ರಂಗನಾಥನ ಗೋಪುರ ಪ್ರತಿಷ್ಠಾಪನೆಗೆ ಯದುವೀರ್, ತ್ರಿಷಿಕಾ
ಶ್ರೀರಂಗಪಟ್ಟಣ, ಮಾರ್ಚ್ 03 : ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದ ಗೋಪುರದ ಪುನರ್ ಪ್ರತಿಷ್ಠಾಪನಾ ಮಹೋತ್ಸವು ಮೇಲುಕೋಟೆ ಶ್ರೀಯದುಗಿರಿ ಯತಿರಾಜಮಠದ ಶ್ರೀ ನಾರಾಯಣ ರಾಮಾನುಜಜೀಯರ್ ರವರ ಉಪಸ್ಥಿತಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು
ಮೈಸೂರು ಸಾಮ್ರಾಜ್ಯದ ವೊಡೆಯರ್ ಕುಟುಂಬದ ಪ್ರತಿಮಾದೇವಿ ಶ್ರೀಕಂಠದತ್ತ ವೊಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ವೊಡೆಯರ್, ಅವರ ಧರ್ಮಪತ್ನಿ ತ್ರಿಷಿಕಾ ಯದುವೀರ್ ವೊಡೆಯರ್ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ತಂದರು. [ಜ್ಯೋತಿಷ್ಯ ಪರಿಹಾರ: ದೇವಾಲಯದ ಗೋಪುರ ನೆರಳು ಮನೆ ಮೇಲೆ ಬಿದ್ದರೆ...]

ಸುಮಾರು ಒಂದು ವರ್ಷದ ಹಿಂದೆ ಗೋಪುರದ ಕಳಶ ಕೆಳಗೆ ಬಿದ್ದು ವಿಘ್ನವಾಗಿತ್ತು. ಇದನ್ನು ಸಕಲ ಸಾಂಪ್ರದಾಯಿಕ ಪರಂಪರೆಯ ರೀತಿಯಲ್ಲಿ ಯಜ್ಞ, ವಿಶೇಷ ಪೂಜೆ ಪುನಸ್ಕಾರಗಳಿಂದ ಗೋಪುರದ ಕಳಶವನ್ನು ಪ್ರತಿಷ್ಠಾಪಿಸಲಾಯಿತು. [ಜ್ಯೋತಿಷ್ಯ: ರಾಹು ಗ್ರಹವು ಕೊಟ್ಟರೆ ವರ, ಇಟ್ಟರೆ ಶಾಪ!]

ಮೇಲುಕೋಟೆ ಶ್ರೀಯದುಗಿರಿ ಯತಿರಾಜಮಠದ ಶ್ರೀ ನಾರಾಯಣ ರಾಮಾನುಜಜೀಯರ್ ರವರು ಆಶೀರ್ವಚನ ನೀಡುತ್ತ, ಈ ಬರಗಾಲದ ಸಮಯದಲ್ಲಿ ಶ್ರೀರಂಗನಾಥ ಹಾಗೂ ಶ್ರೀಮದ್ ರಾಮಾನುಜರ ಕೃಪೆಯಿಂದ ಎಲ್ಲ ಕಡೆ ಮಳೆ ಬೆಳೆಯಾಗಲೆಂದು ಭಗವಂತನಲ್ಲಿ ಪ್ರತಿದಿನವು ಪ್ರಾರ್ಥಿಸುತ್ತಿದ್ದೇವೆ ಎಂದರು.
30 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು. ಅಷ್ಟು ಜನರಿಗೂ ದೇವಸ್ಥಾನದ ವತಿಯಿಂದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಐತಿಹಾಸಿಕ ಸುಪ್ರಸಿದ್ದ ಮಹೋತ್ಸವಕ್ಕೆ ಉಸ್ತುವಾರಿ ಮಂತ್ರಿಯವರ ಗೈರು ಎದ್ದು ಕಾಣುತ್ತಿತ್ತು. [ಮೈಸೂರು ಅರಮನೆ ಆಯುಧ ಪೂಜೆಯ ವೈಖರಿ, ನಲಿದಾಡಿದ ಯದುವೀರ್ ಪತ್ನಿ ತ್ರಿಷಿಕಾ ಕುಮಾರಿ]












Click it and Unblock the Notifications