ಸುಮಲತಾ FB ಪೇಜ್ ಬ್ಲಾಕ್! ಕುತಂತ್ರ ಹಿಂದೆ ಇರೋದು "ಇವರೇನಾ?"
Recommended Video
ಮಂಡ್ಯ, ಏಪ್ರಿಲ್ 15: ಮಂಡ್ಯ ಲೋಕಸಭೆ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಲಾಗಾಯ್ತೂ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಈಗ ಮತ್ತೊಂದು ಸಮಸ್ಯೆ ಎದುರಾಗಿದೆ.
ಅವರ ಫೇಸ್ ಬುಕ್ ಪುಟವನ್ನು ಬ್ಲಾಕ್ ಮಾಡಲಾಗಿದ್ದು, ಇದೀಗ ಅವರು ಹೊಸ ಫೇಸ್ ಬುಕ್ ಪುಟವನ್ನು ಆರಂಭಿಸಿದ್ದಾರೆ. ಈ ಪುಟವನ್ನು ಪ್ರಮೋಶನ್ ಮಾಡುವಂತೆ ಅವರು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಸುಮಲತಾ ಅವರ ಫೇಸ್ ಬುಕ್ ಖಾತೆಯನ್ನು ಬ್ಲಾಕ್ ಮಾಡಿದ್ದು ಕುತಂತ್ರದ ಭಾಗವಾಗಿ ಎಂದಿರುವ ಅವರು, ಈ ಮೂಲಕ ನಿಮ್ಮ ಪಕ್ಷ ಎಷ್ಟು ಕೆಳಮಟ್ಟಕ್ಕಿಳಿದಿದೆ ಎಂಬುದು ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ. ಆ ಮೂಲಕ ಈ ಕೆಲಸ ಮಾಡಿದ್ದು, ಜೆಡಿಎಸ್ ನವರು ಎಂಬುದನ್ನು ಪರೋಕ್ಷವಾಗಿ ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕ್ರಿಯಾಶೀಲರಾಗಿದ್ದ ಸುಮಲತಾ ಅವರು ತಮ್ಮ ಫೇಸ್ ಬುಕ್ ಪೇಜ್ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ಆದರೆ ಇದೀಗ ಆ ಪೇಜ್ ಬ್ಲಾಕ್ ಆಗಿದ್ದು, ಅವರಲ್ಲಿ ಸಾಕಷ್ಟು ಬೇಸರವನ್ನುಂಟು ಮಾಡಿದೆ.
ಮಂಡ್ಯ ರಾಜಕೀಯದಲ್ಲಿ ದಿನೇ ದಿನೇ ಸಾಕಷ್ಟು ಬೆಳವಣಿಗೆ ನಡೆಯುತ್ತಿದ್ದು, ಸುಮಲತಾ ಅವರು ಕಾಂಗ್ರೆಸ್ -ಜೆಡಿಎಸ್ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಎದುರಿಸಲಿದ್ದು, ಅವರಿಗೆ ಬಿಜೆಪಿ ಬೆಂಬಲ ಘೋಷಿಸಿದೆ.
ಫೇಸ್ ಬುಕ್ ಪೇಜ್ ಬ್ಲಾಕ್!
"ಕುತಂತ್ರದ ಭಾಗವಾಗಿ ನಾನು ಇದುವರೆಗೆ ಜನರೊಂದಿಗೆ ಸಂಪರ್ಕದಲ್ಲಿದ್ದ ಫೇಸ್ ಬುಕ್ ಪೇಜನ್ನು ಬ್ಲಾಕ್ ಮಾಡಿಸಿದ್ದಾರೆ ..ಇದು ನನ್ನ ಅಧಿಕೃತವಾದ ಪೇಜ್ ಆರಂಭಿಸಿದ್ದೇನೆ ಇದನ್ನು ಪ್ರಮೋಷನ್ ಮಾಡೋದು ಜನರಿಗೆ ತಲುಪಿಸೋದು ನಿಮ್ಮೆಲ್ಲರ ಜವಾಬ್ದಾರಿ ...ಇದು ನನ್ನ ಪ್ರೀತಿಯ ಮನವಿ" ಎಂದು ಕೋರಿರುವ ಸುಮಲತಾ, ವಿಡಿಯೋ ಪೋಸ್ಟ್ ಮಾಡಿದ್ದಾರೆ.
|
ಜೆಡಿಎಸ್ ಕಾರಣ?
ನಿಮ್ಮ ಪಕ್ಷ ಯಾವ ಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಇದು ಸಾಬೀತುಪಡಿಸಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸುಮಲತಾ ಹೇಳಿದ್ದಾರೆ. ಈ ಮೂಲಕ ಫೇಸ್ ಬುಕ್ ಪುಟ ಬ್ಲಾಕ್ ಆಗಿದ್ದಕ್ಕೆ ಜೆಡಿಎಸ್ ನವರೇ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ.
|
ಅತ್ಯಂತ ಕೆಳಮಟ್ಟಕ್ಕೆ ಇಳಿದ ಸಂಕೇತ ಇದು
ಇದು ಚುನಾವಣೆಗಾಗಿ ಒಬ್ಬ ವ್ಯಕ್ತಿ ಅತ್ಯಂತ ಕೆಳಮಟ್ಟಕ್ಕೆ ಹೋಗುತ್ತಾನೆ ಎಂಬುದಕ್ಕೆ ಸಾಕ್ಷಿ ಆದರೆ ಇಂಥ ಗಿಮಿಕ್ ಗಳಿಂದ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ-ಸುಮಲತಾ ಅಂಬರೀಶ್
|
ಕಿಡಿಗೇಡಿಗಳು ಬ್ಲಾಕ್ ಮಾಡಿದ್ದಾರೆ
ಕೆಲವು ಕಿಡಿಗೇಡಿಗಳು ನನ್ನ ಸೋಶಿಯಲ್ ಮೀಡಿಯಾ ಪುಟವನ್ನು ಬ್ಲಾಕ್ ಮಾಡಿದ್ದಾರೆ. ನಾನು ಈ ಪೇಜ್ ಮೂಲಕ ಸತ್ಯ ಮತ್ತು ಮಂಡ್ಯ ಜನರಿಗಾಗಿ ನಾನು ಕೈಗೊಳ್ಳಲಿರುವ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಿದ್ದೆ. ನಮ್ಮ ತಂಡ ಈ ಬಗ್ಗೆ ಕೆಲಸ ಮಾಡುತ್ತಿದ್ದು, ಸಮಸ್ಯೆಯನ್ನು ಅನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ -ಸುಮಲತಾ ಅಂಬರೀಶ್












Click it and Unblock the Notifications