ಮಂಗಳೂರು: ಸಮನ್ಸ್ ನೀಡಲು ಬಂದು ಅಪ್ರಾಪ್ತೆಯನ್ನೇ ಅತ್ಯಾಚಾರ ಮಾಡಿದ ಪೊಲೀಸ್ ಕಾನ್ಸ್‌ಟೆಬಲ್!

ಮಂಗಳೂರು, ಸೆಪ್ಟೆಂಬರ್ 28: ಸಮನ್ಸ್ ನೀಡಲು ಒಂದು ಮನೆಗೆ ತೆರಳುತ್ತಿದ್ದ ಪೊಲೀಸ್ ಕಾನ್ಸ್‌ಟೆಬಲ್, ಆ ಮನೆಯ ಅಪ್ರಾಪ್ತ ಬಾಲಕಿಯನ್ನೇ ಅತ್ಯಾಚಾರ ಮಾಡಿದ ಹೀನ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಗ್ರಾಮದ ಬೀರಂತಡ್ಕ ಎಂಬಲ್ಲಿ ನಡೆದಿದೆ. ಕಡಬ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೆಬಲ್ ಶಿವರಾಜ್ ನಾಯಕ್, ಬಾಲಕಿಯನ್ನು ಅತ್ಯಾಚಾರ ಮಾಡಿದ ಪಾಪಿ ಪೊಲೀಸ್ ಆಗಿದ್ದಾನೆ.

ಕುಂತೂರು ಗ್ರಾಮದ ಬೀರಂತಡ್ಕ ನಿವಾಸಿಯೊಬ್ಬರ 18 ವರ್ಷದ ಹಿರಿಯ ಮಗಳು ಅಪ್ರಾಪ್ತ ಬಾಲಕಿ, ಈ ಹಿಂದಿನ ಪ್ರಕರಣದ ಸಂತ್ರಸ್ತೆಯಾಗಿದ್ದು, ಈ ಪ್ರಕರಣದ ದಾಖಲೆ ಮತ್ತು ಸಮನ್ಸ್ ನೀಡುವ ಸಲುವಾಗಿ ಕಡಬ ಠಾಣೆಯ ಪೊಲೀಸ್ ಕಾನ್ಸ್‌ಟೆಬಲ್ ಶಿವರಾಜ್ ನಾಯಕ್ ಆ ಮನೆಗೆ ಹೋಗುತ್ತಿದ್ದ.

ಕಳೆದ ಆರು ತಿಂಗಳುಗಳಿಂದ ಶಿವರಾಜ್ ಆ ಮನೆಗೆ ಹೋಗುತ್ತಿದ್ದು, ಈ ವೇಳೆ ಹಿರಿಮಗಳ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪ್ರಕರಣ ಮುಗಿದರೂ ಶಿವರಾಜ್ ಬೇರೆ ಬೇರೆ ಕಾರಣದ ನೆಪವೊಡ್ಡಿ ಮನೆಗೆ ‌ಬರುತ್ತಿದ್ದು, ಮನೆಯವರು ಯಾರೂ ಇಲ್ಲದ ಸಂದರ್ಭದಲ್ಲಿ ಬಾಲಕಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

Mangaluru: Police Constable Shivaraj Nayak Raped A Minor Girl In Kadaba Taluk

ಬಾಲಕಿ ಗರ್ಭವತಿ ಆದ ಸಂದರ್ಭದಲ್ಲಿ ಶಿವರಾಜ್ ನಾಯಕ್‌ಗೆ ಬಾಲಕಿ ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಈ ವೇಳೆ ಶಿವರಾಜ್, ನಾನು ಮದುವೆಯಾಗೋದಿಲ್ಲ, ಗರ್ಭಿಣಿ ಆಗಿದ್ದರೆ ಅದನ್ನು ಅಬಾರ್ಷನ್ ಮಾಡಲು ತಗುಲುವ ವೆಚ್ಚ ಕೊಡುತ್ತೇನೆ ಎಂದು ಕೈ ತೊಳೆದುಕೊಳ್ಳಲು ಯತ್ನಿಸಿದ್ದಾನೆ.

ಈ ವಿಷಯ ಮನೆಯವರಿಗೆ ಗೊತ್ತಾಗಿ, ಮಗಳನ್ನು ಮದುವೆಯಾಗದಿದ್ದರೆ ಖರ್ಚು ಕೊಡುವುದು ಬೇಡ, ಅಬಾರ್ಷನ್ ಮಾಡಿಸುವುದೂ ಬೇಡ ಆಂತಾ ಅಘಾತಕ್ಕೊಳಗಾಗಿದ್ದಾರೆ. ಇದಾದ ಬಳಿಕ ಸೆಪ್ಟಂಬರ್ 18ರಂದು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿದ ತಾಯಿ- ಮಗಳು ಮತ್ತೆ ಮನೆಗೆ ಬಂದಿಲ್ಲ. ಬಾಲಕಿಯ ತಾಯಿ ತನ್ನ ಗಂಡನಿಗೆ ಕಾಲ್ ಮಾಡಿ, ಶಿವರಾಜ್ 35,000 ರೂಪಾಯಿಯನ್ನು ನಮಗೆ ಆನ್‌ಲೈನ್ ಮೂಲಕ ಕಳುಹಿಸಿದ್ದು, ನಾವೊಂದು ಕಡೆ ಇದ್ದೇವೆ ಅಂತಾ ಹೇಳಿದ್ದಾರೆ.

Mangaluru: Police Constable Shivaraj Nayak Raped A Minor Girl In Kadaba Taluk

ಪಾಪಿ ಪೊಲೀಸ್ ಕಾನ್ಸ್‌ಟೆಬಲ್‌ನ ನೀಚ ಕೃತ್ಯಕ್ಕೆ ತನ್ನ ಕುಟುಂಬ ಬೀದಿಗೆ ಬಂದಿರುವುದರಿಂದ ಬಡ ತಂದೆ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಶಿವರಾಜ್ ತನ್ನ ಪ್ರಭಾವವನ್ನು ಬಳಸಿ ತಾಯಿ- ಮಗಳನ್ನು ಅಜ್ಞಾತ ಸ್ಥಳದಲ್ಲಿ ಇರಿಸಿರುವ ಬಗ್ಗೆ ಕಡಬ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಾಲಕಿ ತಂದೆ ಕೊಟ್ಟ ದೂರಿನ ಅನ್ವರ ಕಡಬ ಠಾಣೆಯಲ್ಲಿ ಪೊಲೀಸರು ಆರೋಪಿ ಶಿವರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. 2021ರ ಮಾರ್ಚ್‌ನಿಂದ ಸಪ್ಟೆಂಬರ್ 18ರವರೆಗೆ ಬಾಲಕಿಗೆ ಅತ್ಯಾಚಾರ ಎಸಗಿರುವ ಬಗ್ಗೆ ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಪಾಪಿ ಪೊಲೀಸ್ ಕಾನ್ಸ್‌ಟೆಬಲ್ ವಿರುದ್ಧ ಫೋಸ್ಕೋ ಖಾಯಿದೆಯಡಿ ಪ್ರಕರಣ ದಾಖಲಾಗಿದೆ.

Mangaluru: Police Constable Shivaraj Nayak Raped A Minor Girl In Kadaba Taluk

ಆರೋಪಿ ಶಿವರಾಜ್ ನಾಯಕ್‌ನನ್ನು ಕಡಬ ಠಾಣಾ ಪೊಲೀಸರು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಶಿವರಾಜ್ ನಾಯಕ್‌ನನ್ನು ಕೂಡಲೇ ಕರ್ತವ್ಯದಿಂದ ಅಮಾನತುಗೊಳಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಆರೋಪಿಯನ್ನು ರಕ್ಷಿಸಲು ಪೊಲೀಸ್ ಇಲಾಖೆ ಪ್ರಯತ್ನಪಟ್ಟರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ಸಂಘಟನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+