ಸಂಜೆ 6ರ ಬದಲು ರಾತ್ರಿ 11ಕ್ಕೆ ಮಂಗಳೂರಿಗೆ ಅಮಿತ್ ಶಾ

ಮಂಗಳೂರು, ಅಕ್ಟೋಬರ್ 2: ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಇಂದು (ಸೋಮವಾರ) ಸಂಜೆ ಆರು ಗಂಟೆಗೆ ಮಂಗಳೂರಿಗೆ ಬರಬೇಕಿತ್ತು. ಅಮಿತ್ ಶಾ ಸ್ವಾಗತಕ್ಕೆ ಕರಾವಳಿಯ ಕಮಲ ಪಾಳಯ ಭಾರೀ ಸಿದ್ಧತೆ ಕೂಡ ನಡೆಸಿತ್ತು. ಆದರೆ ಇದೀಗ ಪ್ರಯಾಣದ ವೇಳಾಪಟ್ಟಿಯಲ್ಲಿ ಅದೇನು ಬದಲಾವಣೆ ಆಯಿತೋ ರಾತ್ರಿ ಹನ್ನೊಂದಕ್ಕೆ ಮಂಗಳೂರಿಗೆ ಬರಲಿದ್ದಾರೆ.

ಇಲ್ಲಿಂದ ಕೇರಳಕ್ಕೆ ತೆರಳಲಿದ್ದಾರೆ. ಇನ್ನು ಅವರ ಸ್ವಾಗತಕ್ಕಾಗಿ ಕಾದು ಕುಳಿತಿದ್ದ ಬಿಜೆಪಿ ಕಾರ್ಯಕರ್ತರಲ್ಲಿ ಭಾರೀ ನಿರಾಶೆ ಉಂಟಾಗಿದೆ. ಪೂರ್ವ ನಿಗದಿಯಂತೆ ಎಲ್ಲವೂ ಆಗಿದ್ದರೆ ಸಂಜೆ 6 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ತಲುಪಬೇಕಾಗಿತ್ತು.

Amit Shah

ಅಮಿತ್ ಶಾ ಭೇಟಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಕೇರಳದ ಗಡಿಭಾಗ ತಲಪಾಡಿ ತನಕ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಬೇಕು ಎಂದು ಯೋಜನೆ ರೂಪಿಸಿದ್ದ ಬಿಜೆಪಿ ಕಾರ್ಯಕರ್ತರಿಗೆ ನಿರಾಶೆಯಾಗಿದೆ. ಸೋಮವಾರ ರಾತ್ರಿ ಕೇರಳಕ್ಕೆ ಹೋಗಲಿರುವ ಅವರು, ಮಂಗಳವಾರ ಕೇರಳದ ಪಯ್ಯನೂರಿನಲ್ಲಿ ಜನರಕ್ಷಾ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಮಂಗಳವಾರ ರಾತ್ರಿ ಮಂಗಳೂರಿಗೆ ಬಂದು, ಅಕ್ಟೋಬರ್ 4ರಂದು ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+