ಅವ್ಯವಸ್ಥೆಯ ಆಗರವಾದ ಮಂಗಳೂರಿನ ಪಿಲಿಕುಳ ಮೃಗಾಲಯ: ಮೂಕಪ್ರಾಣಿಗಳಿಗೆ ಸಂಕಟ
ಮಂಗಳೂರು, ಜೂನ್, 12: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನ ಪ್ರವಾಸಿಗರ ಹಾಟ್‌ಸ್ಟಾಟ್ ಅಂತಲೇ ಹೆಸರುವಾಸಿಯಾಗಿದೆ. ಆದರೆ ಇದೀಗ ಪಿಲಿಕುಳದ ಹಿಂದಿರುವ ಹುಳುಕು ಬಯಲಾಗಿದೆ. ಅವ್ಯವಸ್ಥೆ, ಅಕ್ರಮಗಳ ಕೂಪವಾಗಿರುವ ಈ ತಾಣ ಪ್ರಾಣಿ-ಪಕ್ಷಿಗಳ ವಾಸಕ್ಕೂ ಕಂಟಕವಾಗಿದೆ.
ಪಿಲಿಕುಳ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನವು ಮಂಗಳೂರಿನ ಜನಪ್ರಿಯ ಪ್ರಾಣಿ - ಪಕ್ಷಿಗಳ ಸಂಗ್ರಹಾಲಯ ಆಗಿದೆ. ಇದು ದೇಶ-ವಿದೇಶಗಳ ವಿಶಿಷ್ಟ ತಳಿಯ ಪ್ರಾಣಿ - ಪಕ್ಷಿಗಳು, ಸರಿಸೃಪಗಳು, ಸಸ್ತನಿಗಳೇ ಜನಾಕರ್ಷಣೆಯ ಕೇಂದ್ರಬಿಂದು ಆಗಿದೆ. ಆದರೆ ಈ ಮೂಕಪ್ರಾಣಿಗಳು ತಮಗಾಗುವ ತೊಂದರೆಗಳನ್ನು ಯಾರಲ್ಲೂ ಹೇಳಲಾಗದೆ ಸಂಕಟಪಡುತ್ತಿವೆ.

ಇಲ್ಲಿನ ಪ್ರಣಿ, ಪಕ್ಷಿಗಳಿಗೆ ತಿನ್ನಲು ಸರಿಯಾದ ಆಹಾರವಿಲ್ಲ. ಕೊಳೆತ ತರಕಾರಿ - ಮಾಂಸಗಳೇ ಇವುಗಳಿಗೆ ಆಹಾರ. ಸ್ವಚ್ಛ ನೀರಿಲ್ಲ. ಮತ್ತೊಂದೆಡೆ ಕಬ್ಬಿಣದ ಮೆಷ್‌ಗಳನ್ನು ಅಡ್ಡ ಕಟ್ಟಿರುವುದರಿಂದ ಪ್ರಾಣಿಗಳು ವಾಸಸ್ಥಾನ ಬಿಟ್ಟು ಹೊರಬಾರದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.
ಜೊತೆಗೆ ಪ್ರಾಣಿಗಳಿಗೆ ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲ. ಇದರಿಂದ ಇತ್ತೀಚೆಗೆ ಗಾಯಾಳು ಹುಲಿಯೊಂದು ಅಸುನೀಗಿತ್ತು ಎಂದು ಇಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ. ಹೀಗೆ ಪ್ರಾಣಿಗಳಿಗೆ ಬದುಕಲು ಪೂರಕ ವಾತಾವರಣವಿಲ್ಲದೆ ಪಿಲಿಕುಳ ಅವ್ಯವಸ್ಥೆಯ ಆಗರವಾಗಿದೆ. ಆದರೆ ಈ ಮೂಕಪ್ರಾಣಿಗಳ ಅರಣ್ಯರೋದನ ಉದ್ಯಾನವನದಾಚೆಗೆ ಕೇಳುತ್ತಿಲ್ಲ. ಅವುಗಳ ಕೂಗಿನ ಹಿಂದಿನ ನೋವು ಯಾರಿಗೂ ಅರ್ಥವಾಗುತ್ತಿಲ್ಲ. ಹೀಗೆ ಇಲ್ಲಿನ ಆಡಳಿತ ಮಂಡಳಿಯ ಅವ್ಯವಸ್ಥೆಯಿಂದ ಅರಣ್ಯವಾಸಿ ಪ್ರಾಣಿಗಳು ಸೊರಗುತ್ತಿವೆ.
ಪಶ್ಚಿಮ ಘಟ್ಟಗಳ ಪ್ರಬೇಧಗಳ ಮರ-ಗಿಡಗಳನ್ನು ಪಿಲಿಕುಳ ನಿಸರ್ಗಧಾಮದಲ್ಲಿ ಬೆಳೆಸಬೇಕಿತ್ತು. ಆದರೆ ಇಲ್ಲಿ ಬರೀ ಅಕೇಶಿಯಾ ಮರಗಳು ಯಥೇಚ್ಛವಾಗಿ ಬೆಳೆದಿವೆ. ಅಕೇಶಿಯಾ ಮರಗಳು ಉಷ್ಣಾಂಶವನ್ನು ತಡೆಹಿಡಿಯುವುದಿಲ್ಲ. ಆದ್ದರಿಂದ ಇದರಡಿಯಲ್ಲಿ ಹುಲ್ಲು ಕೂಡ ಬೆಳೆಯಲು ಸಾಧ್ಯವಿಲ್ಲದಂತಾಗಿದೆ. ಇದರಿಂದ ಪ್ರಾಣಿಗಳು ತೊಂದರೆ ಅನುಭವಿಸುತ್ತಲೇ ಬಂದಿವೆ.
ಪಿಲಿಕುಳದಲ್ಲಿ ತುಂಬಾ ವರ್ಷಗಳಿಂದ ನಿರ್ದೇಶಕರಾಗಿ ಹೆಚ್.ಜಯಪ್ರಕಾಶ ಭಂಡಾರಿಯವರೇ ಇದ್ದಾರೆ. 2018ರ ಬಳಿಕ ಪಿಲಿಕುಳ ಪ್ರಾಧಿಕಾರವಾಗಿ ಸರ್ಕಾರದ ಸುಪರ್ದಿಗೆ ಬಂದರೂ ಅವರೇ ನಿರ್ದೇಶಕರಾಗಿ ಮುಂದುವರಿದಿದ್ದಾರೆ. ಇವರೇ ಈ ಎಲ್ಲ ಅಕ್ರಮಗಳ ರೂವಾರಿ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್ಇಸಿಎಫ್) ಗಂಭೀರ ಆರೋಪ ಮಾಡಿದೆ.
ಅಲ್ಲದೆ ಮರಗಳನ್ನು ಉಳಿಸಿ ರಕ್ಷಿಸಬೇಕಾದ ಈ ನಿಸರ್ಗಧಾಮದಲ್ಲಿ ಮರಗಳನ್ನು ಕಡಿದು ಕಳ್ಳ ಸಾಗಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಅಲ್ಲದೆ ಇದಕ್ಕೆ ನಿದರ್ಶನವೆಂಬಂತೆ ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಸಾಗಾಟಕ್ಕಿಟ್ಟಿರುವ ದೃಶ್ಯ ಕಂಡುಬಂದಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಎನ್ಇಸಿಎಫ್ ಸೆಂಟ್ರಲ್ ಝೂ ಅಥಾರಿಟಿ ಹಾಗೂ ರಾಜ್ಯದ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.
ಪಿಲಿಕುಳ ನಿಸರ್ಗಧಾಮದ ಪ್ರಾಣಿಗಳ ಮೂಕವೇದನೆಯನ್ನು ಶಮನಗೊಳಿಸಲು ಎಲ್ಲಾ ಪ್ರಾಣಿಗಳನ್ನು ಅರಣ್ಯಕ್ಕೆ ಬಿಡಬೇಕು. ಬಳಿಕ ಇಲ್ಲಿನ ಅಕೇಶಿಯಾ ಮರಗಳನ್ನು ಸಂಪೂರ್ಣ ತೆರವುಗೊಳಿಸಿ ಪಶ್ಚಿಮಘಟ್ಟಗಳ ಮಾದರಿಯಲ್ಲಿ ಅರಣ್ಯವನ್ನು ಮತ್ತೆ ಸೃಷ್ಟಿಸಬೇಕು. ಬಳಿಕವೇ ಮತ್ತೆ ಇಲ್ಲಿಗೆ ಪ್ರಾಣಿಗಳನ್ನು ರವಾನಿಸಬೇಕು. ಅಲ್ಲದೆ ಇಲ್ಲಿನ ಆಡಳಿತ ಮಂಡಳಿಯ ಅಕ್ರಮಗಳ ಬಗ್ಗೆ ಜಿಲ್ಲಾಡಳಿತದಿಂದ ತನಿಖೆ ನಡೆಸಬೇಕೆಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯಕರ್ತ ಬೆನೆಡಿಕ್ಟ್ ಫೆರ್ನಾಂಡೀಸ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಈ ಪ್ರಾಣಿಸಂಗ್ರಹಾಲಯದಲ್ಲಿ ಯಾವುದೋ ನಿವೃತ್ತ ಎಸಿಎಫ್ ಗೆ ಜವಾಬ್ದಾರಿ ವಹಿಸದೆ ತಾಂತ್ರಿಕವಾಗಿ ಅರಿವು ಇದ್ದವರಿಗೆ ಇಲ್ಲಿನ ಜವಾಬ್ದಾರಿವಹಿಸಬೇಕು. ಅಲ್ಲದೆ ಇಲ್ಲಿನ ಅಕ್ರಮ, ಅವ್ಯವಹಾರಗಳ ಎಲ್ಲಾ ದಾಖಲೆಗಳನ್ನು ಪಡೆದು ತಾರ್ಕಿಕ ಅಂತ್ಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ..
ಇನ್ನು ಎನ್ಇಸಿಎಫ್ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಮಾತನಾಡಿ, ಎನ್ಇಸಿಎಫ್ ಸ್ಕ್ವಾಡ್ ಪಿಲಿಕುಳ ನಿಸರ್ಗಧಾಮಕ್ಕೆ 15 ದಿನಗಳ ಹಿಂದೆ ಭೇಟಿ ನೀಡಿದಾಗ ಅಲ್ಲಿ ನಮಗೆ ಆಘಾತಕಾರಿ ಅಂಶಗಳು ಕಂಡುಬಂದಿವೆ. ಪ್ರಾಣಿ - ಪಕ್ಷಿಗಳಿಗೆ ಸರಿಯಾದ ವ್ಯವಸ್ಥೆಯಿಲ್ಲ. ಇಲ್ಲಿನ ತುಕ್ಕು ಹಿಡಿದ ಮೆಷ್‌ಗಳಿಂದ ಪ್ರಾಣಿಗಳು ತೊಂದರೆ ಅನುಭವಿಸುತ್ತಿವೆ ಎಂದರು.
ಹಾಗೆಯೇ ಸಣ್ಣ ಗೂಡಿನಂತಹ ಗೇಜ್‌ನಲ್ಲಿ 50-60 ಗಿಳಿಗಳು ಬಂಧನದಲ್ಲಿಡುವಂತೆ ಕೂಡಿ ಹಾಕಿದ್ದಾರೆ. ಸ್ವಾಭಾವಿಕವಾಗಿ ಸ್ವಚ್ಛಂದವಾಗಿ ವಿಹರಿಸಬೇಕಾದ ಪ್ರಾಣಿ - ಪಕ್ಷಿಗಳು ಮೂಕವೇದನೆಯನ್ನು ಅನುಭವಿಸುತ್ತಿವೆ. ಪಿಲಿಕುಳ ನಿಸರ್ಗಧಾಮವನ್ನು ಪಶ್ಚಿಮಘಟ್ಟದ ಯಥಾರೂಪ ಮಾಡಲೆಂದು ಸೃಷ್ಟಿಸಲಾಗಿತ್ತು. ಆದರೆ ಇಲ್ಲಿ 90% ಬರೀ ಅಕೇಶಿಯಾ ಮರಗಳೇ ತುಂಬಿವೆ ಎಂದರು.
ಪಿಲಿಕುಳ ನಿಸರ್ಗಧಾಮಕ್ಕೆ ಪಚ್ಚನಾಡಿಯ ಎಸ್‌ಟಿಪಿಯಿಂದ ಮರುಸಂಸ್ಕರಣೆ ಮಾಡದ ನೀರನ್ನು ಹರಿಸಲಾಗುತ್ತದೆ. ನಿಸರ್ಗಧಾಮದ ನಿರ್ವಹಣೆಗೆಂದು ಸೋಮವಾರ ಪ್ರವಾಸಿಗರ ಭೇಟಿಗೆ ಅವಕಾಶ ನೀಡದೆ ಪಿಲಿಕುಳಕ್ಕೆ ರಜೆ ಇರುತ್ತದೆ. ಆದರೆ ಅಲ್ಲಿನ ಅಂಗಡಿಗಳಿಗೆ ವ್ಯಾಪಾರಕ್ಕಾಗಿ ವಾರಪೂರ್ತಿ ಉದ್ಯಾನವನವನ್ನು ತೆರೆಲಾಗುತ್ತದೆ.
ಅಲ್ಲದೆ ಇಲ್ಲಿನ ನಿರ್ದೇಶಕರ ಅವಧಿ ಮೂರು ವರ್ಷ ಆದರೆ, ಪಿಲಿಕುಳ ನಿಸರ್ಗಧಾಮವು ಪ್ರಾಧಿಕಾರವಾದರೂ ಅವರೇ ನಿರ್ದೇಶಕರಾಗಿ ಮುಂದುವರಿಯುತ್ತಿದ್ದಾರೆ. ಆದ್ದರಿಂದ ಇಲ್ಲಿನ ಎಲ್ಲಾ ಅಕ್ರಮ, ಅವ್ಯವಹಾರಗಳ ಸಂಪೂರ್ಣ ತನಿಖೆಯಾಗಬೇಕು. ಆದ್ದರಿಂದ ಈ ಎಲ್ಲಾ ವಿಚಾರವನ್ನು ದ.ಕ.ಜಿಲ್ಲಾಧಿಕಾರಿಯವರ ಗಮನಕ್ಕೂ ತಂದಿದ್ದೇವೆ. ಅಲ್ಲದೆ ಇಲ್ಲಿನ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣುವವರೆಗೆ ಹೋರಾಟ ನಡೆಸುತ್ತೇವೆ ಎಂದು ಶಶಿಧರ್ ಶೆಟ್ಟಿ ಹೇಳಿದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications