Yaduveer: ಮಂಡ್ಯ ಮತ್ತು ಮೈಸೂರು ಸಂಸ್ಥಾನದ ನಡುವಿನ ನಂಟು ಎಂತಹದ್ದು ಗೊತ್ತಾ?, ಇಲ್ಲಿದೆ ವಿವರ
ಮಂಡ್ಯ, ಸೆಪ್ಟೆಂಬರ್, 11: ಮೈಸೂರು ಸಂಸ್ಥಾನದ ಮೂಲ ಬೇರು ಮಂಡ್ಯ ಜಿಲ್ಲೆಯಲ್ಲಿದೆ. ಹಾಗಾಗಿ ನಮಗೆ ಮಂಡ್ಯದೊಂದಿಗೆ ಹೃದಯಪೂರ್ವಕ ನಂಟಿದೆ ಎಂದು ಮೈಸೂರು ಅರಸು ಮನೆತನದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಮಾನದಿಂದ ನುಡಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮೀರಾ ಶಿವಲಿಂಗಯ್ಯ ಅವರು ರಚಿಸಿರುವ ಮರೆಯಲಾಗದ ಮಹಾನುಭಾವ ನಾಲ್ವಡಿ ಕೃಷ್ಣರಾಜ ಒಡೆಯರ್ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮೈಸೂರು ಸಂಸ್ಥಾನದ ಮೊದಲ ರಾಜಧಾನಿ ಶ್ರೀರಂಗಪಟ್ಟಣ. ಇಲ್ಲಿಯೇ ನಮ್ಮ ಹಿರಿಯರಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ಚಿಕ್ಕದೇವರಾಜ ಒಡೆಯರ್ ಸೇರಿದಂತೆ ಸಂಸ್ಥಾನದ ಕೀರ್ತಿ ಕಳಶರು ಜನಿಸಿ ಆಳ್ವಿಕೆ ಆರಂಭಿಸಿದರು ಎಂದು ಬಣ್ಣಿಸಿದರು.

ಶಿಂಷಾದಲ್ಲಿ ದೇಶದ ಪ್ರಪ್ರಥಮ ಜಲವಿದ್ಯುದಾಗಾರ ನಿರ್ಮಿಸಿದ್ದು ನಾಲ್ವಡಿಯವರಾದರೆ, ಮೈಷುಗರ್ ಕಾರ್ಖಾನೆ ಕೂಡ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲೇ ಜನ್ಮ ತಳೆದಿದ್ದು. ನಂತರದಲ್ಲಿ ಜಿಲ್ಲೆಯ ಜನರ ಜೀವನಾಡಿಯಾದ ಕನ್ನಂಬಾಡಿ ಅಣೆಕಟ್ಟು ನಿರ್ಮಾಣ ಕೂಡ ಒಡೆಯರ್ ಅವರ ಕೀರ್ತಿ ಕಳಶವಾಗಿವೆ. ಹಾಗಾಗಿ ಮಂಡ್ಯದಲ್ಲಿ ಮೈಸೂರು ಸಂಸ್ಥಾನದ ಬೇರು ಗಟ್ಟಿಯಾಗಿ ತಳವೂರಿದೆ ಎಂದು ಹೇಳಿದರು.
ನಾವು ನಮ್ಮ ಸಂಸ್ಥಾನದ ಬಗ್ಗೆ ಮಾತನಾಡುವುದಕ್ಕಿಂತ ಜನತೆ ಕೃತಜ್ಞತಾ ಪೂರ್ವಕವಾಗಿ ಸ್ಮರಿಸುವಂತಹ ಕೆಲಸ ಮಾಡಿರುವ ನಮ್ಮ ಹಿರಿಯರ ಮಾದರಿ ಪ್ರಸ್ತುತದಲ್ಲಿ ಮೈಸೂರು ಬ್ರಾಂಡ್ ಆಗಬೇಕಿದೆ. ಮೈಸೂರಿನ ರಾಜರು ನಿರ್ಮಿಸಿದ ಸಂಸ್ಥೆಗಳು ಶತಮಾನೋತ್ಸವ ಕಂಡಿದೆ. ಹಾಗಾಗಿ ಮೈಸೂರಿನ ಸುವರ್ಣ ಕಾಲ ಮತ್ತೆ ಮರುಕಳಿಸುವಂತೆ ನಾವುಗಳು ವರ್ತಮಾನದಲ್ಲಿ ನಾಲ್ವಡಿಯವರ ದೂರದೃಷ್ಠಿಯನ್ನು ಮಾದರಿಯಾಗಿಸಿಕೊಳ್ಳಬೇಕು ಎಂದರು.
