ವನಸಿರಿಗಳ ಉತ್ಪನ್ನ ಬಳಸಲು ಆನಂದ ಗುರೂಜಿ ಕರೆ

ಮಂಗಳೂರು, ಜುಲೈ 2: ನೈಜ ವನಸಿರಿಗಳಿಂದ ಉತ್ಪಾದಿಸಲಾದ ಆಯುರ್ವೇದದ ಉತ್ಪನ್ನ ಹಾಗೂ ಔಷಧಗಳನ್ನು ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಯುರ್ ವಿವೇಕ್ ಮಳಿಗೆಯಲ್ಲಿ ಅಂತಹ ಉತ್ಪನ್ನಗಳು ಒಂದೆಡೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಡಾ.ಮಹರ್ಷಿ ಆನಂದ ಗುರೂಜಿ ಹೇಳಿದರು.

ಮಂಗಳೂರಿನ ಹಂಪನಕಟ್ಟೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಎದುರು ನೂತನವಾಗಿ ತೆರೆಯಲಾದ ಆಯುರ್ ವಿವೇಕ್ ಆಯುರ್ವೇದದ ಔಷಧಿ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು. ವನಸಿರಿಗಳಿಂದ ತಯಾರಿಸಿದ ನೈಸರ್ಗಿಕ ಉತ್ಪನ್ನಗಳನ್ನು ಬಳಸಿದರೆ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಎಲ್ಲರೂ ಈ ಉತ್ಪನ್ನಗಳನ್ನು ಬಳಸಿ ಎಂದು ಕರೆ ನೀಡಿದರು. ಇದೇ ಸಂದರ್ಭ ಟಿ.ವಿ ರಮಣ್ ಪೈ ಸಭಾಂಗಣದಲ್ಲಿ ಧನ್ವಂತರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆರ್ಶೀವಚನ ನೀಡಿದರು. ಮಂಗಲ್ಪಾಡಿ ನರೇಶ್ ಶೆಣೈಯವರು ತಮ್ಮ ತಂದೆಯ ನೆನಪಿನಲ್ಲಿ ಔಷಧೀಯ ಸಸಿಗಳನ್ನು ಜನರಿಗೆ ವಿತರಿಸಿದರು.

anand guruji suggested to use natural products

ಧನ್ವಂತರಿ ಮಹಾವಿಷ್ಣು ಹಾಗೂ ಸರ್ವೋತೋಭದ್ರ ಅಭಿವೃದ್ಧಿ ಯಂತ್ರ ಅಥವಾ ಸಂಪತ್ ಮಹಾಲಕ್ಷ್ಮಿ ಯಂತ್ರವನ್ನು ಪ್ರತಿಯೊಬ್ಬರ ಮನೆಗೆ ಕಳುಹಿಸಿಕೊಡುತ್ತೇವೆ. ಅದನ್ನು ಮಂಗಳೂರು ಭಾಗಕ್ಕೆ ವಿವೇಕ್ ಟ್ರೇಡರ್ಸ್ ನ ನರೇಶ್ ಶೆಣೈ ಹಾಗೂ ಸ್ನೇಹಿತರ ಸಹಕಾರದಿಂದ ವಿತರಿಸುವ ಯೋಜನೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಮಂಗಲ್ಪಾಡಿ ನರೇಶ್ ಶೆಣೈ ಹಾಗೂ ಕುಟುಂಬದಿಂದ ಮಹರ್ಷಿ ಆನಂದ ಗುರೂಜಿ ದಂಪತಿಯನ್ನು ಸನ್ಮಾನಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+