ಮಂಗಳೂರು : ಕಾಂಕ್ರೀಟ್ ರಸ್ತೆಗಾಗಿ ಮರಗಳಿಗೆ ಕೊಡಲಿ ಪೆಟ್ಟು
ಮಂಗಳೂರು, ಡಿಸೆಂಬರ್ 23 : ಮಂಗಳೂರು ಮಹಾನಗರ ಪಾಲಿಕೆ ರಸ್ತೆ ಅಗಲೀಕರಣದ ನೆಪದಲ್ಲಿ ಮರಗಳಿಗೆ ಕೊಡಲಿ ಪೆಟ್ಟು ಹಾಕಿದೆ. ಮುಖ್ಯವಾಗಿ ಕಂಕನಾಡಿ ಮಾರ್ಗವಾಗಿ ಸಾಗುವ ವೇಲೆನ್ಸಿಯ-ನಂದಿಗುಡ್ಡೆ ವೃತದ ಬಳಿ ಇರುವ ಹಲವು ಮರಗಳನ್ನು ಕಡಿಯಲಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ಅಗಲೀಕರಣಕ್ಕಾಗಿ ಸುಮಾರು 48 ಮರಗಳನ್ನು ಕಡಿದು ಹಾಕಲಾಗಿದೆ. ಮರಗಳನ್ನು ಕಡಿಯಲು ಮಂಗಳೂರು ಮಹಾನಗರ ಪಾಲಿಕೆ ಅನುಮತಿ ನೀಡಿದ್ದು, ಮರಗಳನ್ನು ಕಾಡಿದ ಜಾಗದಲ್ಲಿ ಗಿಡ ನೆಟ್ಟು ಪೋಷಿಸುವಂತೆಯೊ ಸೂಚನೆ ನೀಡಿದೆ.

ಸ್ಪಷ್ಟನೆ ನೀಡಿದ ಪಾಲಿಕೆ : ಅರಣ್ಯ ಇಲಾಖೆಯ ಅನುಮತಿ ಪಡೆದೇ ಮರಗಳನ್ನು ಕಡಿಯಲಾಗಿದೆ. ಅಮಣ್ಣಗುಡ್ಡೆ ಸರ್ಕಲ್ ನವರೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಮರಗಳನ್ನು ಕಡಿಯಲಾಗಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಉಡುಪಿ ಸುದ್ದಿ : ಹಿರಿಯಡ್ಕದ ಹಲವು ಕಡೆ ಮದುವೆ ಸಮಾರಂಭಕ್ಕೆ ಹೋಗಿ ಕಳ್ಳತನ ನಡೆಸುತ್ತಿದ್ದ ದಂಪತಿಯನ್ನು ಬಂಧಿಸಲಾಗಿದೆ. ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಜಯನಗರ ನಿವಾಸಿಗಳಾದ ಎಸ್. ಆರ್. ಪ್ರದೀಪ್ (38) ಹಾಗೂ ರೇವತಿ ( 28 ) ಬಂಧಿತ ಆರೋಪಿಗಳು.
ಮದುವೆ ಮನೆಗಳಿಗೆ ಹೋಗುತ್ತಿದ್ದ ದಂಪತಿಗಳು ವಧು, ವರನ ಕೊಠಡಿಗಳಲ್ಲಿನ ಬ್ಯಾಗ್‌ಗಳಲ್ಲಿದ್ದ ನಗದು, ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ ಆಭರಣ, ನಗದು, ಒಂದು ಬೈಕ್ ಸೇರಿದಂತೆ ಸುಮಾರು 12 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.













Click it and Unblock the Notifications