ದೀಪಸ್ತಂಭಗಳ ಬೆಳಕಲ್ಲಿ ಅಡಗಿದೆ ಕರಾವಳಿ ಪ್ರವಾಸೋದ್ಯಮ ಅಭಿವೃದ್ದಿ
ಮಂಗಳೂರು,ನವೆಂಬರ್,21 : ಕೇಂದ್ರದ ದೀಪಸ್ತಂಭಗಳು ಹಾಗೂ ಲೈಟ್-ಶಿಪ್ಸ್ ಮಹಾ ನಿರ್ದೇಶನಾಲಯ, ಶಿಪ್ಪಿಂಗ್ ಸಚಿವಾಲಯವು ಪ್ರವಾಸೋದ್ಯಮ ಬೆಳವಣಿಗೆ ಕಾಣಲು ದೇಶದ ಕಡಲ ಕಿನಾರೆ ಹಾಗೂ ಕಡಲ ಮಧ್ಯೆ ಇರುವ ಒಟ್ಟು 189 ದೀಪಸ್ತಂಭಗಳ ಪೈಕಿ 78 ದೀಪಸ್ತಂಭಗಳನ್ನು ಅಭಿವೃದ್ದಿಗೊಳಿಸುವ ಯೋಜನೆ ಹಾಕಿಕೊಂಡಿದೆ. ಕರ್ನಾಟಕದ ಕಾರವಾರ, ಭಟ್ಕಳ, ಸುರತ್ಕಲ್ ಮತ್ತು ಕಾಪುವಿನ ನಾಲ್ಕು ದೀಪಸ್ತಂಭಗಳು ಕೇಂದ್ರದ ಯೋಜನೆಯಲ್ಲಿ ಗುರುತಿಸಲ್ಪಟ್ಟಿವೆ.
'ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲು ಇದೊಂದು ಉತ್ತಮ ಅವಕಾಶ, ದೀಪಸ್ತಂಭಗಳ ಪ್ರದೇಶ ಪ್ರವಾಸಿಗರ ಆಕರ್ಷಣೆ ಕೇಂದ್ರವಾಗಿ ಪರಿಣಮಿಸಲಿದೆ' ಎಂದು ಪಣಂಬೂರು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಜೆಕ್ಟ್ ಸಿಇಒ ಯತೀಶ್ ಬೈಕಂಪಾಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.[ಶಬರಿಮಲೆ ಯಾತ್ರೆ ಆರಂಭ, ಕರ್ನಾಟಕದ ಭಕ್ತರಿಗೆ ನೆರವು]

'ದಾರಿ ತಪ್ಪಿದ ಹಡಗುಗಳಿಗೆ ದೀಪಸ್ತಂಭದ ಬೆಳಕು ಮಾರ್ಗದರ್ಶಿಯಾಗಿದೆ. ಹಾಗಾಗಿ ಸರ್ಕಾರ ದೀಪಸ್ತಂಭಗಳ ಅಭಿವೃದ್ಧಿ ಮೂಲಕ ಸುತ್ತಮುತ್ತಲ ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಪರಿವರ್ತಿಸುವ ಯೋಜನೆ ಹಾಕಿಕೊಂಡಿದೆ. ಯೋಜನೆಗಾಗಿ ಖಾಸಗಿ- ಸರ್ಕಾರ ಸಹಭಾಗಿತ್ವ ಆಹ್ವಾನಿಸಲಾಗಿದ್ದು, ನವೆಂಬರ್ ಕೊನೆಯೊಳಗೆ ಪೂರಕ ಕೆಲಸ ಆಗಬೇಕಿದೆ" ಎಂದವರು ವಿವರಿಸಿದ್ದಾರೆ .
"ಕೆಲವು ದೀಪಸ್ತಂಭಗಳು ಸಮುದ್ರ ಮಧ್ಯೆ ಇದ್ದರೆ, ಉಳಿದವು ಸುಮಾರು 14 ಎಕರೆಯಷ್ಟು ಭೂಪ್ರದೇಶದಲ್ಲಿ ವಿಸ್ತರಿಸಿವೆ. ಯೋಜನೆಯಲ್ಲಿ ದೀಪಸ್ತಂಭ ಸಂಪರ್ಕಿಸುವ ರಸ್ತೆಗಳ ಅಭಿವೃದ್ದಿ ಹಾಗೂ ಸಮುದ್ರ ಮಧ್ಯದ ದೀಪ ಸ್ತಂಭಗಳಿಗೆ ವಿಮಾನ ವ್ಯವಸ್ಥೆ ಕಲ್ಪಿಸುವ ಕುರಿತಾಗಿಯೂ ಚಿಂತನೆ ನಡೆಸಲಾಗಿದೆ. ಕಾಪು ಮತ್ತು ಸುರತ್ಕಲ್ ಸಮುದ್ರಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಸಾಕಷ್ಟು ಅಭಿವೃದ್ದಿ ಕೆಲಸಗಳಾಗಬೇಕಾಗಿದೆ ಎಂದು ಸತೀಶ್ ತಿಳಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications