13 ಅಡಿ ಕಾಳಿಂಗ ಸರ್ಪವನ್ನು ಚಾರ್ಮಾಡಿ ಘಾಟ್ ಗೆ ಬಿಟ್ಟ ಸ್ನೇಕ್ ಜಾಯ್

ಮಂಗಳೂರು, ಜೂನ್ 18 : ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ರಸ್ತೆ ಪಕ್ಕದ ಬೇಲಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಹದಿಮೂರು ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞರು ರಕ್ಷಿಸಿದ್ದಾರೆ. ಕಾಳಿಂಗ ಸರ್ಪವು ಸವಣಾಲು- ಅಯಿಲಹದಿಮೆ ರಸ್ತೆಯಲ್ಲಿ ಬೇಲಿಯಿಂದ ಹೊರಬರಲು ಹೆಣಗುತ್ತಿದ್ದ ಕಾಳಿಂಗ ಸರ್ಪವನ್ನು ಗ್ರಾಮಸ್ಥರು ನೋಡಿದ್ದಾರೆ.

ಆ ಕೂಡಲೇ ಉರಗ ತಜ್ಞ ಜಾಯ್ ಮಸ್ಕರೇನಸ್ (ಸ್ನೇಕ್ ಜಾಯ್ ಅಂತಲೇ ಹೆಸರುವಾಸಿ)ಗೆ ವಿಷಯ ತಲುಪಿಸಿದ್ದಾರೆ. ಹಾವು ಹಿಡಿಯುವ ಕೋಲು ಹಾಗೂ ಚೀಲದೊಂದಿಗೆ ಜಾಯ್ ಸ್ಥಳಕ್ಕೆ ತಲುಪಿದ್ದಾರೆ. ಅಪಾಯಕಾರಿ ವಿಷಜಂತುವಾದ ಕಾಳಿಂಗ ಸರ್ಪವನ್ನು ಬೇಲಿಯಿಂದ ಮೊದಲಿಗೆ ಬಿಡಿಸಬೇಕಿತ್ತು. ಆ ಕೆಲಸವನ್ನು ಜಾಯ್ ಯಶಸ್ವಿಯಾಗಿ ಮಾಡಿದರು.

13 feet king cobra rescued, released to Charmadi Ghat by Snake Joy

ಆ ನಂತರ ತುಂಬ ಚಾಕಚಕ್ಯತೆಯಿಂದ ಅದನ್ನು ಚೀಲದೊಳಗೆ ತುಂಬಿಕೊಂಡರು. ಆ ನಂತರ ಚಾರ್ಮಾಡಿ ಘಾಟ್ ನ ಅರಣ್ಯ ಪ್ರದೇಶದೊಳಗೆ ಬಿಟ್ಟರು. ಇಷ್ಟು ಕೆಲಸ ಈ ವರದಿ ಮಾಡಿದಷ್ಟು ಸಲೀಸಂತೂ ಖಂಡಿತಾ ಅಲ್ಲ. ಆದರೆ ಸ್ನೇಕ್ ಜಾಯ್ ಪಾಲಿಗೆ ಸಮಾಜ ಸೇವೆ ಹಾಗೂ ಪ್ರತಿ ನಿತ್ಯವೂ ಎದುರಿಸುವ ಸವಾಲು. ಇಷ್ಟೆಲ್ಲ ಆಗಿದ್ದು ಜೂನ್ ಹದಿನೆಂಟನೇ ತಾರೀಕಿನ ಸೋಮವಾರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+