Get Updates
Get notified of breaking news, exclusive insights, and must-see stories!

ಮಂಡ್ಯದಲ್ಲಿ ಹೆರಿಟೇಜ್ ಪಾರ್ಕ್‌ಗಳ ನಿರ್ಮಾಣ: ಶಾಸನ, ಸ್ಮಾರಕಗಳ ಸಂರಕ್ಷಣೆಗೆ ಹೊಸ ಪ್ಲಾನ್‌

ಮಂಡ್ಯ, ಜುಲೈ 06: ಮಂಡ್ಯ ಜಿಲ್ಲೆಯಲ್ಲಿರುವ ಪುರಾತನ ಕಾಲದ ಶಾಸನಗಳು, ಸ್ಮಾರಕಗಳನ್ನು ವ್ಯವಸ್ಥಿತವಾಗಿ ಸಂರಕ್ಷಣೆ ಮಾಡುವ ಉದ್ದೇಶದಿಂದ ಎಲ್ಲಾ ತಾಲೂಕುಗಳಲ್ಲೂ ಹೆರಿಟೇಜ್ ಪಾರ್ಕ್‌ಗಳನ್ನು ನಿರ್ಮಿಸಲು ಜಿಲ್ಲಾ ಪಂಚಾಯತ್ ಯೋಜನೆ ರೂಪಿಸಿದೆ.

ಒಂದು ಸಾವಿರಕ್ಕೂ ಹೆಚ್ಚು ಶಾಸನಗಳಿರುವ ಬಗ್ಗೆ ಜಿಲ್ಲೆಯೊಳಗೆ ಸರ್ವೇ ನಡೆಸಲಾಗಿದ್ದು, ಮೊದಲ ಹಂತದಲ್ಲಿ 423 ಶಾಸನಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ ತಾಲೂಕುಗಳಲ್ಲಿ 18 ಜಾಗಗಳನ್ನು ಗುರುತಿಸಲಾಗಿದೆ. ಹೆರಿಟೇಜ್ ಪಾರ್ಕ್ ನಿರ್ಮಾಣ ಸಂಬಂಧ ನೀಲಿ ನಕ್ಷೆಯನ್ನು ತಯಾರಿಸಲಾಗಿದೆ.

Zilla Panchayat Planned To Build Heritage Parks In All Taluks In Mandya District

ನರೇಗಾ ಯೋಜನೆಯಡಿ ಉದ್ಯಾನವನಗಳನ್ನು ನಿರ್ಮಾಣ ಮಾಡುವುದಕ್ಕೆ ಅವಕಾಶವಿದೆ. ಈ ಉದ್ಯಾನವನಗಳಲ್ಲೇ 10*10 ಅಳತೆಯ ಜಾಗದಲ್ಲಿ ಅವಸಾನದ ಅಂಚಿನಲ್ಲಿರುವ ಪುರಾತನ ಕಾಲದ ಶಾಸನಗಳು, ಸ್ಮಾರಕಗಳನ್ನು ಸಂರಕ್ಷಿಸಿಡಲು ನಿರ್ಧರಿಸಲಾಗಿದೆ. ಅದರ ಸುತ್ತಲೂ ಕಬ್ಬಿಣದ ಫೆನ್ಸಿಂಗ್ ಅಳವಡಿಸಿ ಶಾಸನಗಳ ಬಗ್ಗೆ ಕಿರು ಮಾಹಿತಿಯನ್ನು ನೀಡುವಂತೆ ತಯಾರಿ ನಡೆಸಲಾಗುತ್ತಿದೆ.

ಜಿಲ್ಲೆಯಾದ್ಯಂತ ಈಗಾಗಲೇ ಒಂದು ಸುತ್ತು ಹಾಕಿರುವ ಜಿಲ್ಲಾ ಪಂಚಾಯಿತಿ ಸಿಇಓ ಶೇಖ್ ತನ್ವೀರ್ ಆಸಿಫ್ ಅವರು ಇತಿಹಾಸಕಾರರು, ಲೇಖಕರು, ಸಂಶೋಧಕರನ್ನು ಭೇಟಿಯಾಗಿ ಜಿಲ್ಲೆಯಲ್ಲಿರುವ ಅಪರೂಪದ ಶಾಸನಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಅವುಗಳೆಲ್ಲವನ್ನೂ ಸಂರಕ್ಷಣೆ ಮಾಡುವುದಕ್ಕೆ ಪಣ ತೊಟ್ಟಿದ್ದು, ಮೊದಲ ಹಂತದಲ್ಲಿ ಹೆರಿಟೇಜ್ ಪಾರ್ಕ್ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಅಳಿವಿನಂಚಿನಲ್ಲಿರುವ ಶಾಸನಗಳ ರಕ್ಷಣೆ

ಪ್ರಸ್ತುತ ಜಿಲ್ಲೆಯಲ್ಲಿರುವ ಸಾವಿರಕ್ಕೂ ಹೆಚ್ಚು ಶಾಸನಗಳು ಸೂಕ್ತ ಸಂರಕ್ಷಣೆ ಇಲ್ಲದೆ ಚರಂಡಿಗಳೊಳಗೆ, ಚರಂಡಿ ಮೇಲೆ ಹಾಸುಕಲ್ಲುಗಳಾಗಿ, ದನಗಳನ್ನು ಕಟ್ಟುವುದಕ್ಕೆ, ಕಾಡುಗಳಲ್ಲಿ ಅನಾಥವಾಗಿ ಬಿದ್ದಿವೆ. ಗ್ರಾಮಸ್ಥರಿಗೆ ಯಾರಿಗೂ ಇವುಗಳ ಮಹತ್ವವೇ ಗೊತ್ತಿಲ್ಲ. ಪ್ರಾಚೀನ ಕಾಲದ ಇತಿಹಾಸವನ್ನು ಸಾರುವ ಶಿಲಾಶಾಸನಗಳು ಮಣ್ಣಾದರೆ ಅದರೊಳಗಿರುವ ಅಪರೂಪದ ಇತಿಹಾಸ ಕಣ್ಮರೆಯಾಗುವುದಂತೂ ನಿಶ್ಚಿತ. ಅದಕ್ಕಾಗಿ ಅವೆಲ್ಲವನ್ನೂ ಸಂರಕ್ಷಿಸುವುದಕ್ಕೆ ಜಿಲ್ಲಾ ಪಂಚಾಯಿತಿ ಸಿಇಓ ಪಣ ತೊಟ್ಟಿದ್ದಾರೆ.

Zilla Panchayat Planned To Build Heritage Parks In All Taluks In Mandya District

ಇತಿಹಾಸ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿರುವ ಸಿಇಓ ಶೇಖ್ ತನ್ವೀರ್ ಆಸ್‌ಿ ಅವರು ಮಂಡ್ಯ ಜಿಲ್ಲೆಗೆ ಆಗಮಿಸಿದ ದಿನದಿಂದಲೂ ಶಾಸನಗಳು, ಸ್ಮಾರಕಗಳು, ಪ್ರಾಚೀನ ದೇವಾಲಯಗಳು, ಪುರಾತನ ಕಾಲದ ಗುಹೆಗಳು, ಕಲ್ಯಾಣಿಗಳು, ಶಿಥಿಲಾವಸ್ಥೆಯಲ್ಲಿರುವ ಅಪರೂಪದ ಇತಿಹಾಸದ ಕುರುಹುಗಳನ್ನು ಕಂಡರು. ಅವುಗಳಿಗೆ ಒದಗಿರುವ ಸ್ಥಿತಿ-ಗತಿಗಳನ್ನು ಕಂಡು ಬೇಸರಗೊಂಡರುವ ಅವುಗಳ ರಕ್ಷಣೆಗೆ ಏನು ಮಾಡಬಹುದೆಂದು ಆಲೋಚಿಸಿದಾಗ ನರೇಗಾ ಯೋಜನೆಯಲ್ಲಿ ಮಾಡಬಹುದಾಗಿದ್ದ ಉದ್ಯಾನವನಗಳಲ್ಲೇ ಅವುಗಳನ್ನು ಸಂರಕ್ಷಿಸಿಡಲು ನಿರ್ಧರಿಸಿದರು.

ಗುಹೆಯೊಳಗಿನ ಅಚ್ಚರಿ

ನಾಗಮಂಗಲದ ಸಮೀಪ ಐತಿಹಾಸಿಕ ಗುಹೆಯೊಂದಿದ್ದು ಅದರೊಳಗೆ ಪುರಾತನ ಕಾಲದಲ್ಲಿ ಬಳಸುತ್ತಿದ್ದ ಕಲ್ಲಿನ ಯಂತ್ರಗಳು, ಚರ್ಮ ತೆಗೆಯುವ ಯಂತ್ರಗಳು, ಗುಹೆಯನ್ನೇ ಕಾರ್ಖಾನೆಯಾಗಿ ಪರಿವರ್ತನೆ ಮಾಡಿಕೊಂಡಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದರು. ಅದರೊಳಗಿದ್ದ ಮಣ್ಣಿನ ಮಡಿಕೆ ದೀಪಗಳನ್ನು ಕಂಡು ಆಕರ್ಷಿತರಾದರು. ಇದಾವುದರ ಪರಿಚಯವೂ ಈಗಿನ ಜನರಿಗೆ ಗೊತ್ತಿಲ್ಲ. ಅವುಗಳ ಮಹತ್ವವನ್ನು ತಿಳಿದುಕೊಳ್ಳುವ ಕುತೂಹಲವೂ ಇಲ್ಲ. ಇತಿಹಾಸಕಾರರು, ಸಂಶೋಧಕರು, ಪರಿಸರ ಪ್ರೇಮಿಗಳು ಈ ಸ್ಮಾರಕಗಳನ್ನು ಸಂರಕ್ಷಿಸಲು ಮುಂದಾದರೂ ಅವರಿಗೆ ನಿರೀಕ್ಷಿತ ರೀತಿಯಲ್ಲಿ ಯಾರಿಂದಲೂ ಬೆಂಬಲ ದೊರೆಯಲಿಲ್ಲ.

ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಎಲ್ಲಾ ತಾಲೂಕುಗಳಲ್ಲಿಯೂ ಸಾಂಸ್ಕೃತಿಕ ಉದ್ಯಾನವನಗಳನ್ನು ನಿರ್ಮಿಸುವುದು. ಅದರೊಳಗೆ ಗಿಡ-ಮರಗಳನ್ನು ಬೆಳೆಸಿ, ವಾಕಿಂಗ್ ಪಾತ್‌ಗಳನ್ನು ನಿರ್ಮಿಸುವುದು. ಅದರೊಳಗೆ ಒಂದು ಸ್ಥಳದಲ್ಲಿ ಶಿಲಾ ಶಾಸನಗಳನ್ನಿಟ್ಟು ಬಿಸಿಲು, ಮಳೆಯಿಂದ ರಕ್ಷಿಸಲು ಮೇಲ್ಛಾವಣಿ ಹಾಕುವುದು. ಪ್ರತಿಯೊಂದು ಶಾಸನಗಳ ಬಗ್ಗೆ ಮಾಹಿತಿ ಇರುವಂತೆ ಮಾಡಲಾಗುವುದು.

ಈ ಸಾಂಸ್ಕೃತಿಕ ಉದ್ಯಾನವನಕ್ಕೆ ಊರಿನ ಜನರಿಂದ, ಪ್ರವಾಸಿಗರು, ವಿದ್ಯಾರ್ಥಿಗಳು, ಯುವ ಸಮೂಹದಿಂದ ದೊರೆಯುವ ಬೆಂಬಲ, ಆಸಕ್ತಿಯನ್ನು ಗುರುತಿಸಿ ನಂತರದ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾಂಸ್ಕೃತಿಕ ಉದ್ಯಾನವನಗಳ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಲು ನಿರ್ಧರಿಸಲಾಗಿದೆ.

ಪ್ರಾಚೀನ ಸ್ಮಾರಕಗಳು, ದೇವಾಲಯಗಳು, ಕಲ್ಯಾಣಿಗಳು, ಶಿಲಾಶಾಸನಗಳು ಸೇರಿದಂತೆ ಪಾರಂಪರಿಕವಾಗಿ ಹೆಸರಾಗಿರುವ ಸ್ಥಳಗಳಿಗೆ ತೆರಳುವುದಕ್ಕೆ ರಸ್ತೆಗಳೇ ಸಮರ್ಪಕವಾಗಿಲ್ಲ. ಈ ಸ್ಥಳಗಳಿಗೆ ತೆರಳುವುದಕ್ಕೆ ರಸ್ತೆ ಅನುಕೂಲ ಮಾಡಿಕೊಡುವುದಕ್ಕೂ ಸಿಇಓ ಭರವಸೆ ನೀಡಿದ್ದಾರೆ. ರಸ್ತೆಗಳು ಅಭಿವೃದ್ಧಿಯಾದರೆ ಪ್ರವಾಸಿ ಕ್ಷೇತ್ರವಾಗಿಯೂ ಅಭಿವೃದ್ಧಿ ಹೊಂದಲಿವೆ ಎನ್ನುವುದು ಅವರ ಅಭಿಪ್ರಾಯವಾಗಿದೆ.ಹೆರಿಟೇಜ್ ಉದ್ಯಾನವನಗಳಿಗೆ ಜಾಗ ಗುರುತಿಸಿರುವ ಸ್ಥಳಗಳು

ಧರ್ಮಕ್ಕಿಂತ ಸಂಸ್ಕೃತಿ ದೊಡ್ಡದು

ನಾವು ಯಾವುದೇ ಧರ್ಮದವರಾಗಿರಲಿ ಸಂಸ್ಕೃತಿ ಧರ್ಮಕ್ಕಿಂತ ದೊಡ್ಡದು. ಸಾಂಸ್ಕೃತಿಕ ಸ್ಮಾರಕಗಳು, ಶಾಸನಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗಲಿದೆ. ಇತಿಹಾಸ ಸಂಶೋಧಕರಿಗೂ ಅನುಕೂಲವಾಗಲಿದೆ. ಶಾಸನಗಳ ಮಹತ್ವವನ್ನು ಎಲ್ಲರೂ ಅರಿತು ಅವು ನಮ್ಮ ಸಂಸ್ಕೃತಿಯ ಭಾಗ, ಈ ನೆಲದ ಶಕ್ತಿ ಎಂಬ ಭಾವನೆ ಮೂಡಿಸಿಕೊಳ್ಳಬೇಕು. ಅವುಗಳನ್ನು ನಮ್ಮ ಆಸ್ತಿಯಂತೆ ಸಂರಕ್ಷಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓ ಶೇಖ್ ತನ್ವಿರ್ ಆಸಿಫ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+