ರಾಜ್ಯ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮಂಗಳೂರಿನ ಆದಿತ್ಯ ಶೆಣೈ
ಮಂಗಳೂರು, ಜನವರಿ 17: ಕರ್ನಾಟಕ ರಾಜ್ಯ ಮಟ್ಟದ ಅಂತರ್ ಶಾಲಾ/ಕಾಲೇಜು ಕರಾಟೆ ಚಾಂಪಿಯನ್ ಶಿಪ್-2019 ರ ಸ್ಪರ್ಧೆಯಲ್ಲಿ ಮಂಗಳೂರು ನಗರದ ಕೆನರಾ ಹೈಸ್ಕೂಲ್ ಉರ್ವಾದ 5 ನೇ ತರಗತಿ ವಿದ್ಯಾರ್ಥಿ ಕೆ. ಆದಿತ್ಯ ಶೆಣೈ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ.
ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಹಾಗೂ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಆಲೈಡ್ ಆರ್ಟ್ಸ್ ಮಂಗಳೂರು ಇದರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಸ್ಪರ್ಧೆ ನಡೆದಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸುಮಾರು 350 ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.

ಹಳದಿ ಬೆಲ್ಟ್ ಹುಡುಗರ 10 ವರ್ಷದ ವಿಭಾಗದಲ್ಲಿ ಆದಿತ್ಯ ಶೆಣೈ ತೃತೀಯ ಸ್ಥಾನ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ಪರ್ಧೆಯನ್ನು ಜ.13 ಮತ್ತು 14ರಂದು ಆಯೋಜಿಸಲಾಗಿತ್ತು.












Click it and Unblock the Notifications