ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಡಲ ನಗರಿಯಲ್ಲಿ ಸದ್ದು ಮಾಡುತ್ತಿದೆ ಬೊಂಡ ಐಸ್ ಕ್ರೀಮ್!

ಎಳನೀರಿನ ಗಂಜಿ ಕಾಯಿಯಲ್ಲಿ ಬರುವ ತೆಳುಗಂಜಿಯ ಜತೆಗೆ ಐಸ್ ಕ್ರೀಂ ನೀಡುವುದು ಇವರು ಕೊಡುವ ಎಳನೀರಿನ ವಿಶೇಷ.

By ಐಸಾಕ್ ರಿಚರ್ಡ್
|
Google Oneindia Kannada News

ಮಂಗಳೂರು: ಕಡಲ ತೀರದ ನಗರಿಯಾದ ಮಂಗಳೂರಿನ ಬಿಸಿಲ ಬೇಗೆಗೆ ಐಸ್‍ಕ್ರೀಮ್ ಬೇಕೇ ಬೇಕು ಅನ್ನುವಷ್ಟರ ಮಟ್ಟಿಗೆ ಧಗೆ ಹೆಚ್ಚಾಗಿದೆ. ಮಂಗಳೂರಿನಲ್ಲಿ ಐಸ್‍ಕ್ರೀಮ್ ಅಂದಾಕ್ಷಣ ನೆನಪಾಗುವುದು ಐಡಿಯಲ್, ಪಬ್ಬಾಸ್ ಐಸ್‍ಕ್ರೀಮ್ ಪಾರ್ಲರ್. ಇದೆಲ್ಲದರ ಮಧ್ಯೆ ಪ್ರಾಧ್ಯಾಪಕರೋರ್ವರು ಬೊಂಡ ಐಸ್‍ಕ್ರೀಮ್‍ನಿಂದ ಕಡಲ ನಗರಿಯಲ್ಲಿ ಸುದ್ದಿಯಾಗಿದ್ದಾರೆ.

ಐಸ್ ಕ್ರೀಮ್ ಅಂದರೆ, ಸಾಮಾನ್ಯವಾಗಿ ವೆನಿಲ್ಲಾ, ಸ್ಟ್ರಾಬೆರಿ ಮುಂತಾದ ಫ್ಲೇವರ್ ಗಳು ಲಭ್ಯವಿರುತ್ತವೆ. ಆದರೆ, ಎಲ್ಲೂ, ಯಾರೂ ಯೋಚಿಸದ, ಯಾಚಿಸದ ಐಸ್ ಕ್ರೀಮ್ ಫ್ಲೇವರ್ ಈ ಪ್ರಾಧ್ಯಾಪಕರು ನೀಡುವ ಈ ಐಸ್ ಕ್ರೀಮ್. ಎಳನೀರಿನ ಗಂಜಿ ಕಾಯಿಯಲ್ಲಿ ಬರುವ ತೆಳುಗಂಜಿಯ ಜತೆಗೆ ಐಸ್ ಕ್ರೀಂ ನೀಡುವುದು ಇವರು ಕೊಡುವ ಎಳನೀರಿನ ವಿಶೇಷ.

ಇವರ ಹಾಗೂ ಇವರು ಕಂಡು ಹಿಡಿದಿರುವ ಹೊಸ ಮಾದರಿಯ ಐಸ್ ಕ್ರೀಂ ಫ್ಲೇವರ್ ನ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿವೆ ನಿಮಗಾಗಿ.

ಸಚಿವರಿಗೂ ಗುರುಗಳು

ಸಚಿವರಿಗೂ ಗುರುಗಳು

ಅಂದಹಾಗೆ, ಇವರ ಹೆಸರು ಎಮ್.ಸೀತಾರಾಮ್ ಕಾಮತ್ ಇಂಜಿನಿಯರಿಂಗ್‍ನಲ್ಲಿ ಸಿ.ಟೆಕ್ ಪದವಿ ಪಡೆದ ಇವರು ಮೂಲತಃ ಮಂಗಳೂರಿನವರೇ. ಈ ಹಿಂದೆ ಇಲ್ಲಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಎರಡು ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ವಿಶೇಷ ಅಂದರೆ ಇವರು ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಮಂತ್ರಿಯಾದ ಯು.ಟಿ ಖಾದರ್ ಹಾಗೂ ವಿಧಾನ ಪರಿಷತ್‍ನ ಮುಖ್ಯ ಸಚೇತಕರಾದ ಐವನ್ ಡಿ'ಸೋಜ ಅವರ ಗುರುಗಳು. ಗುಜರಾತ್‍ನ ಸೂರತ್ ವಿಶ್ವವಿದ್ಯಾಲಯ ಸೇರಿ ಭಾರತದ ವಿವಿಧ ವಿ.ವಿಗಳಲ್ಲಿ 9 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು.
ತದನಂತರ ವೈಯುಕ್ತಿಕ ಕಾರಣಗಳಿಗೆ ತಮ್ಮ ಸೇವೆ ರಾಜೀನಾಮೆ ಸಲ್ಲಿಸಿ ತವರಿಗೆ ತೆರಳಿದರು. ಈ ಮಧ್ಯೆ ಸೀತಾರಾಮ್ ಅವರು ದೇಶದ ವಿವಿಧ ಎಮ್.ಎನ್.ಸಿ ಕಂಪೆನಿಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ.

ಕುಡುಕರೂ ಒಮ್ಮೊಮ್ಮೆ ಸ್ಫೂರ್ತಿಯಾಗುತ್ತಾರೆ!

ಕುಡುಕರೂ ಒಮ್ಮೊಮ್ಮೆ ಸ್ಫೂರ್ತಿಯಾಗುತ್ತಾರೆ!

ಸೀತಾರಾಮ್ ಅವರು, ಮಂಗಳೂರಿನ ಡೊಂಗ್ರಕೇರಿ ಎಂಬಲ್ಲಿ ಬೊಂಡ ಅಂಗಡಿ(ಎಳನೀರು) ಇಟ್ಟುಕೊಂಡಿದ್ದರು. ಅದೊಂದು ದಿನ ತಮ್ಮ ಪರಿಸರದಲ್ಲಿ ವ್ಯಕ್ತಿಯೋರ್ವ ಮದ್ಯ ಕುಡಿದ ನಂತರ ಬೊಂಡದ ಗಂಜಿಗೆ ಐಸ್‍ಕ್ರೀಮ್ ಹಾಕಿ ತಿಂದದನ್ನು ನೋಡಿದ ಸೀತಾರಾಮ್ ಅವರಿಗೆ ತಕ್ಷಣವೇ ಈ ಹೊಸ ಫ್ಲೇವರ್ ಐಡಿಯಾ ಹೊಳೆಯಿತಂತೆ.

ಬೆಲೆ ಕೇವಲ 60 ರು. ಮಾತ್ರ!

ಬೆಲೆ ಕೇವಲ 60 ರು. ಮಾತ್ರ!

