಿರಿ ಮತ್ತು ದಾಂಧಲೆ ಕೃತ್ಯಗಳನ್ನೊಳಗೊಂಡ ಚಟುವಟಿಕೆಗಳ ಮೂಲಕ ಸೆಕ್ಯೂರಿಟಿ ಗಾರ್ಡ್ ಗಳಿಗೆ ಬೇಡಿಕೆ ಸೃಷ್ಟಿಸಲಾಗುತ್ತದೆ.
ಈ ಕಾರ್ಯಚಟುವಟಿಕೆಗಳು ಮಾಲ್, ಅಂಗಡಿ ಮತ್ತು ಅಪಾರ್ಟಮೆಂಟ್ ಮಾಲಕರಲ್ಲಿ ಅಸುರಕ್ಷತೆಯ ಭಾವನೆ ಮೂಡಿಸುತ್ತದೆ. ನಂತರ ಶರಣ್ ಅವರ ಮಾಲಕತ್ವದ 'ಈಶ್ವರಿ ಮ್ಯಾನ್ ಪವರ್ ಸೊಲ್ಯೂಶನ್ಸ್ ಲಿಮಿಟೆಡ್' ಭಯಭೀತಗೊಂಡ ಉದ್ಯಮಿಗಳಿಗೆ ಸೆಕ್ಯುರಿಟಿ ಗಾರ್ಡುಗಳ ಸೇವೆ ಒದಗಿಸಿ ಅವರ ಭಯವನ್ನು ದೂರಗೊಳಿಸುತ್ತದೆ. ಎರಡೂ ಚಟುವಟಿಕೆಗಳಿಗೆ ಮಾನವ ಸಂಪನ್ಮೂಲಗಳು ಒಂದೇ ಕಡೆಯಿಂದ ಪೂರೈಕೆಯಾಗುತ್ತದೆ. ಕಂಪೆನಿಗೆ ಕೆಲಸ ನಿರ್ವಹಿಸುವ ಹೆಚ್ಚಿನ ಸೆಕ್ಯುರಿಟಿ ಗಾರ್ಡುಗಳು ಭಜರಂಗ ದಳ ಕಾರ್ಯಕರ್ತರು ಎಂದು ಶರಣ್ ವಿವರಿಸುತ್ತಾರೆ.
ಈ ನಗರದ ಭಜರಂಗ ದಳ ನಾಯಕನಾಗಿ ನಮ್ಮ ಕಾರ್ಯಕರ್ತರ ಜೀವನಕ್ಕೆ ಒಂದು ದಾರಿ ಮಾಡಿಕೊಡುವುದು ನನ್ನ ಕರ್ತವ್ಯ. ನನ್ನ ಬಳಿ ಉದ್ಯೋಗ ಅರಸಿಕೊಂಡು ಬರುವ ಯಾರನ್ನೇ ಆದರೂ ನಾನು ಹಿಂದೆ ಕಳುಹಿಸುವುದಿಲ್ಲ. ನಗರದಲ್ಲಿ ಸೆಕ್ಯುರಿಟಿ ಗಾರ್ಡ್ ಹುದ್ದೆಗಳಿಗೆ ಸಾಷ್ಟು ಬೇಡಿಕೆಯಿದೆ. ನಮ್ಮ ಕೆಲವು ಗಾರ್ಡುಗಳಲ್ಲಿ ಮುಸ್ಲಿಮರೂ ಇದ್ದಾರೆ ಎನ್ನುತ್ತಾರೆ ಶರಣ್.
ನನ್ನನ್ನು ಮಂಗಳೂರು ವಿಭಾಗದ ಸಂಚಾಲಕನನ್ನಾಗಿ ನೇಮಿಸಿದ ಕೂಡಲೇ ನಾನು ನನ್ನ ಈ ಉದ್ಯಮ ಆರಂಭಿಸಿದೆ. ಈಗ ನನಗೆ ನಗರದ ಹಲವಾರು ಮಳಿಗೆಗಳು ಮತ್ತು ಅಪಾರ್ಟಮೆಂಟುಗಳ ಸಹಿತ ಸಿಟಿ ಸೆಂಟರ್, ಫೋರಂ ಫಿಝಾ ಮತ್ತು ಬಿಗ್ ಬಜಾರ್ ಹೀಗೆ ಮೂರು ಮಾಲ್ ಸೆಕ್ಯುರಿಟಿ ಗುತ್ತಿಗೆ ದೊರಕಿದೆ ಎಂದು ಅವರು ಹೇಳುತ್ತಾರೆ.
ಆಸಕ್ತಿಯ ವಿಷಯವೆಂದರೆ ಸಿಟಿ ಸೆಂಟರ್ ಹಾಗೂ ಫೋರಂ ಫಿಝಾದಲ್ಲಿರುವ ಹೆಚ್ಚಿನ ಮಳಿಗೆಗಳು ಮುಸ್ಲಿಮರಿಗೆ ಸೇರಿದ್ದು. ದೇಶದ ಇತರೆಡೆಗಳಂತೆ ಭಜರಂಗದಳದ ಹೆಚ್ಚಿನ ದಾಳಿಗಳಲ್ಲಿ ಈ ಸಮುದಾಯದ ಮಂದಿಯೇ ಪ್ರಮುಖ ಗುರಿಯಾಗಿದ್ದಾರೆ ಎನ್ನುವುದು ಇನ್ನೊಂದು ಅಚ್ಚರಿಯ ಸಂಗತಿ.
ಆದರೆ ಮಂಗಳೂರಿನಲ್ಲಿ ಭಜರಂಗದಳದ ಮುಸ್ಲಿಂ ವಿರೋಧಿ ಧೋರಣೆಯಿಂದಾಗಿ ಈ ಹಿಂದುತ್ವ ಸಂಘಟನೆಯ ನಾಯಕನ ಉದ್ಯಮಕ್ಕೆ ಅಲ್ಪಸಂಖ್ಯಾತ ಸಮುದಾಯದ ಗ್ರಾಹಕರು ದೊರಕುತ್ತಿದ್ದಾರೆ. ಜತೆಗೆ ಅದು ಮತೀಯ ಸಾಮರಸ್ಯಕ್ಕೆ ದಾರಿ ಮಾಡಿಕೊಡುತ್ತದೆ. ಉದ್ಯಮಶೀಲತೆಯಲ್ಲಿ ತಮ್ಮ ಚಾಣಾಕ್ಷತನವನ್ನು ಮೆರೆಯುವ ಶರಣ್ ಕೂಡ ಇದನ್ನು ಮೌನವಾಗಿ ಒಪ್ಪುತ್ತಾರೆ.
ಈ ಬಗ್ಗೆ ವನ್ ಇಂಡಿಯಾ ಕನ್ನಡ ಜತೆ ಮಾತನಾಡಿದ ಶರಣ್ ಪಂಪ್ ವೆಲ್ , ಧೀರೇಂದ್ರ ಅವರು ಒಂದು ವರ್ಷದ ಹಿಂದೆ ಸಂದರ್ಶನ ನಡೆಸಿರುವುದು ಸತ್ಯ .ನಡೆದ ಸಂದರ್ಶನದಲ್ಲಿ ನಾನು ಈಶ್ವರಿ ಮ್ಯಾನ್ ಪವರ್ ಸೊಲ್ಯೂಶನ್ಸ್ ಲಿಮಿಟೆಡ್ ನಡೆಸುತ್ತಿರುವ ಬಗ್ಗೆ ಹೇಳಿದ್ದು ನಿಜ. ಆದರೆ ಸಿಟಿ ಸೆಂಟರ್ ಹಾಗೂ ಫೋರಂ ಫಿಝಾದಲ್ಲಿರುವ ಮಾಲ್ ಗಳ ಸೆಕ್ಯುರಿಟಿ ಗುತ್ತಿಗೆ ನನಗೆ ಸಿಕ್ಕಿದೆ ಎಂದು ಹೇಳಲಿಲ್ಲ. ಇದು ಸತ್ಯಕ್ಕೆ ದೂರವಾದ ಸಂಗತಿ," ಎಂದರು. ಜತೆಗೆ ನಾನು ಭಜರಂಗದಳದ ನಾಯಕನಾಗಿದ್ದು, ಉದ್ಯಮಿಯಾಗಬಾರದೆಂದು ಕಾನೂನು ಉಂಟೆ ? ಎಂದೂ ಪ್ರಶ್ನಿಸಿದ್ದಾರೆ.












Click it and Unblock the Notifications