ಅಸ್ಪೃಶ್ಯತೆ ನಿವಾರಣೆಗೆ ದಲಿತರ ಮನೆಯಲ್ಲಿ ಭಜನೆ
ಮೂರು ಪ್ರತ್ಯೇಕ ಘಟನೆಗಳಲ್ಲಿ ಅಸ್ಪೃಶ್ಯತೆ ನಿವಾರಣೆಗೆ ದಲಿತರ ಮನೆಯಲ್ಲಿ ಭಜನೆ ಮಾಡಲಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಪೈಪ್ ಕಟ್ ಮಾಡಿ 15 ಮನೆಗಳಿಗೆ ನೀರಿಲ್ಲ. ಯುವಕರ ತಂಡವೊಂದು ಅಶ್ವತ್ಥ ಮರದ ಬುಡದಲ್ಲಿದ್ದ ದೇವರ ಫೋಟೋ ವಿಲೇವಾರಿ ಮಾಡಿದೆ.
ಮಂಗಳೂರು, ಎಪ್ರಿಲ್ 2 : ಹಿಂದೂ ಸಮಾಜದಲ್ಲಿರುವ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಇಲ್ಲೊಂದು ಕಡೆ ವಿಭಿನ್ನ ಪ್ರಯತ್ನ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯವರು ದಲಿತರ ಮನೆಯಂಗಳದಲ್ಲಿ ಭಜನಾ ಕಾರ್ಯಕ್ರಮ ನಡೆಸಿದರು.
ಮೊದಲ ಹಂತವಾಗಿ ಭಜನಾ ಕಾರ್ಯಕ್ರಮವು ಅಲಗುರಿಮಜಲಿನ ತನಿಯಪ್ಪ ಎಂಬುವವರ ಮನೆಯಲ್ಲಿ ನಡೆಯಿತು. ಮುಂದಿನ ದಿನಗಳಲ್ಲಿ ಉಳಿದವರ ಮನೆಗಳಲ್ಲೂ ಭಜನಾ ಕಾರ್ಯಕ್ರಮ ನಡೆಯಲಿದೆ.[ಇದು ಮಂಗಳೂರು ಟ್ರಾಫಿಕ್ ಪೊಲೀಸರ ಸಿನಿಮೀಯ ಚೇಸಿಂಗ್ ಸ್ಟೋರಿ..!]

ಅರಣ್ಯ ಇಲಾಖೆ 'ನೀರಿನ' ಉಪಟಳ
ಅರಣ್ಯಕ್ಕೆ ಹಿಡಿದ ಕಾಡ್ಗಿಚ್ಚು ನಂದಿಸಲೆಂದು ಬಂದ ಅರಣ್ಯ ಇಲಾಖೆ ಸಿಬ್ಬಂದಿ ನೀರು ಪೂರೈಕೆ ಪೈಪುಗಳನ್ನು ಕಡಿತ ಮಾಡಿದ ಘಟನೆ ಸುಳ್ಯ ತಾಲೂಕಿನ ಮರ್ಕಂಜ ಮತ್ತು ಅರಂತೋಡು ಗ್ರಾಮದ ಗಡಿ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಕಾಲೊನಿ ನಿವಾಸಿಗಳು ಕುಡಿಯುವ ನೀರಿಗಾಗಿ ಅಳವಡಿಸಿದ್ದ ಪೈಪುಗಳನ್ನು ಕಡಿದು ಹಾಕಿದ್ದರಿಂದ ಸುಮಾರು 15ಕ್ಕೂ ಅಧಿಕ ಕುಟುಂಬಗಳ ಹನಿ ನೀರಿಲ್ಲದೆ ಪರದಾಡುವ ಸನ್ನಿವೇಶ ಎದುರಾಗಿದೆ.

ಮೈರಾಜೆ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ ಎಂಬ ಸುದ್ದಿ ಕೇಳಿ ಬಂದಿದ್ದ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿ ಪೈಪುಗಳನ್ನು ಕತ್ತಿಯಿಂದ ಯದ್ವಾತದ್ವ ಕಡಿದು ತುಂಡರಿಸಿದ್ದು, ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು, ಇದೀಗ ಇಲ್ಲಿನ ಮಂದಿ ಈ ಬೇಸಗೆಯಲ್ಲಿ ನೀರಿಲ್ಲದೆ ಕಂಗೆಟ್ಟಿದ್ದಾರೆ.[ಪ್ರಿಯತಮ, ಸ್ನೇಹಿತರಿಂದ ಬಾಲಕಿ ಮೇಲೆ ಅತ್ಯಾಚಾರ]

ಅರಣ್ಯ ಇಲಾಖೆ ದೌರ್ಜನ್ಯಕ್ಕೆ ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಸ್ಥಳೀಯರಾದ ಅಣ್ಣು ಕಟ್ಟಕೋಡಿ, "ಸೋಮವಾರದ ಒಳಗಾಗಿ ಪೈಪ್ ಅಳವಡಿಸಿಕೊಟ್ಟು ನೀರಿನ ವ್ಯವಸ್ಥೆ ಮಾಡಿಸಿಕೊಡದಿದ್ದರೆ ಸುಳ್ಯ ಅರಣ್ಯ ಇಲಾಖೆಯ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತೇವೆ," ಎಂದು ಎಚ್ಚರಿಸಿದ್ದಾರೆ.
ಅಶ್ವತ್ಥ ಕಟ್ಟೆಯ ದೇವರ ಫೋಟೋಗೆ ಮುಕ್ತಿ
ಹಿಂದೂ ಯುವಕರ ತಂಡವೊಂದು ಹಳೆಯ ಅಶ್ವತ್ಥ ಕಟ್ಟೆಯ ಕೆಳಗೆ ರಾಶಿ ಹಾಕಲಾಗಿದ್ದ ದೇವರ ಹಳೆಯ ಭಾವಚಿತ್ರಗಳು ಮತ್ತು ಇತರ ದೇವರ ಸಾಮಗ್ರಿಗಳನ್ನು ವಿಲೇವಾರಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಉದ್ಯಾವರ ಕಿನ್ನಿಮುಲ್ಕಿಯ ಯುವಕರ ತಂಡ ಈ ಕೆಲಸವನ್ನು ಮಾಡಿದ್ದು, ಬಲಾಯಿಪಾದೆ ಎಂಬಲ್ಲಿರುವ ಹಳೆಯ ಅಶ್ವತ್ಥ ಮರದ ಬುಡದಲ್ಲಿ ರಾಶಿ ಹಾಕಲಾಗಿದ್ದ ದೇವರ ಹಲವು ಫೋಟೋಗಳನ್ನು ಮತ್ತು ಇತರ ದೇವರ ಸಾಮಗ್ರಿಗಳನ್ನು ತೆರವುಗೊಳಿಸಿದ್ದಾರೆ.

ಅಶ್ವತ್ಥ ಮರದ ಕೆಳಗೆ ಎರಡು ಅಡಿ ಎತ್ತರದ ಕೃಷ್ಣನ ವಿಗ್ರಹವೂ ಸೇರಿದಂತೆ ಸುಮಾರು 200ಕ್ಕೂ ಅಧಿಕ ಫೋಟೊಗಳು ರಾಶಿಬಿದ್ದಿದ್ದವು. ಎಲ್ಲಾ ಫೋಟೋಗಳನ್ನು ಗೋಣಿಚೀಲದಲ್ಲಿ ತುಂಬಿಸಿ ಧಾರ್ಮಿಕ ವಿಧಿವಿಧಾನದೊಂದಿಗೆ ವಿಲೇವಾರಿ ಮಾಡಲಾಯಿತು. ಅಶ್ವತ್ಥ ಮರದ ಬುಡವನ್ನು ಶುದ್ಧೀಕರಿಸಿದರು ಮಾತ್ರವಲ್ಲ ಇಲ್ಲಿ ಯಾರೂ ದೇವರ ಫೋಟೋಗಳನ್ನು ಎಸೆಯಬಾರದು ಎಂಬ ಸೂಚನೆ ನೀಡುವ ಬ್ಯಾನರನ್ನು ಅಳವಡಿಸಿದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications