Get Updates
Get notified of breaking news, exclusive insights, and must-see stories!

ಮಂಡ್ಯ: ಅಗ್ರಹಾರ ಬಾಚಹಳ್ಳಿಯಲ್ಲಿ ಶ್ರೀ ದೊಡ್ಡಕೇರಮ್ಮ ಜಾತ್ರಾ ಸಂಭ್ರಮ

ಮಂಡ್ಯ, ಏಪ್ರಿಲ್‌ 25: ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಕಸಬಾ ಹೋಬಳಿಯ ಅಗ್ರಹಾರ ಬಾಚಹಳ್ಳಿ ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ (ಬಾಚಳ್ಳಮ್ಮ) ಅಮ್ಮನವರ ಸಿಡಿ ಹಬ್ಬ ಹಾಗೂ ರಥೋತ್ಸವವು ಇಂದು ಏಪ್ರಿಲ್‌ 25ರಿಂದ ಏಪ್ರಿಲ್‌ 28 ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದ್ದು, ಏಪ್ರಿಲ್‌ 26ರಂದು ನಡೆಯಲಿರುವ ಶ್ರೀ ಲಕ್ಷ್ಮೀ ದೇವಿ ಅಮ್ಮನವರ ಬ್ರಹ್ಮ ರಥೋತ್ಸವಕ್ಕೆ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

ಇಂದು ಏಪ್ರಿಲ್‌ 25ರಂದು ಶುಕ್ರವಾರ ಬೆಳಿಗ್ಗೆ ಹೂವಿನ ತೇರಿನೊಂದಿಗೆ ಅಗ್ರಹಾರ ಬಾಚಹಳ್ಳಿ ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ (ಬಾಚಳ್ಳಮ್ಮ) ಅಮ್ಮನವರ ಸಿಡಿಹಬ್ಬಕ್ಕೆ ಚಾಲನೆ ದೊರೆತಿದ್ದು, ರಾತ್ರಿ 8 ಗಂಟೆಯಿಂದ ಸಿಡಿ ಉತ್ಸವ, ಹರಕೆ ಹೊತ್ತ ಭಕ್ತರಿಂದ ಬಾಯಿ ಬೀಗ, ಎಡೆ-ಮಡೆ ಉತ್ಸವ, ಕನ್ನಂಕಾಡಿ ಉತ್ಸವ, ಕೊಂಡೋತ್ಸವ, ಶ್ರೀ ಲಕ್ಷ್ಮೀದೇವಿ ಅಮ್ಮನವರ ಮೆರವಣಿಗೆ, ರಥದ ಕಳಸ ಮೆರವಣಿಗೆ ಮತ್ತು ರಥಕ್ಕೆ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನಡೆಯಲಿವೆ.

What Is The speciality Of Mandya Sri Doddakeramma Jatre at Agrahara Bachahalli

ನಾಳೆ ಏಪ್ರಿಲ್‌ 26ರಂದು ಶನಿವಾರ ಬೆಳಿಗ್ಗೆ ಶ್ರೀ ಲಕ್ಷ್ಮೀ ದೇವಿ ಅಮ್ಮನವರ ಹಾಗೂ ಶ್ರೀ ಚನ್ನಕೇಶವ ಸ್ವಾಮಿಯವರ ಉತ್ಸವ ಮೂರ್ತಿಯ ಮೆರವಣಿಗೆಯು ಬ್ರಾಹ್ಮಣರ ಬೀದಿಯಿಂದ ಆರಂಭವಾಗಿ ಪ್ರಮುಖ ರಾಜಬೀದಿಯಲ್ಲಿ ಸಾಗಿ ದೇವಾಲಯದ ವರೆಗೆ ಉತ್ಸವ ಮೂರ್ತಿಯ ನೆರಳು ಚಪ್ಪರದ ಪಲ್ಲಕ್ಕಿ ಉತ್ಸವವು ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಶ್ರೀ ಲಕ್ಷ್ಮೀ ದೇವಿ ಅಮ್ಮನವರ ಬ್ರಹ್ಮ ರಥೋತ್ಸವವು ಗ್ರಾಮದ ಅರಳೀಮರದ ವೃತ್ತದಿಂದ ಆರಂಭವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಬೀದಿ, ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಮುಂಭಾಗದ ಹೊಲ, ಗದ್ದೆ ಬದುಗಳು ಇರುವ ಕ್ಲಿಷ್ಟಕರ ದಾರಿಯಲ್ಲಿ ಸಾಗಿ, ಬ್ರಾಹ್ಮಣರ ಬೀದಿಯ ಮೂಲಕ ರಂಗದ ಬೀದಿಯ ರಂಗಸ್ಥಳದಲ್ಲಿ ರಥವು ನಿಲ್ಲಲಿದೆ.

