ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಣದಲ್ಲಿರುವವರ ಮಾಹಿತಿ
ಮಂಗಳೂರು ಏಪ್ರಿಲ್ 28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಗೆ ವೇದಿಕೆ ಸಿದ್ದಗೊಂಡಿಗೆ . ಜಿಲ್ಲೆಯ 8 ಕ್ಷೇತ್ರಗಳಿಗೆ 58 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣಾ ಅಖಾಡದಲ್ಲಿರುವ ಅಭ್ಯರ್ಥಿಗಳ ವಿವರ ಇಂತಿವೆ.
ಕರಾವಳಿ ಜಿಲ್ಲೆಗಳಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಚುನಾವಣೆ ರಂಗೇರಿದ್ದು, ಕಾಂಗ್ರೆಸ್ ಬಿಜೆಪಿಗೆ ನೇರ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್ ಕೂಡ ಇಲ್ಲಿ ಅಶಕ್ತವೇನಲ್ಲ. ಹಾಗಾಗಿ ಭಿರುಸಿನ ಪೈಪೋಟಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರೀಕ್ಷಿಸಬಹುದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ವೀಧಾನಸಭಾ ಕ್ಷೇತ್ರಗಳಿದ್ದು ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳು ಅಂತಿಮವಾಗಿದ್ದು, ನಾಮಪತ್ರ ವಾಪಾಸ್ ಪಡೆದುಕೊಳ್ಳುವ ದಿನಾಂಕ ಮುಗಿದ ನಂತರ 58 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ ಇಲ್ಲಿದೆ ನೋಡಿ...

ಈ ಕ್ಷೇತ್ರ ದಲ್ಲಿ 6 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕೆ. ವಸಂತ ಬಂಗೇರ(ಕಾಂಗ್ರೆಸ್), ಸುಮತಿ ಎಸ್. ಹೆಗ್ಡೆ(ಜೆ.ಡಿ.ಎಸ್), ಹರೀಶ್ ಪೂಂಜಾ (ಬಿ.ಜೆ.ಪಿ), ವೆಂಕಟೇಶ್ ಬೆಂಡೆ (ಪಕ್ಷೇತರ), ಜಗನ್ನಾಥ(ಎಂಇಪಿ), ಸೈಯದ್ ಹಸನ್(ಪಕ್ಷೇತರ)

7 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ
ಕೆ. ಅಭಯಚಂದ್ರ(ಕಾಂಗ್ರೆಸ್), ಉಮಾನಾಥ ಎ.ಕೋಟ್ಯಾನ್ (ಬಿ.ಜೆ.ಪಿ), ಜೀವನ್ ಕೃಷ್ಣ ಶೆಟ್ಟಿ (ಜಾತ್ಯಾತೀತ ಜನತಾದಳ), ಕೆ.ಯಾದವ ಶೆಟ್ಟಿ (ಸಿ.ಪಿ.ಐ.ಎಂ), ಅಶ್ವಿನ್ ಜೊಸ್ಸಿ ಪಿರೇರ (ಪಕ್ಷೇತರ), ರೀನಾ ಪಿಂಟೋ (ಪಕ್ಷೇತರ), ಅಬ್ದುಲ್ ರಹಿಮಾನ್ (ಎಂ.ಇ.ಪಿ).

7 ಅಭ್ಯರ್ಥಿಗಳು ಅಂತಿಮ ವಾಗಿ ಕಣದಲ್ಲಿದ್ದಾರೆ.
ಸುರೇಶ್ ಬಿ ಸಾಲ್ಯಾನ್ (ಅಖಿಲ ಭಾರತ ಹಿಂದೂ ಮಹಾಸಭಾ), ಮೊಹಿಯುದ್ದೀನ್ ಬಾವಾ (ಕಾಂಗ್ರೆಸ್), ಡಾ.ವೈ. ಭರತ್ ಶೆಟ್ಟಿ (ಬಿ.ಜೆ.ಪಿ), ಮುನೀರ್ ಕಾಟಿಪಳ್ಳ (ಸಿ.ಪಿ.ಐ.ಎಂ), ಪಿ.ಎಂ. ಅಹಮ್ಮದ್ (ಎಂ.ಇ.ಪಿ), ಸುಪ್ರೀತ್ ಕುಮಾರ್ ಪೂಜಾರಿ (ಲೋಕ ಆವಾಜ್ ದಳ), ಮ್ಯಾಕ್ಸಿಂ ಪಿಂಟೋ (ಪಕ್ಷೇತರ)

11 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ
ಜೆ.ಆರ್.ಲೋಬೊ (ಕಾಂಗ್ರೆಸ್), ಸುನೀಲ್ ಕುಮಾರ್ ಬಜಾಲ್ (ಸಿ.ಪಿ.ಐ.ಎಂ), ಡಿ.ವೇದವ್ಯಾಸ ಕಾಮತ್ (ಬಿ.ಜೆ.ಪಿ), ರೀನಾ ಪಿಂಟೋ (ಪಕ್ಷೇತರ), ಮದನ್ ಎಂ.ಸಿ (ಪಕ್ಷೇತರ), ಆರ್.ಶ್ರೀಕರ ಪ್ರಭು (ಪಕ್ಷೇತರ), ಸುಪ್ರೀತ್ ಕುಮಾರ್ ಪೂಜಾರಿ (ಪಕ್ಷೇತರ), ರತ್ನಾಕರ ಸುವರ್ಣ (ಜೆ.ಡಿ.ಎಸ್), ಮುಹಮ್ಮದ್ ಖಾಲಿದ್ (ಪಕ್ಷೇತರ), ಮುಹಮ್ಮದ್ ಇಕ್ಬಾಲ್ (ಎಂಇಪಿ) , ಧರ್ಮೇಂದ್ರ(ಅಖಿಲ ಭಾರತ್ ಹಿಂದೂ ಮಹಾಸಭಾ),

5 ಅಭ್ಯರ್ಥಿಗಳು ಕಣದಲ್ಲಿದ್ದಾರೆ
ನಿತಿನ್ ಕುತ್ತಾರ್(ಸಿ.ಪಿ.ಐ.ಎಂ), ಸಂತೋಷ್ ಕುಮಾರ್ ರೈ (ಬಿ.ಜೆ.ಪಿ), ಯು.ಟಿ.ಖಾದರ್ (ಕಾಂಗ್ರೆಸ್), ಕೆ.ಅಶ್ರಫ್ (ಜೆ.ಡಿ.ಎಸ್), ಉಸ್ಮಾನ್ (ಎಂ.ಇ.ಪಿ) ,

5 ಅಭ್ಯರ್ಥಿಗಳು ಕಣದಲ್ಲಿದ್ದಾರೆ
ಬಿ. ರಮಾನಾಥ ರೈ (ಕಾಂಗ್ರೆಸ್), ರಾಜೇಶ್ ನಾೈಕ್(ಬಿ.ಜೆ.ಪಿ), ಇಬ್ರಾಹಿಂ ಕೈಲಾರ್ (ಪಕ್ಷೇತರ), ಬಾಲಕೃಷ್ಣ ಪೂಜಾರಿ(ಲೋಕ್ ಆವಾಜ್ ದಳ), ಶಮೀರ್ (ಎಂ.ಇ.ಪಿ).

11 ಅಭ್ಯರ್ಥಿಗಳು ಕಣದಲ್ಲಿ
ಶಕುಂತಳಾ ಟಿ.ಶೆಟ್ಟಿ (ಕಾಂಗ್ರೆಸ್), ಸಂಜೀವ ಮಟಂದೂರು (ಬಿ.ಜೆ.ಪಿ), ಶೇಖರ ಬಿ (ಪ್ರಜಾ ಪರಿವರ್ತನ ಪಾರ್ಟಿ), ಎಂ.ಶೇಶಪ್ಪ ರಾವ್ (ಸಾಮಾನ್ಯ ಜನತಾ ಪಕ್ಷ), ಐ.ಸಿ.ಕೈಲಾಸ್ (ಜೆ.ಡಿ.ಎಸ್), ಅಬ್ದುಲ್ ಬಶೀರ್ ಬುಡಿಯಾರ್ (ಪಕ್ಷೇತರ), ಶಬಾನ ಎಸ್.ಶೇಖ್ (ಎಂ.ಇ.ಪಿ), ಮಜೀದ್ (ಸಂಯುಕ್ತ ಜನತಾ ದಳ), ವಿದ್ಯಾಶ್ರೀ (ಪಕ್ಷೇತರ), ಬಿ.ಎಸ್. ಚೇತನ ಕುಮಾರ್ (ಪಕ್ಷೇತರ), ಅಮರನಾಥ ಬಿ.ಕೆ(ಪಕ್ಷೇತರ)

6 ಅಭ್ಯರ್ಥಿಗಳು ಕಣದಲ್ಲಿ
ಅಂಗಾರ ಎಸ್.(ಬಿ.ಜೆ.ಪಿ) , ಡಾ. ಬಿ. ರಘು (ಕಾಂಗ್ರೆಸ್), ಸಂಜೀವ ಬಾಬುರಾವ್ ಕುರಾನ್ಡ್‍ವಾಡ್(ಪಕ್ಷೇತರ), ಸುಂದರ ಕೆ. (ಪಕ್ಷೇತರ), ರಘು (ಬಹುಜನ ಸಮಾಜ ಪಾರ್ಟಿ), ಚಂದ್ರಶೇಖರ ಕೆ (ಪಕ್ಷೇತರ).












Click it and Unblock the Notifications