ಮೂವರ ಆತ್ಮಹತ್ಯೆ; ಕಾರಿನಲ್ಲಿ ಬಂದು ನದಿಗೆ ಹಾರಿದರು
ದಕ್ಷಿಣ ಕನ್ನಡ, ಸೆಪ್ಟೆಂಬರ್ 29 : ನೇತ್ರಾವತಿ ನದಿಗೆ ಹಾರಿ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ಟೌನ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಹಳೇ ಸೇತುವೆ ಬಳಿ ಈ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಕಾರಿನಲ್ಲಿ ಬಂದ ಮೂವರು ಸೇತುವೆ ಮೇಲೆ ಕಾರು ನಿಲ್ಲಿಸಿ ನೇತ್ರಾವತಿ ನದಿಗೆ ಹಾರಿದ್ದಾರೆ.
ನದಿಗೆ ಹಾರಿದ ಮೂವರಲ್ಲಿ ಒಬ್ಬ ಮಹಿಳೆಯ ಶವ ಸಿಕ್ಕಿದೆ. ಉಳಿದ ಎರಡು ಶವಗಳಿಗಾಗಿ ಹುಡುಕಾಟ ನಡೆಯುತ್ತಿದೆ. ನದಿಗೆ ಹಾರಿದ ಮೂವರು ಯಾರು, ಎಲ್ಲಿಂದ ಬಂದವರು? ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಕೆಎ 09, ಎಂಎ 489 ನೋಂದಣಿ ಕಾರಿನಲ್ಲಿ ಮೂವರು ಸೇತುವೆ ಬಳಿಗೆ ಆಗಮಿಸಿದ್ದರು. ಸೇತುವೆ ಮೇಲೆ ಕಾರು ನಿಲ್ಲಿಸಿ ಎಲ್ಲರೂ ನದಿಗೆ ಹಾರಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕಾರಿನ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬಂಟ್ವಾಳ ಟೌನ್ ಪೊಲೀಸರು ಸ್ಥಳೀಯರ ಜೊತೆ ಶವಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications