ಮಂಗಳೂರು: ರವಿ ಪೂಜಾರಿ ಸಹಚರ ಸೆರೆ

ರುತ್‌ರಾಜ್ ಅಲಿಯಾಸ್ ಶ್ರೀಕಾಂತ್ ಲಾಯ್ಲಾ ಅಲಿಯಾಸ್ ರುತ್(20) ಬಂಧಿತ ಆರೋಪಿ. ಆರೋಪಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಡ ತಾಲ್ಲೂಕಿನ ಮಲ್ಕಾಪುರದ ನಿವಾಸಿಯಾಗಿದ್ದು, ಮೇ. 13ರಂದು ಬಂಧಿಸಿಲಾಗಿದೆ.
ವೆಲೆಂಟೈನ್ ಡಿಸೋಜಾ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಮಂಗಳೂರಿಗೆ ಕರೆತರಲಾಗಿದೆ.
ಆರೋಪಿ ರುತ್‌ರಾಜ್ ನೇತೃತ್ವದಲ್ಲಿ ರವಿ ಪೂಜಾರಿ ಸಹಚರರು ಮಾರ್ಚ್ 3ರಂದು ಮಂಗಳೂರಿನ ಉದ್ಯಮಿ ಅಹ್ಮದ್ ಮೊಹಿದೀನ್ ಅವರ ಡೆಲ್ಟಾ ಲಾಜಿಸ್ಟಿಕ್ಸ್ ಆಫೀಸ್ ಬಂದು ಜೀವ ಬೆದರಿಕೆ ಹಾಕಿದ್ದರು.
ಪೊಲೀಸರು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿಯಲ್ಲಿ ಗಣೇಶ್ ಲಕ್ಷ್ಮಣ, ಸಾಕೇತ್ ಮತ್ತು ಮುಖೇಶ್ ಶಿವಾಜಿ ಕಾಂಬ್ಳೆ, ಕಮಾಲ್ ಸಿಂಗ್ ರಜಪೂತ್ ಮತ್ತು ದತ್ತಾತ್ರೇಯ ತುಕಾರಾಂ ವಾಗ್ರೆ ಎಂಬವರನ್ನು ಬಂಧಿಸಿ ಅವರಿಂದ ಪಿಸ್ತೂಲ್, ಮತ್ತು ಕೃತ್ಯಕ್ಕೆ ಬಳಸಿದ ಬೈಕನ್ನು ವಶಪಡಿಸಿದ್ದಾರೆ.












Click it and Unblock the Notifications