ರಂಜಾನ್ ಖಾದ್ಯಗಳ ಮಳಿಗೆಗಳಲ್ಲಿ ಒಂದು ಸುತ್ತು!

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಇದು ರಂಜಾನ್ ಪವಿತ್ರ ಮಾಸ. ಮುಸ್ಲಿಂಮರು ಈ ಸಮಯದಲ್ಲಿ ಉಪವಾಸದ ನಂತರ ಇಫ್ತಾರ್ ಕೂಟವನ್ನು ಬಗೆ ಬಗೆಯ ರೀತಿಯಲ್ಲಿ ಆಯೋಜಿಸುತ್ತಾರೆ. ಇಫ್ತಾರ್ ಸಂಜೆ ಎಲ್ಲರಿಗೂ ಇಷ್ಟ. ಈ ಪವಿತ್ರ ಮಾಸದಲ್ಲಿ ಆರೋಗ್ಯಕರ ಆಹಾರಗಳ ಸೇವನೆಗೆ ವಿಶೇಷ ಆದ್ಯತೆಯಿದೆ. ದೇಹಕ್ಕೆ ಶಕ್ತಿ ನೀಡುವ ಪುಷ್ಟಿದಾಯಕ ತಿಂಡಿಗಳ ಸೇವನೆಯನ್ನು ಜನರು ಇಷ್ಟಪಡುತ್ತಾರೆ.

ರಂಜಾನ್ ಮಾಸದಂದು ಬಗೆ-ಬಗೆಯ ತಿಂಡಿಗಳು ನೆನಪಾಗುತ್ತವೆ. ಮಂಗಳೂರಿನಲ್ಲಿಯೂ ಈ ಹಬ್ಬದ ವೇಳೆ ವಿಶೇಷ ಖಾದ್ಯಗಳ ಲೋಕ ಅಲ್ಲಲ್ಲಿ ತೆರೆದುಕೊಳ್ಳುತ್ತದೆ. ಇಲ್ಲಿನ ಕೆಲವು ಪ್ರದೇಶಗಳು ಇಫ್ತಾರ್ ಖಾದ್ಯಾಗಾಗಿಯೇ ಪ್ರಸಿದ್ಧಿ ಪಡೆದಿವೆ.

ramadan

ಈ ಪೈಕಿ ಪ್ರಮುಖವಾದದ್ದು ಬಂದರಿನ ಬಾಂಬೆ ರೆಸ್ಟೋರೆಂಟ್, ಹಂಪನಕಟ್ಟೆಯ ಹೋಟೆಲ್ ಸಫಾ ಹಾಗೂ ಸಾಲ್ವಾ, ಕಂಕನಾಡಿಯ ಬಿರಿಯಾನಿ ಪ್ಯಾರಡೈಸ್ ಮತ್ತು ಪಾಂಡೇಶ್ವರದ ಫೋರಂ ಫೀಜಾದಲ್ಲಿರುವ ಫೋರಮ್ ಫುಡ್ ಸ್ಟ್ರೀಟ್.

ಇಲ್ಲಿ ಗರಿಗರಿಯಾದ ಖಾರವಾದ ರೋಲ್‌, ಬಗೆ-ಬಗೆಯ ನಾನ್‌ ಗಳು, ಯಮ್ಮಿ ಫಲೂದಾ, ಚಿಕನ್ ಗ್ರಿಲ್, ಸಮೋಸ, ಪತ್ತರ್, ಈರುಳ್ಳಿ ಸಮೋಸ, ಕಂಡಿ, ಕ್ರಿಸ್ಪಿ ಚಿಕನ್, ಚಿಕನ್ ಕಂಡಿ, ಕ್ರಿಸ್ಪಿ ಕಬಾಬ್ ಇತ್ಯಾದಿಗಳನ್ನು ಸವಿಯಬಹುದು. ರಂಜಾನ್ ಹಬ್ಬ ಬಗೆ ಬಗೆಯ ಸಿಹಿ ತಿಂಡಿ ಇಲ್ಲದೆ ಪರಿಪೂರ್ಣವಾಗುವುದಿಲ್ಲ. ಅದರಲ್ಲೂ ಜನಪ್ರಿಯವಾಗಿರುವ ಸೋಜಿ ಪಾಯಸ ಇರಲೇಬೇಕು.

