ಉಡುಪಿ ಸುಬ್ರಮಣ್ಯ ದೇಗುಳದಲ್ಲಿ ಷಷ್ಠಿ ಮಹೋತ್ಸವ
ಉಡುಪಿ, ನ. 22 : ಸ್ವಸ್ತಿ ಶ್ರೀ ಜಯನಾಮ ಸಂವತ್ಸರದ ವೃಶ್ಚಿಕ ಮಾಸ ದಿನ 11, ಮಾರ್ಗಶಿರ ಶುದ್ಧ ಷಷ್ಠಿ ದಿನಾಂಕ 27-11-2014 ನೇ ಗುರುವಾರ ಕುಂಜಿಬೆಟ್ಟು ಸಗ್ರಿ ಶ್ರೀ ವಾಸುಕೀ ಸುಬ್ರಮಣ್ಯ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ - ಷಷ್ಠಿ ಮಹೋತ್ಸವ ಚಂಡಿಕಾಹೋಮ ಮತ್ತು ರಾತ್ರಿ ನಾಗಮಂಡಲ ಸೇವೆ ಜರುಗಲಿದೆ.
ಈ ಪ್ರಯುಕ್ತ ಭಕ್ತ ಸಮುದಾಯ ಸಕುಟುಂಬ ಸಪರಿವಾರವಾಗಿ ಚಿತ್ತೈಸಿ ಶ್ರೀ ದೇವರ ಗಂಧ ಪ್ರಸಾದ ಹಾಗೂ ನಾಗಮಂಡಲ ಸೇವೆಯ ಪ್ರಸಾದ ಸ್ವೀಕರಿಸಬೇಕೆಂದು ಕೋರಲಾಗಿದೆ. ಆಹ್ವಾನಿಸುತ್ತಿರುವವರು ಯು. ಮೋಹನ್ ಭಟ್ ಮತ್ತು ಸಹೋದರರು ಮತ್ತು ಎಸ್ ಕೃಷ್ಣ ಮೂರ್ತಿ ಭಟ್. ಜತೆಗೆ, ದೇವಸ್ಥಾನದ ಎಸ್ ಗೋಪಾಲಕೃಷ್ಣ ಸಾಮಗ ನಾಗಪಾತ್ರಿ. ಉಡುಪಿ - 576102. ದೇವಸ್ಥಾನದ ದೂರವಾಣಿ : 0820-2531397 ಮನೆ : 2523440.

ವಿಶೇಷ ಕಾರ್ಯಕ್ರಮಗಳು : ಅಂದು ಸಂಜೆ 5 ರಿಂದ 7ರವರೆಗೆ ಸ್ಯಾಕ್ಸೋಫೋನ್ ವಾದನ - ಶ್ರೀ ದಾಮೋದರ ಸೇರಿಗಾರ ಮತ್ತು ಬಳಗದವರಿಂದ. ರಾತ್ರಿ 7 ಗಂಟೆಗೆ ಹಾಲಿಟ್ಟು ಸೇವೆ. 8.30 ಕ್ಕೆ ನಾಗಮಂಡಲ ಸೇವೆ ಮತ್ತು ಪ್ರಸಾದ ವಿನಿಯೋಗ. [ಕುಂದೂರು ಜಾತ್ರೆಗೆ ಹೋಗೋಣ ಬನ್ನಿ]
ಶ್ರೀ ದೇವರಿಗೆ ಸೇವೆಯನ್ನು ಕೊಡಲು ಅಪೇಕ್ಷಿಸುವವರು ಕುಂಜಿಬೆಟ್ಟು ಕರ್ನಾಟಕ ಬ್ಯಾಂಕ್ ಶಾಖೆಯ ಖಾತೆ ಸಂಖ್ಯೆ 8032500102613701 ಕ್ಕೆ ಜಮಾ ಪಡಿಸಬಹುದು. ಅಥವಾ ಮನಿಯಾರ್ಡರ್ ಮೂಲಕ ಯಾ ಸ್ವತಃ ಬಂದು ಕೊಡಬೇಕಾಗಿ ದೇಗುಳದ ಅಧಿಕಾರಿಗಳು ಕೋರಿದ್ದಾರೆ. ರೂ 100ಕ್ಕಿಂತ ಹೆಚ್ಚಿನ ಮೊತ್ತದ ಸೇವೆ ಸಲ್ಲಿಸಿದವರಿಗೆ ಪ್ರಸಾದವನ್ನು ಪೋಸ್ಟ್ ಮೂಲಕ ಕಳಿಸಲಾಗುವುದು ಎಂದೂ ತಿಳಿಸಲಾಗಿದೆ.












Click it and Unblock the Notifications