ಮಂಗಳೂರು: ಇನ್ಶೂರೆನ್ಸ್ ಹಣಕ್ಕಾಗಿ ಬಾರ್ಜ್ ಮುಳುಗಿಸುವ ಸಂಚು?
ಮಂಗಳೂರು, ಜೂನ್ 5: ಮಂಗಳೂರಿನ ಉಳ್ಳಾಲದಲ್ಲಿ ಅಪಘಾತಕ್ಕೀಡಾಗಿ ಬಾರ್ಜ್ ಮುಳುಗಡೆಯಾಗುತ್ತಿದೆ. ಇದೀಗ ಈ ಬಾರ್ಜ್ ಮುಳುಗಡೆ ಹಿಂದೆ ಸಂಚು ನಡೆದಿದೆಯಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಶನಿವಾರ ಉಳ್ಳಾಲ ಸಮುದ್ರದಲ್ಲಿ ಬಾರ್ಜೊಂದು ಅಪಘಾತಕ್ಕೀಡಾಗಿತ್ತು. ಬಾರ್ಜಿನ ಆಂಕರ್ ತುಂಡಾಗಿ ಮುಳುಗಲು ಆರಂಭಿಸಿತ್ತು. ಇದರಿಂದ ಬಾರ್ಜ್ ನಲ್ಲಿದ್ದ 27 ಸಿಬ್ಬಂದಿಗಳ ಜೀವ ಅಪಾಯಕ್ಕೆ ಸಿಲುಕಿತ್ತು. ನಂತರ ಕೋಸ್ಟ್ ಗಾರ್ಡ್ ಪಡೆಯವರು ಸಿಬ್ಬಂದಿಗಳನ್ನು ರಕ್ಷಿಸಿದ್ದರು.[ಉಳ್ಳಾಲದಲ್ಲಿ ಹಡಗು ದುರಂತ; 33 ಜನರು ಅಪಾಯದಲ್ಲಿ]

ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಬಂದರು ಪೊಲೀಸರು ಪ್ರತ್ಯೇಕ ತನಿಖೆ ನಡೆಸಿದ್ದು, ಬಾರ್ಜನ್ನು ನೀರಿನಲ್ಲಿ ಮುಳುಗಿಸುವ ಹುನ್ನಾರ ನಡೆದಿತ್ತು ಎಂದು ಹೇಳಲಾಗಿದೆ. ಬಾರ್ಜ್ 35 ವರ್ಷ ಹಳೆಯದಾಗಿತ್ತು. ಇದನ್ನು ಧರ್ತಿ, ಚೌಹಾಣ್ ಕಂಪೆನಿ ಬಾಡಿಗೆಗೆ ಪಡೆದುಕೊಂಡಿತ್ತು. ಹಡಗು ಮುಳುಗಿದರೆ ಇನ್ಶೂರೆನ್ಸ್ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಹಡಗನ್ನು ಮುಳುಗಿಸಲು ಮುಂದಾಗಿದ್ದರು ಎನ್ನಲಾಗಿದೆ.[27 ಜನರ ಜೀವ ಉಳಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿಗಳಿಗೆ ಖಾದರ್ ಅಭಿನಂದನೆ]
1982ರಲ್ಲಿ ಎನ್.ವಿ ನೆದರ್ ಲ್ಯಾಂಡ್ಸ್ ಎಂಬ ಕಂಪೆನಿ ಈ ಬಾರ್ಜನ್ನು ತಯಾರಿಸಿತ್ತು. ಮೇ 26ರಂದೇ ಕಡಲ್ಕೊರೆತ ತಡೆ ಕಾಮಗಾರಿ ಮುಗಿದ ಬಳಿಕ ಬಾರ್ಜ್ ಮುಂಬೈಗೆ ಪ್ರಯಾಣ ಬೆಳೆಸಬೇಕಿತ್ತು. ಹೀಗಿದ್ದೂ ಬಾರ್ಜ್ ಇಲ್ಲೇ ಇದ್ದಿದ್ದು ಏಕೆ ಎಂಬ ಅನುಮಾನಗಳೂ ಕಾಡುತ್ತಿವೆ.[ದುರಂತಕ್ಕೀಡಾಗಿದ್ದ ಬಾರ್ಜ್ ಮೇಲೆತ್ತಲು ತಜ್ಞರ ತಂಡ ಮಂಗಳೂರಿಗೆ]
ಬಾರ್ಜ್ ಮುಳುಗಿಸುವ ಮೂಲಕ 27 ಜನರ ಜೀವದ ಜತೆಗೇ ಕಂಪೆನಿ ಚೆಲ್ಲಾಟವಾಡಿತಾ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications