ಮೂಲ್ಕಿ ಶಾಂಭವಿ ನದಿಯಲ್ಲಿ 3 ಯುವಕರು ನೀರುಪಾಲು
ಮೂಲ್ಕಿ, ಜುಲೈ 9: ನದಿಗೆ ಈಜಲು ತೆರಳಿದ್ದ ಮೂವರು ನೀರುಪಾಲಾದ ದುರ್ಘಟನೆ ಇಲ್ಲಿನ ಇಲ್ಲಿನ ಅಧಿಕಾರಿಬೆಟ್ಟು ಬಳಿಯ ಶಾಂಭವಿ ನದಿಯಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನ ಈ ದುರಂತ ನಡೆದಿದ್ದು ಅಕ್ಷತ್, ಕಿಶೋರ್ ಮತ್ತು ಮಹೇಶ್ ಎನ್ನುವ ಯುವಕರು ನೀರುಪಾಲಾಗಿದ್ದಾರೆ.

ಮಂಗಳೂರಿನಿಂದ 11 ಮಂದಿ ಸ್ನೇಹಿತರು ನದಿ ಸುತ್ತಾ ಮುತ್ತ ತಿರುಗಾಡಲು ಬಂದಿದ್ದರು. ಈ ವೇಳೆ ಮಹೇಶ್ ಜತೆಯಲ್ಲಿ ಇಬ್ಬರು ಈಜಲು ತೆರಳಿದ್ದಾರೆ. ಈ ವೇಳೆ ಹೆಜಮಾಡಿಯ ಕಡವು ಬಳಿಯಲ್ಲಿ ನದಿಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ತಕ್ಷಣ ಸುದ್ದಿ ತಿಳಿದು ಸ್ಥಳೀಯರು ಮತ್ತು ಅಗ್ನಿ ಶಾಮಕದಳದ ಸಿಬಂದಿಗಳು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮೂವರ ಮೃತದೇಹಗಳು ಪತ್ತೆಯಾಗಿವೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.












Click it and Unblock the Notifications