ಕಟೀಲ್‌ಗಾಗಿ ಕಟೀಲು ದೇವಾಲಯಕ್ಕೆ ಪಾದಯಾತ್ರೆ ಮಾಡಿದ್ರು
2014ರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಾಗ ದಕ್ಷಿಣ ಕನ್ನಡದಲ್ಲಿ ಅವೀಕ್ಷಿತ್ ರೈ ಹೆಸರು ಪ್ರಸಿದ್ಧಿಯಾಗಿತ್ತು. ನಳೀನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡದಿಂದ ಮರು ಆಯ್ಕೆಯಾಗಲಿ ಎಂದು ಇವರು ಕಟೀಲು ದೇವಾಲಯಕ್ಕೆ ಪಾದಯಾತ್ರೆ ಮಾಡಿದ್ದರು.
ಸದ್ಯ, ನಳೀನ್ ಕುಮಾರ್ ಕಟೀಲ್ ಸಂಸದರಾಗಿ ಒಂದು ವರ್ಷ ಪೂರೈಸಿದ್ದು, ರಾಜ್ಯದಲ್ಲಿಯೇ ಉತ್ತಮ ಕೆಲಸ ಮಾಡಿದ ಸಂಸದ ಎಂಬ ಖ್ಯಾತಿ ಪಡೆದಿದ್ದಾರೆ. ಆದ್ದರಿಂದ, ಅವೀಕ್ಷಿತ್ ರೈ ಪುನಃ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಪಾದಯಾತ್ರೆ ಹೋಗಿಬಂದು, ಅದರ ಪ್ರಸಾದವನ್ನು ಸಂದಸರಿಗೆ ನೀಡಿದ್ದಾರೆ. [ನಳೀನ್ ಕುಮಾರ್ ಕಟೀಲ್ ದತ್ತು ಪಡೆದ ಗ್ರಾಮದ ಪರಿಚಯ]

ಜೂ.5ರಂದು ಮುಂಜಾನೆ 4.30ಕ್ಕೆ ಮಂಗಳೂರಿನಿಂದ ಪಾದಯಾತ್ರೆ ಆರಂಭಿಸಿದ ಅವೀಕ್ಷಿತ್ 10.30ರ ವೇಳೆಗೆ ಕಟೀಲು ಕ್ಷೇತ್ರವನ್ನು ತಲುಪಿದರು. ನಳೀನ್ ಕುಮಾರ್ ಕಟೀಲ್ ದೇಶದಲ್ಲಿಯೇ ಮೊದಲ ಸಂಸದರಾಗಬೇಕು ಎಂದು ವಿಶೇಷ ಪೂಜೆ ಮಾಡಿಸಿ, ಪ್ರಸಾದ ತಂದಿದ್ದಾರೆ.
ಹಿಂದೆಯೂ ಪಾದಯಾತ್ರೆ ಮಾಡಿದ್ದರು : ಮಂಗಳೂರಿನವರಾದ ಅವೀಕ್ಷಿತ್ ರೈ ಸಿ.ಎ. ಅಭ್ಯಾಸ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ನಳಿನ್ ಕುಮಾರ್ ಕಟೀಲ್ ಮರು ಆಯ್ಕೆಯಾದರೆ ಮಂಗಳೂರಿನಿಂದ ಕಟೀಲು ತನಕ ಪಾದಯಾತ್ರೆ ಮಾಡುತ್ತೇನೆ ಎಂದು 2014ರಲ್ಲಿ ಹರಕೆ ಹೊತ್ತಿದ್ದರು.

ನಳೀನ್ ಕುಮಾರ್ ಕಟೀಲ್ ಬಹುಮತದೊಂದಿಗೆ ಜಯಗಳಿಸಿದಾಗ ಪಾದಯಾತ್ರೆ ಮಾಡಿ, ಹರಕೆ ತೀರಿಸಿದ್ದರು. ಈಗ ಕಟೀಲ್ ಅವರ ನೇತೃತ್ವದಲ್ಲಿ ಹೆಚ್ಚು-ಹೆಚ್ಚು ಅಭಿವೃದ್ಧಿ ಕಾರ್ಯಗಳಾಗಬೇಕು. ದೇಶದಲ್ಲಿಯೇ ಅವರು ನಂಬರ್ ಒನ್ ಸಂಸದರಾಗಬೇಕು ಎಂದು ಪಾದಯಾತ್ರೆ ನಡೆಸಿದ್ದಾರೆ.












Click it and Unblock the Notifications