ಕುಡ್ಲದ ಕಾಲೇಜು ಕುವರನ 'ರಾಣಿ' ಇನ್ನಿಲ್ಲ
ಮಂಗಳೂರು, ನ.13 : ಕುದುರೆ ಏರಿ ಕಾಲೇಜಿಗೆ ಬರುತ್ತಿದ್ದ ನಗರದ ರೋಶನಿ ನಿಲಯದ ಎಂಎಸ್‌ಡಬ್ಲ್ಯು ವಿದ್ಯಾರ್ಥಿ ಅವಿನಂದ್ ಅಚ್ಚನಹಳ್ಳಿ ಅವರಿಗೆ ನಿರಾಸೆಯಾಗಿದೆ. ಅನಾರೋಗ್ಯದ ಕಾರಣದಿಂದಾಗಿ ಅವರ ಬಿಳಿ ಕುದುರೆ 'ರಾಣಿ' ಮೃತಪಟ್ಟಿದೆ.
ಅವಿನಂದ್ ಕಾಲೇಜಿಗೆ ಬರಲು ಬಿಳಿ ಕುದೆರೆ 'ರಾಣಿ'ಯನ್ನು ಬಳಸುತ್ತಿದ್ದರು. ಮಹಾರಾಷ್ಟ್ರದ ಪಂಡರಾಪುರದ ಅಕ್ಲೂಜ್ ಎಂಬ ಗ್ರಾಮದ ಕುದುರೆಗಳ ಜಾತ್ರೆಯಲ್ಲಿ 1.2 ಲಕ್ಷ ರೂ.ಕೊಟ್ಟು ರಾಣಿಯನ್ನು ನವೆಂಬರ್ ಮೊದಲ ವಾರದಲ್ಲಿ ಖರೀದಿಸಿ ತಂದಿದ್ದರು.

ಮೂರು ದಿನಗಳ ಪ್ರಯಾಣದ ಬಳಿಕ ರಾಣಿ ಮಂಗಳೂರಿಗೆ ಬಂದಿದ್ದಳು. ಇಲ್ಲಿಗೆ ಬಂದ ಬಳಿಕ ಹೊಟ್ಟೆನೋವಿನಿಂದ ರಾಣಿ ಬಳಲುತ್ತಿತ್ತು. ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಚೇತರಿಕೆ ಕಾಣದ ರಾಣಿ ಮೃತಪಟ್ಟಿದೆ, ಇದು ತುಂಬಾ ನೋವು ತಂದಿದೆ ಎಂದು ಅವಿನಂದ್ ಹೇಳಿದ್ದಾರೆ. [ಕುದುರೆ ಏರಿ ಕಾಲೇಜಿಗೆ ಬರುವ ಕುಡ್ಲದ ಕುವರ!]
ಸಿಖಂದರ್ ಜೊತೆಗಿತ್ತು : ಕುದುರೆ ಸವಾರಿ ಕಲಿತ ತಕ್ಷಣ ಮಹಾರಾಷ್ಟ್ರದ ಕಟವಾಡಿ ತಳಿಯ ಸಿಖಂದರ್ ಕುದುರೆಯನ್ನು ಅವಿನಂದ್ ಖರೀದಿಸಿದ್ದರು. ಅದು ಅವರಿಗೆ ಚೆನ್ನಾಗಿ ಹೊಂದಿಕೊಂಡಿತ್ತು. ಅದರಲ್ಲೇ ಪ್ರತಿದಿನ ಕಾಲೇಜಿಗೆ ಆಗಮಿಸುತ್ತಿದ್ದರು. ಸಂಚಾರಿ ಪೊಲೀಸರು, ವಾಹನ ಸವಾರರು ಕುದುರೆಯಲ್ಲಿ ಸಾಗುವುದಕ್ಕೆ ಆಕ್ಷೇಪವೆತ್ತಿರಲಿಲ್ಲ.
ಕಾಲೇಜಿನ ಆಡಳಿತ ಮಂಡಳಿಯವರು ಸಹ ಕುದುರೆ ತೆಗೆದುಕೊಂಡು ಬರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಕೆಲವು ದಿನಗಳ ಹಿಂದೆ ಸಿಖಂದರ್ ಅನ್ನು ಮಾರಾಟ ಮಾಡಿ ಬಿಳಿ ಕುದುರೆ 'ರಾಣಿ'ಯನ್ನು ಅವಿನಂದ್ ಖರೀದಿ ಮಾಡಿದ್ದರು. ಆದರೆ, ಈಗ ಅದು ಸಾವನ್ನಪ್ಪಿದ್ದು, ಪ್ರಾಣಿಪ್ರಿಯ ಅವಿನಂದ್‌ಗೆ ದುಖಃ ಉಂಟುಮಾಡಿದೆ.












Click it and Unblock the Notifications