ನಕ್ಸಲ್ ನಿಗ್ರಹ ದಳದ 40 ವರ್ಷದ ಸಿಬ್ಬಂದಿ ಹೃದಯಾಘಾತದಿಂದ ಸಾವು
ಮಂಗಳೂರು, ಜೂನ್ 16 : ಕೂಂಬಿಂಗ್ ಕಾರ್ಯಾಚರಣೆ ವೇಳೆ ಎಎನ್ ಎಫ್ ಸಿಬ್ಬಂದಿ ನಿಧನರಾಗಿದ್ದಾರೆ. ಹೃದಯಾಘಾತದಿಂದ ಎಎನ್ ಎಫ್ ಸಿಬ್ಬಂದಿ, ಕಾರ್ಕಳದ ರಂಗಸ್ವಾಮಿ (40) ಮೃತಪಟ್ಟವರು. ಸುಳ್ಯದ ಕೆವಿಜಿ ಆಸ್ಪತ್ರೆಗೆ ರಂಗಸ್ವಾಮಿ ಮೃತದೇಹವನ್ನು ಸಹ ಸಿಬ್ಬಂದಿ ಕೊಂಡೊಯ್ದಿದ್ದಾರೆ.
ಅಂದ ಹಾಗೆ, ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಶಂಕಿತ ನಕ್ಸಲರು ಕಾಣಿಸಿಕೊಂಡಿದ್ದರು. ಸುಳ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಹಾಡಿಕಲ್ ಜಯರಾಮ್ ಗೌಡ ಅವರಿಗೆ ಸೇರಿದ ರಬ್ಬರ್ ಶೆಡ್ ಗೆ ಶಂಕಿತ ನಕ್ಸಲರು ಬಂದಿದ್ದರು. ಶನಿವಾರದಂದು ಎಎನ್ ಎಫ್ ತಂಡ ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭಿಸಿತ್ತು. ಸುಳ್ಯ, ಉಪ್ಪಿನಂಗಡಿಯಲ್ಲಿ 32 ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ರಂಗಸ್ವಾಮಿ ಅವರಿಗೆ ಅನಾರೋಗ್ಯವಿತ್ತು. ಆದರೂ ಅವರನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಅಸ್ವಾಸ್ಥ್ಯದ ಮಧ್ಯೆಯೂ ಕಾರ್ಯ ನಿರ್ವಹಿಸಿದ್ದರಿಂದಲೇ ಮೃತಪಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಜತೆಗೆ ಸಿಬ್ಬಂದಿ ಕೊರತೆ ಇದೆ. ಹಿರಿಯ ಅಧಿಕಾರಿಗಳಿಗೆ ಸಿಗುವಂಥ ರಿಯಾಯಿತಿಗಳು ಯಾವುವೂ ಸಿಬ್ಬಂದಿಗೆ ಸಿಗುವುದಿಲ್ಲ. ರಜಾ ಸಿಗುವುದೆಲ್ಲ ದೂರದ ಮಾತಾಯಿತು ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ಹೇಳಿಕೊಳ್ಳುತ್ತಾರೆ.












Click it and Unblock the Notifications