Take a Poll

ಮನೆ ಮನೆಯಲ್ಲಿ ಸೋಮ ದೇವರಿಗೆ ಪೂಜೆ

ಮತ್ತೆ ಅಲ್ಲಿಂದ ದೇವಿಯ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ತರಲಾಗುತ್ತದೆ. ನಂತರ ಭಕ್ತಾಧಿಗಳು ಹಣ್ಣು-ಕಾಯಿ ಅರ್ಪಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ರಥೋತ್ಸವದಲ್ಲಿ ಭಾಗವಹಿಸುವ ಎಲ್ಲಾ ಭಕ್ತಾಧಿಗಳಿಗೆ ಗ್ರಾಮದ ಸರ್ಕಾರಿ ನೌಕರರ ಸಂಘದಿಂದ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾತ್ರಿ 7 ಗಂಟೆಗೆ ಗ್ರಾಮದ ಯುವಕರ ಸಂಘ ಹಾಗೂ ಬೆಂಗಳೂರು ಬಾಚಳ್ಳಿ ಬಾಯ್ಸ್ ಸಹಕಾರದೊಂದಿಗೆ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆರ್ಕೇಸ್ಟ್ರಾ ವಾಧ್ಯ ಗೋಷ್ಠಿ ಕಲಾವಿದರಿಂದ ಮನರಂಜನಾ ಕಾರ್ಯಕ್ರಮವು ನಡೆಯಲಿದೆ.

ಐದು ವರ್ಷಗಳ ನಂತರ ಜಾತ್ರಾ ಮಹೋತ್ಸವ

ಏಪ್ರಿಲ್‌ 27ರಂದು ಭಾನುವಾರ ಜಾತ್ರೆ, ಕೋಲಾಟ, ಓಕಳಿಯಾಟ, ದೇವರಿಗೆ ವಿಶೇಷ ಪೂಜೆ, ಮಹಾಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ. ಏಪ್ರಿಲ್‌ 28ರಂದು ಸೋಮನ ಕುಣಿತ, ಮನೆ ಮನೆಯಲ್ಲಿ ಸೋಮ ದೇವರುಗಳಿಗೆ ಪೂಜೆ, ಮಜ್ಜಿಗೆ ಪಾನಕ ವಿತರಣೆ ವಿತರಣಾ ಕಾರ್ಯಕ್ರಮಗಳು ಮಂಗಳವಾರ ಮಂಜಾನೆವರೆಗೆ ನಡೆಯಲಿವೆ. ಇದಲ್ಲದೇ ಐದು ವರ್ಷಗಳ ನಂತರ ನಡೆಯುತ್ತಿರುವ ಕೆ.ಆರ್ ಪೇಟೆ ಪಟ್ಟಣದ ಗ್ರಾಮ ದೇವತೆ ಶ್ರೀ ದೊಡ್ಡಕೇರಮ್ಮ ಜಾತ್ರಾ ಮಹೋತ್ಸವ ಏಪ್ರಿಲ್‌ 26ರಂದು ಬ್ರಹ್ಮ ರಥೋತ್ಸವ ಸಂಜೆ 5 ಗಂಟೆಗೆ ನಡೆಯಲಿದೆ.

What Is The speciality Of Mandya Sri Doddakeramma Jatre at Agrahara Bachahalli

ಸಿಡಿಯಾಟ ಮತ್ತು ಜಾತ್ರಾ ಮಹೋತ್ಸವ

ಜಾತ್ರೆ ಸಂಬಂಧ ಶುಕ್ರವಾರ ಪಟ್ಟಣದ ಎಲ್ಲಾ ಸಮುದಾಯದವರಿಂದ ಸೇರಿ ಕನ್ನಂಕಾಡಿ ಉತ್ಸವಗಳು, ಹಸಿರು ಬಂಡಿ ಉತ್ಸವ, ಬಾಯಿಬೀಗ, ಹಾಗೂ ದೊಡ್ಡಕೇರಮ್ಮನವರ ಪಲ್ಲಕ್ಕಿ ಮೆರವಣಿಗೆ ಸೇರಿದಂತೆ ಹತ್ತಾರು ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಏಪ್ರಿಲ್‌ 26ರಂದು ಶನಿವಾರ ಸಂಜೆ 5 ಗಂಟೆಗೆ ಪಟ್ಟಣದ ಈಶ್ವರ ದೇವಾಲಯದ ಮುಂಭಾಗದಿಂದ ರಥೋತ್ಸವ ಆರಂಭವಾಗಿ, ಮುಕ್ಕಟ್ಟೆ ಚೌಕದ ಮೂಲಕ ಸಾಗಿ, ದುರ್ಗಾಭವನ್ ವೃತ್ತ- ಶ್ರವಣಬೆಳಗೊಳ ರಸ್ತೆಯ ಮೂಲಕ ಮತ್ತೆ ಸ್ವಸ್ಥಾನ ತಲುಪಲಿದೆ.

ಏಪ್ರಿಲ್‌ 27ರಂದು ಭಾನುವಾರ ಪಟ್ಟಣದ ಹೊರವಲಯದಲ್ಲಿರುವ ಅಗ್ರಹಾರ ಬಾಚಹಳ್ಳಿ ಗ್ರಾಮಕ್ಕೆ ಹೋಗುವ ದಾರಿಯಲ್ಲಿರುವ ದೊಡ್ಡಕೇರಮ್ಮ ಮತ್ತು ಚಿಕ್ಕಮ್ಮ ದೇವಾಲಯದ ಬಳಿ ಸಿಡಿಯಾಟ ಮತ್ತು ಜಾತ್ರಾ ಮಹೋತ್ಸವ ನಡೆಯುತ್ತದೆ.

ಕುರುಕ್ಷೇತ್ರ ನಾಟಕ ಪ್ರದರ್ಶನ

ಏಪ್ರಿಲ್‌ 28ರ ಸೋಮವಾರ ಪಟ್ಟಣದ ಹೃದಯ ಭಾಗದಲ್ಲಿ ಓಕುಳಿ ಗುಂಡಿ ತೆಗೆದು ಗ್ರಾಮದವರೆಲ್ಲರೂ ಒಟ್ಟಾಗಿ ಸೇರಿ ಬಣ್ಣ ಬಣ್ಣ ನೀರಿನಿಂದ ಮಿಂದು ಓಕುಳಿ ಆಟದಲ್ಲಿ ಭಾಗವಹಿಸುತ್ತಾರೆ. ರಾತ್ರಿ 8 ಗಂಟೆಗೆ ಶ್ರೀ ದೊಡ್ಡಕೇರಮ್ಮ ಕೃಪಾ ಪೋಷಿತ ನಾಟಕ ಮಂಡಳಿಯ ವತಿಯಿಂದ ಮಾರುಗುಡಿ ಸರ್ಕಲ್‌ ನಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನ ಇರಲಿದೆ. ಈಗಾಗಲೇ ಶ್ರೀದೊಡ್ಡಕೇರಮ್ಮ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಅಂಗವಾಗಿ ಇಡೀ ಕೆ.ಆರ್ ಪೇಟೆ ಪಟ್ಟಣವು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಹಾಗೂ ತಳಿರು ತೋರಣಗಳಿಂದ ನವ ವಧುವಿನಂತೆ ಕಂಗೊಳಿಸುತ್ತಿದೆ.

What Is The speciality Of Mandya Sri Doddakeramma Jatre at Agrahara Bachahalli

ಆಧುನಿಕತೆಯಲ್ಲಿ ಕಣ್ಮರೆಯಾಗುತ್ತಿರುವ ಜಾತ್ರೆ, ಹಬ್ಬಗಳು

ಇತ್ತೀಚಿನ ದಿನಗಳಲ್ಲಿ ಜಾತ್ರೆ, ಹಬ್ಬಗಳು ರಥೋತ್ಸವಗಳು ಕಡಿಮೆಯಾಗುತ್ತಿದೆ. ಕೆಲವೊಂದು ಐತಿಹಾಸಿಕ ಸ್ಥಳದಲ್ಲಿ ಮಾತ್ರ ಕಟ್ಟುನಿಟ್ಟಿನ ಜಾತ್ರಾಮಹೋತ್ಸವಗಳು ನಡೆಯುತ್ತಿವೆ ವಿನಃ ಕೆಲವೊಂದು ಕಡೆಗಳಲ್ಲಿ ನಾಮಕವಸ್ತೆಗಷ್ಟೇ ಜಾತ್ರೆಗಳು ನಡೆಯುತ್ತಿದೆ. ಮೊದಲಿನಿಂತಹ ಉತ್ಸಾಹ ಈಗಿನ ಯುವ ಜನತೆಯಲ್ಲಿ ಇಲ್ಲ. ಹೀಗಾಗಿ ಊರಿನ ಹಿರಿಯರೇ ತಮ್ಮೊಳಗೆ ಮಾಡಿ ಮುಗಿಸುತ್ತಿದ್ದಾರೆ. ಉದ್ಯೋಗ ನಿಮಿತ್ತ ಊರು ತೊರೆಯುವ ಯುವ ಜನತೆ ಹಬ್ಬ, ಜಾತ್ರೆಗಳಲ್ಲಿ ಭಾಗವಹಿಸುವೇ ಅಪರೂಪವಾಗಿದೆ. ಹೀಗಾಗಿ ಆಧುನಿಕತೆಯ ಭರದಲ್ಲಿ ಜಾತ್ರೆ ಹಬ್ಬ ಹಾಗೂ ರಥೋತ್ಸವಗಳು ಕಡಿಮೆಯಾಗುತ್ತಿದೆ.

ರಥೋತ್ಸವದಲ್ಲಿ ಅವಘಡಗಳು

ಈ ಬಾರಿ ಕೆಲವು ಪ್ರಮುಖ ದೇವಾಲಯದಲ್ಲಿ ರಥೋತ್ಸವದ ಸಮಯದಲ್ಲಿ ಅವಘಡಗಳು ಸಂಭವಿಸಿದೆ. ಅದರಲ್ಲೂ ಮುಖ್ಯವಾಗಿ ಕರಾವಳಿಯ ಇತಿಹಾಸ ಪ್ರಸಿದ್ಧ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ವಾರ್ಷಿಕ ಉತ್ಸವದ ವೇಳೆ ರಥ ಮುರಿದು ಬಿದ್ದ ಘಟನೆ ಸಂಭವಿಸಿತ್ತು. ವರ್ಷಾವಧಿ ಜಾತ್ರೆಯ ವೇಳೆ ಬ್ರಹ್ಮರಥೋತ್ಸವ ನಡೆಯುತ್ತಿರುವಾಗ ರಥದ ಮೇಲ್ಬಾಗ ಮುರಿದು ಬಿದ್ದಿತ್ತು. ಈ ವೇಳೆ, ಕ್ಷೇತ್ರದಲ್ಲಿ ಸಾಕಷ್ಟು ಭಕ್ತರು ಹಾಗೂ ಅರ್ಚಕರು ರಥದಲ್ಲೇ ಇದ್ದರು. ಆದರೆ, ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ. ಬಳಿಕ ದೇವಿಯನ್ನು ಚಂದ್ರಮಂಡಲ ರಥದಲ್ಲಿ ಕೂರಿಸಿ ಉತ್ಸವ ಮುಂದುವರಿಸಿ, ವಿಧಿವಿಧಾನಗಳನ್ನು ನೆರವೇರಿಸಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+