ಧರ್ಮಸ್ಥಳ ಮಂಜುನಾಥನಿಗೆ ನಮೋ ಎಂದ ಕೇಜ್ರಿವಾಲ್

ಮಂಗಳೂರು, ಸೆಪ್ಟೆಂಬರ್, 09 : ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಬೆಳಗ್ಗೆ ಧರ್ಮಸ್ಥಕ್ಕೆ ಭೇಟಿ ನೀಡಿ, ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮಂಗಳವಾರ ರಾತ್ರಿ ಮಂಗಳೂರಿನಿಂದ ಧರ್ಮಸ್ಥಳಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದ ಅರವಿಂದ್ ಕೇಜ್ರಿವಾಲ್ ಅವರು, ಇಂದು ಮುಂಜಾನೆ ದೇವಸ್ಥಾನಕ್ಕೆ ಆಗಮಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರೇ ಕೇಜ್ರಿವಾಲ್‌ ಅವರನ್ನು ಸ್ವಾಗತಿಸಿದರು. [ಧರ್ಮಸ್ಥಳಕ್ಕೆ ಜನಾರ್ದನ ರೆಡ್ಡಿ ಭೇಟಿ]

arvind kejriwal

ಬುಧವಾರ ಎಸ್‌ಡಿಎಂ ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇಜ್ರಿವಾಲ್ ಮಂಗಳೂರಿಗೆ ಆಗಮಿಸಿದ್ದರು. ಈ ಕಾರ್ಯಕ್ರಮದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಆಪ್‌ ಕಾರ್ಯಕರ್ತರೊಂದಿಗೆ ಅವರು ಮಾತುಕತೆ ನಡೆಸಲಿದ್ದಾರೆ. [ಮಂಗಳೂರಿಗೆ ಬರ್ತಾರೆ ಕೇಜ್ರಿವಾಲ್]

ಧರ್ಮಸ್ಥಳದ ದೇವಾಲಯಕ್ಕೆ ಆಗಮಿಸಿದ ಕೇಜ್ರಿವಾಲ್, ತಮ್ಮನ್ನು ನೋಡಲು ಮುಗಿಬೀಳುತ್ತಿದ್ದ ಜನರತ್ತ ಕೈಮುಗಿದು, ಕೈಬೀಸಿ ಮುಗುಳು ನಗುತ್ತಾ ದೇವಾಲಯಕ್ಕೆ ತೆರಳಿದರು. ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅರವಿಂದ್ ಕೇಜ್ರಿವಾಲ್ ಅವರ ಜೊತೆ ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್ ಮುಂತಾದವರಿದ್ದರು. ಡಾ.ಹೆಗ್ಗಡೆ ಅವರು ಕೇಜ್ರಿವಾಲ್ ಅವರಿಗೆ ಕ್ಷೇತ್ರದ ಕುರಿತು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+