ಮುಂದಿನ ಪೀಳಿಗೆಗೆ ನಾವು ಕೊಡಬಹುದಾದ ಕೊಡುಗೆ ಏನು? ಇಂದು ನಮ್ಮ ಪ್ರಕೃತಿ ವಿಕೃತಿಯಾಗುತ್ತಿದೆ. ಆಧುನಿಕ ಸೈಬರ್ ಯುಗ ಭದ್ರತೆಯಿಲ್ಲದೆ ನರಳುತ್ತಿದೆ. ಈ ಎರಡೂ ಅಂಶಗಳನ್ನು ಮುನ್ನೆಲೆಗೆ ತಂದು ಸಂರಕ್ಷಿಸಿದರೆ ಮಾತ್ರ ವಿಕೃತಿ ಹೋಗಿ ನೈಜ ಪ್ರಕೃತಿ ಬರಲಿದೆ. ಅದಕ್ಕಾಗಿ ಪ್ರತಿಯೊಬ್ಬರೂ ನಮ್ಮ ಪೂರ್ವಿಕರಂತೆ ಬಟ್ಟೆ ಬ್ಯಾಗ್ ಬಳಸುವುದನ್ನು ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು ಕೃತಿ ಕುರಿತು ಮಾತನಾಡಿ, ಮೀರಾ ಶಿವಲಿಂಗಯ್ಯ ಅವರು ದೇಶದ ರಾಜರುಗಳ ಎಲ್ಲ ವಿಚಾರಗಳನ್ನೂ ಮಂಥನ ಮಾಡಿ ಅದರಲ್ಲಿ ನಾಲ್ವಡಿಯವರ ಕೊಡುಗೆಯನ್ನು ತುಲನೆ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಷ್ಟು ವೈಜ್ಞಾನಿಕ ಮತ್ತು ಆಧ್ಯಾತ್ಮಿಕವಾಗಿ ಆಳ್ವಿಕೆ ಮಾಡಿದ ಮತ್ತೊಬ್ಬ ರಾಜನಿಲ್ಲ ಎಂಬುದನ್ನು ತಮ್ಮ ಗಹನ ಸಂಶೋಧನೆಯಲ್ಲಿ ಕಂಡುಕೊಂಡು ಪ್ರತಿಯೊಂದು ಹಂತವನ್ನೂ ಕೂಡ ಸಾಧ್ಯಂತವಾಗಿ ನಿದರ್ಶನಗಳ ಮೂಲಕ ದಾಖಲಿಸುತ್ತಾ ಹೋಗಿದ್ದಾರೆ ಎಂದರು.
ಪಾಶ್ಚಿಮಾತ್ಯ ವಿದ್ವಾಂಸರೇ ಒಪ್ಪಿದಂತೆ ಕೃಷ್ಣರಾಜಭೂಪ ಮನೆ ಮನೆಗೆ ದೀಪ ಎಂಬ ಮನೆ ಮಾತು ಈಗ ವರ್ತಮಾನಕ್ಕೆ ಅನ್ವಯಿಸುತ್ತಿದೆ. ಲಾರ್ಡ್ ಕರ್ಜನ್ ಅವರು 1902ರಲ್ಲಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಮಾಡಿದ್ದ ಭಾಷಣವನ್ನು ನಾವೆಲ್ಲರೂ ತಿಳಿಯಬೇಕು. ಅದರಲ್ಲೂ ವಿದ್ಯಾರ್ಥಿ ಯುವಜನತೆ ಅರಿಯಬೇಕಾದ ಅಗತ್ಯವಿದೆ ಎಂದು ಬೆಳಕು ಚೆಲ್ಲಿದರು.
ಈ ವೇಳೆ ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ. ಜಯಪ್ರಕಾಶಗೌಡ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಪ್ರೊ. ಬಿ.ಶಿವಲಿಂಗಯ್ಯ, ಡಾ. ಹೇಮಾ, ವಿಸ್ಮಯ ಬುಕ್‌ಹೌಸ್‌ನ ಪ್ರಕಾಶ್ ಚಿಕ್ಕಪಾಳ್ಯ, ಜಾನಪದ ಜನ್ನೆಯರು ಸಂಘಟನೆಯ ಡಾ.ಕಾರ್ಕಳ್ಳಿ ಕೆಂಪಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications