ಎಎಸ್ ಐ ಐತಪ್ಪ ಹಲ್ಲೆ ಪ್ರಕರಣ: ಮಂಗಳೂರಲ್ಲಿ ಇಬ್ಬರ ಬಂಧನ
ಮಂಗಳೂರು, ಏಪ್ರಿಲ್ 7: ಉರ್ವ ಪೊಲೀಸ್ ಎಎಸ್ ಐ ಐತಪ್ಪ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ
ಬಂಧಿತರನ್ನು ಶಮಿರ್ ಕಟಿಪಳ್ಳ (28) ಹಾಗೂ ಮೊಹಮ್ಮದ್ ನಿಯಾಜ್ (20) ಎಂದು ಗುರುತಿಸಲಾಗಿದೆ. ಹಲ್ಲೆಗೆ ಉಪಯೋಗಿಸಿದ ಬೈಕ್ ಅನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ.[ಮಂಗಳೂರು ಎಎಸ್ಐ ಐತಪ್ಪನ ಮೇಲೆ ಮಾರಣಾಂತಿಕ ಹಲ್ಲೆ]

ಶಮಿರ್ ಮೇಲೆ ಈವರೆಗೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಐತಪ್ಪ ಸೇರಿ ಮೂರು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೂಡಾ ಶಮಿರ್ ಮೇಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ವಿವರ:
ಗಸ್ತಿನಲ್ಲಿದ್ದ ಎಎಸ್ಐ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಏಪ್ರಿಲ್ 7, ಬುಧವಾರ ಬೆಳಗಿನಜಾವ ನಗರದ ಲೇಡಿ ಹಿಲ್ ವೃತ್ತದ ಬಳಿ ನಡೆದಿತ್ತು. ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು, ಉರ್ವ ಠಾಣೆಯ ಎಎಸ್ಐ ಐತಪ್ಪ ಅವರ ಮೇಲೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.












Click it and Unblock the Notifications