ದಕ್ಷಿಣ ಕನ್ನಡ ಜಿಲ್ಲೆ ಜನರ ಮನೆ ಬಾಗಿಲಿಗೆ ಆಡಳಿತ
ಮಂಗಳೂರು, ಫೆ. 8: ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಹೋಬಳಿ ಪುನರ್ ರಚನೆಗೆ ಚಾಲನೆ ನೀಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಿರುವ 17 ಹೋಬಳಿಗ ಳನ್ನು ಒಡೆದು 37 ಹೋಬಳಿ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹೋಬಳಿ ಮಟ್ಟದಲ್ಲಿಯೇ ಸಸರ್ಕಾರಿ ಕಚೇರಿಗಳ ಸ್ಥಾಪನೆಯಾದರೆ ನಾಗರಿಕರಿಗೆ ಅನುಕೂಲವಾಗುತ್ತದೆ ಎಂಬ ಹಿನ್ನಲೆಯಲ್ಲಿ ಪುನರ್ ವಿಂಗಡನೆಗೆ ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.[ಬೇಸಿಗೆಯಲ್ಲಿ ಮಂಗಳೂರು ನಗರಕ್ಕೆ ನೀರಿನ ಕೊರತೆ ಇಲ್ಲ]

ಸಭೆಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಯುವಜನಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್, ಶಾಸಕರಾದ ಮೊಹಿದೀನ್ ಬಾವಾ, ಜೆ.ಆರ್.ಲೋಬೋ, ಎಸ್. ಅಂಗಾರ, ಶಕುಂತತಾ ಶೆಟ್ಟಿ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.
ಪ್ರಸ್ತಾವಿತ ಹೋಬಳಿಗಳ ವಿವರ:
ಪ್ರಸಕ್ತ ಜಿಲ್ಲೆಯಲ್ಲಿ 17 ಹೋಬಳಿಗಳಿದ್ದು, ಪುನರ್ ವಿಂಗಡನೆ ನಂತರ 37ಕ್ಕೇರಲಿದೆ.
* ಮಂಗಳೂರು ತಾಲೂಕು: ಮಂಗಳೂರು ಎ, ಲೇಡಿಹಿಲ್, ಅಳಪೆ, ತೊಕ್ಕೊಟ್ಟು, ದೇರಳಕಟ್ಟೆ, ಗುರುಪುರ, ವಾಮಂಜೂರು, ಸುರತ್ಕಲ್, ಕಾವೂರು, ಬಜಪೆ, ಮುಲ್ಕಿ, ಕಿನ್ನಿಗೋಳಿ, ಮೂಡಬಿದ್ರೆ ಉತ್ತರ, ಮೂಡಬಿದ್ರೆ ದಕ್ಷಿಣ, ಶಿರ್ತಾಡಿ [ಮಂಗಳೂರು : ಕಟೀಲಿನ ಚಿನ್ನದ ರಥ ನೋಡಿದ್ದಿರಾ?]
* ಬಂಟ್ವಾಳ ತಾಲೂಕು: ಬಂಟ್ವಾಳ, ಕಾವಳಮುಡೂರು, ಬಿ.ಮೂಡಾ, ಮುಡಿಪು, ವಿಟ್ಲ, ಮಾಣಿ
* ಬೆಳ್ತಂಗಡಿ ತಾಲೂಕು: ಬೆಳ್ತಂಗಡಿ, ಉಜಿರೆ, ಕೊಕ್ಕಡ, ತಣ್ಣೀರುಪಂಥ, ವೇಣೂರು, ಅಳದಂಗಡಿ,
* ಪುತ್ತೂರು ತಾಲೂಕು: ಪುತ್ತೂರು, ಕಾವು, ಉಪ್ಪಿನಂಗಡಿ, ನೆಲ್ಯಾಡಿ, ಕಡಬ, ಸವಣೂರು
* ಸುಳ್ಯ ತಾಲೂಕು: ಸುಳ್ಯ, ಬೆಳ್ಳಾರೆ, ಪಂಜ, ಸುಬ್ರಮಣ್ಯ












Click it and Unblock the Notifications