ಸುಮಾರು 40 ವರ್ಷದಿಂದ ಈ ವ್ಯಾಪಾರ ನಡೆಸುವ ಇವರ ಅಂಗಡಿಯಲ್ಲಿ ಚಾಕೋಲೇಟ್, ಚಿಕ್ಕು ಸೇರಿ ವಿವಿಧ ಫ್ಲೇವರ್ ಗಳ ಬೊಂಡ ಐಸ್‍ಕ್ರೀಮ್ ಇಲ್ಲಿ ಸಿಗುತ್ತದೆ. ಬೊಂಡ ಐಸ್‍ಕ್ರೀಮ್‍ಗೆ ಇವರು ವೆನಿಲ್ಲಾ ಐಸ್‍ಕ್ರೀಮ್ ಮಾತ್ರ ಬಳಸುತ್ತಾರಂತೆ. ಏಕೆಂದರೆ ಇದು ಬೊಂಡ ಐಸ್‍ಕ್ರೀಮ್‍ಗೆ ಒಳ್ಳೆ ಕಾಂಬೀನೇಷನ್ ಅನ್ನುತ್ತಾರೆ ಸೀತಾರಾಮ್ ಕಾಮತ್. ಜೊತೆಗೆ ಇದಕ್ಕೆ ಬಾಳೆಹಣ್ಣು ಬಳಸಿ ಈ ಐಸ್‍ಕ್ರೀಮ್ ತಯಾರಿಸುತ್ತಾರಂತೆ. ಇದರ ಬೆಲೆ ಕೇವಲ 60 ರೂಪಾಯಿ ಮಾತ್ರ.
"ಬೊಂಡ ಅಥವಾ ಎಳನೀರು ಐಸ್‍ಕ್ರೀಮ್‍ನ್ನು ಮಧ್ಯಾಹ್ನದ ವೇಳೆ ಸವಿದರೆ ಊಟ ಮಾಡಬೇಕೆಂದೇನಿಲ್ಲ. ಜೊತೆಗೆ ಇದು ಮನುಷ್ಯನ ದೇಹವನ್ನು ಸಮತೋಲನದಲ್ಲಿರುತ್ತದೆ. ಜೊತೆಗೆ ಉತ್ತಮ ರುಚಿ ಹೊಂದಿದೆ' ಅನ್ನುತ್ತಾರೆ ಸೀತಾರಾಮ್

ಖಾದ್ಯವಾಗಿ ಇದೀಗ ಬಳಕೆ

ಖಾದ್ಯವಾಗಿ ಇದೀಗ ಬಳಕೆ

ಬೊಂಡ ಐಸ್‍ಕ್ರೀಮ್ ಬಗ್ಗೆ ಕೊಂಕಣಿಯರ ಇತಿಹಾಸದಲ್ಲಿ ದಾಖಲೆ ಇದೆಯಂತೆ. ಇವರಲ್ಲಿ ಹಬ್ಬ ಹರಿದಿನ ಅಥವಾ ವಿಶೇಷ ಸಂದರ್ಭಗಳಲ್ಲಿ ಇಂತಹ ಒಂದು ಖಾದ್ಯವನ್ನು ಇವರು ಬಳಸುತ್ತಿದ್ದರಂತೆ. ಅದನ್ನು ವಿಶೇಷ ರೀತಿಯಲ್ಲಿ ಆಧುನಿಕತೆಗೆ ಮಾರ್ಪಡಿಸಿ ಬಂದ ಗ್ರಾಹಕರಿಗೆ ಉಣಬಡಿಸುತ್ತಿದ್ದಾರೆ ಸೀತಾರಾಮ್.

ಎಳನೀರು ಅಂಶದ ಜತೆ ಐಸ್ ಕ್ರೀಂ

ಎಳನೀರು ಅಂಶದ ಜತೆ ಐಸ್ ಕ್ರೀಂ

ಎಳನೀರು ಮನುಷ್ಯನ ದೇಹಕ್ಕೆ ಉತ್ತಮ ಪೌಷ್ಟಿಕಾಂಶವಾದ ಹಣ್ಣು ಎನ್ನಬಹುದು. ಇದು ದೇಹದ ಉಷ್ಣತೆ, ಆ್ಯಸಿಡಿಟಿಗೆ ರಾಮಬಾಣ ಇದ್ದಂತೆ. ಒಂದು ವೇಳೆ ಮಂಗಳೂರಿನ ಡೊಂಗ್ರಕೇರಿಗೆ ಭೇಟಿ ನೀಡಿದರೆ ನೀವೂ ಬೊಂಡ ಐಸ್‍ಕ್ರೀಮ್ ಸವಿಯಲು ಮರೆಯಬೇಡಿ.

English summary
A professor by profession Sitharam Kamath is now selling Bonda ice cream with his innovative idea in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X