-
-
-
-
-

ಚಿಕನ್ ಬಿರಿಯಾನಿ : ಇಫ್ತಾರ್ ಕೂಟಗಳಲ್ಲಿ ಬಿರಿಯಾನಿ ಇಲ್ಲದಿದ್ದರೆ ಮಜಾ ಇಲ್ಲ. ಈ ಸಮಯದಲ್ಲಿ ನೀವು ಬಿರಿಯಾನಿ ಸೇವಿಸಬೇಕಿದ್ದರೆ ಬಿರಿಯಾನಿ ಪ್ಯಾರಡೈಸ್‌ಗೆ ಭೇಟಿ ಕೊಡಬೇಕು. ಕಂಕನಾಡಿ ವೃತ್ತದಲ್ಲಿರುವ ಈ ತಾಣದಲ್ಲಿ ಚಿಕನ್ ಬಿರಿಯಾನಿ ಬಾಯಲ್ಲಿ ನೀರು ತರಿಸುತ್ತದೆ.

ರಂಜಾನ್ ಸಮಯದಲ್ಲಂತೂ ಇಲ್ಲಿನ ಬಿರಿಯಾನಿಗೆ ಬಹಳ ಬೇಡಿಕೆ. ಇದರ ಜೊತೆಗೆ ಇಲ್ಲಿ ಸಿಗುವ ಚಿಕನ್ ಗ್ರಿಲ್ ಮತ್ತು ಚಿಕನ್ ತಂದೂರಿ ಸಖತ್ ಫೇಮಸ್. ಹಾಗೆಯೇ ಇಲ್ಲಿನ ಚಿಕನ್ ಕೊಲ್ಹಾಪುರಿ, ಚಿಕನ್ ಕಡಾಯಿ, ಚಿಕನ್ ಕಬಾಬ್ ಇತ್ಯಾದಿಗಳನ್ನು ಸವಿಯಲು ಜನರು ಬರುತ್ತಾರೆ.

ಮಂಗಳೂರಿನಲ್ಲಿ ಪತ್ತರ್ ಸ್ಪೆಷಲ್ : ಮಂಗಳೂರಿನಲ್ಲಿ ರಂಜಾನ್ ಸಮಯದಲ್ಲಿ ವಿಭಿನ್ನವಾಗಿ ತಯಾರಿಸುವ ಆಹಾರ 'ಪತ್ತರ್'. ಅಕ್ಕಿ ಹುಡಿಯಿಂದ ಮಿಶ್ರಣಗೊಳ್ಳುವ ಈ ರೊಟ್ಟಿ ಪ್ರತಿ ಮುಸ್ಲಿಂಮರ ಮನೆಗಳಲ್ಲಿ ಇದ್ದೇ ಇರುತ್ತದೆ .

-
-
-
-
-

ರಾಂಬುಟಾನ್ ಹಣ್ಣು : ರಂಜಾನ್ ಪವಿತ್ರ ಮಾಸದಂದು ರಾಂಬುಟಾನ್ ಹಣ್ಣಿಗೆ ಬಲು ಬೇಡಿಕೆ. ಇದು ಮಂಗಳೂರು, ಮೂಡಬಿದಿರಿಯ ಸೋನ್ಸ್ ಕೃಷಿ ತೋಟದಲ್ಲಿ ಬೆಳೆಸುತ್ತಾರೆ. ಈ ಹಣ್ಣಿಗೆ ರಂಜಾನ್ ಸಮಯದಲ್ಲಿ ಮಾತ್ರ ಹೆಚ್ಚಿನ ಬೇಡಿಕೆ. ಮೂಡಬಿದಿರೆಯಿಂದ ಮಂಗಳೂರು ಹಾಗೂ ಇತರ ಪ್ರದೇಶಗಳಿಗೆ ಇದು ಸರಬರಾಜು ಆಗುತ್ತದೆ. ಮಂಗಳೂರಿನಲ್ಲಂತು ಹಣ್ಣುಗಳ ಜೊತೆ ರಾಂಬುಟಾನ್ ಹಣ್ಣು ಇರಲೇಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If you are searching for Ramadan special dishes. Here are some of the best places to enjoy food in Mangaluru.
Please Wait while comments are loading...