Get Updates
Get notified of breaking news, exclusive insights, and must-see stories!

ತ್ರಿಶಂಕು ಸ್ಥಿತಿಯಲ್ಲಿ ಬಿಜೆಪಿ ಶಾಸಕ ನಾರಾಯಣ ಗೌಡ: ಸಚಿವರ ಮುಂದಿನ ನಡೆಯೇನು..?

ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರೆ ಸುಲಭವಾಗಿ ಗೆಲುವು ಸಾಧಿಸಿ ಇನ್ನು ಐದು ವರ್ಷಗಳ ಕಾಲ ನೆಮ್ಮದಿಯಾಗಿರಬಹುದು ಎಂಬ ಚಿಂತನೆಯಲ್ಲಿದ್ದ ನಾರಾಯಣಗೌಡರಿಗೆ ಕ್ಷೇತ್ರದ ಕಾಂಗ್ರೆಸ್ಸಿಗರು ಸಿಡಿದೆದ್ದಿರುವುದು ಚಿಂತೆ ಮಾಡುವಂತಾಗಿದೆ.

ಮಂಡ್ಯ, ಮಾರ್ಚ್ 8: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಸಚಿವರೂ ಆಗಿರುವ ಡಾ.ನಾರಾಯಣಗೌಡರು ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ವಿರೋಧದ ನಡುವೆಯೂ ಕಮಲ ಬಿಟ್ಟು ಕೈ ಹಿಡಿತ್ತಾರಾ? ಎಂಬ ವಿಚಾರ ಮಂಡ್ಯ ರಾಜಕಾರಣದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದು, ರಾಜ್ಯದ ಜನ ಮುಂದೆ ಆಗಬಹುದಾದ ರಾಜಕೀಯ ಬೆಳವಣಿಗೆಯತ್ತ ದೃಷ್ಟಿ ನೆಟ್ಟಿದ್ದಾರೆ.

ಅವಕಾಶವಾದಿ ರಾಜಕಾರಣ ಮಾಡಿಕೊಂಡು ಬಂದಿರುವ ಸಚಿವ ಡಾ.ನಾರಾಯಣಗೌಡ ಅವರು ಮುಂದೇನಾದರೂ ಬಿಜೆಪಿ ಸೋಲು ಕಂಡರೆ ತಮ್ಮ ರಾಜಕೀಯ ಭವಿಷ್ಯಕ್ಕೆ ಧಕ್ಕೆ ಯಾಗಬಹುದು ಅಧಿಕಾರ ಕೈ ತಪ್ಪಿ ಹೋಗಬಹುದು ಎಂಬ ಲೆಕ್ಕಾಚಾರದಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಕ್ಷೇತ್ರದಲ್ಲಿ ಭುಗಿಲೆದ್ದಿರುವ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಸಚಿವ ನಾರಾಯಣ ಗೌಡ ಮತ್ತು ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

What Is The Minister KC Narayana Gowda Next Move In Politics

ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರೆ ಸುಲಭವಾಗಿ ಗೆಲುವು ಸಾಧಿಸಿ ಇನ್ನು ಐದು ವರ್ಷಗಳ ಕಾಲ ನೆಮ್ಮದಿಯಾಗಿರಬಹುದು ಎಂಬ ಚಿಂತನೆಯಲ್ಲಿದ್ದ ನಾರಾಯಣಗೌಡರಿಗೆ ಕ್ಷೇತ್ರದ ಕಾಂಗ್ರೆಸ್ಸಿಗರು ಸಿಡಿದೆದ್ದಿರುವುದು ಚಿಂತೆ ಮಾಡುವಂತಾಗಿದೆ. ಒಂದು ವೇಳೆ ಕ್ಷೇತ್ರದ ಕಾಂಗ್ರೆಸ್ ಮುಖಂಡರ ವಿರೋಧವನ್ನು ಮೀರಿ ರಾಜ್ಯನಾಯಕರು ನಾರಾಯಣಗೌಡರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡರೂ ಅದರ ಪರಿಣಾಮಗಳು ಪಕ್ಷ ಮತ್ತು ನಾರಾಯಣಗೌಡರ ಮೇಲೆ ಆಗುವುದರಲ್ಲಿ ಎರಡು ಮಾತಿಲ್ಲ.

ಕಾಂಗ್ರೆಸ್‌ ಮುಖಂಡರ ಆಕ್ರೋಶಕ್ಕೆ ಕಾರಣವಾದ ನಾರಾಯಣಗೌಡ ಹೇಳಿಕೆ

ಬಿಎಸ್‌ಪಿ, ಜೆಡಿಎಸ್ ಮತ್ತು ಬಿಜೆಪಿ ಹೀಗೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾ ರಾಜಕೀಯ ಮಾಡಿಕೊಂಡು ಬಂದ ನಾರಾಯಣಗೌಡರು ಅವಕಾಶವಾದಿ ರಾಜಕಾರಣಿಯಾಗಿ ಅಧಿಕಾರ ಅನುಭವಿಸಿದರು. ಈ ನಡುವೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಗಟ್ಟಿಗೊಳಿಸುವ ಕೆಲಸವನ್ನು ಕೂಡ ಮಾಡಿದರು. ಜಿಲ್ಲೆಯಲ್ಲಿ ಕಮಲ ಅರಳಿಸುವ ಸಂಕಲ್ಪ ಮಾಡಿದ ಅವರು ಇತ್ತೀಚೆಗೆ ಪಕ್ಷದಲ್ಲಿ ತಟಸ್ಥರಾಗಿ ಉಳಿಯುವ ಪ್ರಯತ್ನ ಮಾಡಿದರಲ್ಲದೆ, ಕಾಂಗ್ರೆಸ್ ನತ್ತ ವಾಲತೊಡಗಿದ್ದರು.

What Is The Minister KC Narayana Gowda Next Move In Politics

ಕಾಂಗ್ರೆಸ್ ನಾಯಕರು ಕೂಡ ಆಪರೇಷನ್ ಹಸ್ತದ ಮೂಲಕ ಬಿಜೆಪಿಗೆ ಟಾಂಗ್ ನೀಡಬಹುದು ಎಂಬ ಚಿಂತನೆಯಲ್ಲಿದ್ದರು. ನಾರಾಯಣಗೌಡರು ಪಕ್ಷಕ್ಕೆ ಬರುತ್ತಾರೆ ಎಂಬ ಖುಷಿಯಲ್ಲಿಯೇ ಬಿಜೆಪಿಯ ಹಲವು ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುತ್ತಾರೆ ಎಂಬಿತ್ಯಾದಿ ಮಾತುಗಳನ್ನಾಡಿದರು. ಆದರೆ ಯಾವಾಗ ನಾರಾಯಣಗೌಡರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರಿಲ್ಲ ಹೀಗಾಗಿ ನನಗೆ ಕಾಂಗ್ರೆಸ್‌ನಿಂದ ಬುಲಾವ್ ಬಂದಿದೆ ಎಂಬ ಹೇಳಿಕೆ ನೀಡಿದರುವು ಕ್ಷೇತ್ರದ ಕಾಂಗ್ರೆಸ್ ನಾಯಕರು ಸೇರಿದಂತೆ ಕಾರ್ಯಕರ್ತರು ಆಕ್ರೋಶ ಭರಿತರಾದರು.

ಕೆ.ಆರ್ ಪೇಟೆ ಟಿಕೆಟ್‌ಗಾಗಿ ಆರು ಜನರಿಂದ ಅರ್ಜಿ

ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಆರು ಮಂದಿ ಟಿಕೆಟ್ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಿರುವಾಗ ಈ ಆರು ಮಂದಿಯನ್ನು ಬದಿಗೆ ಸರಿಸಿ ಪಕ್ಷಾಂತರ ಮಾಡಿದ ನಾಯಕನಿಗೆ ಪಕ್ಷದಿಂದ ಟಿಕೆಟ್ ನೀಡಲು ಮುಂದಾಗುತ್ತಿರುವುದು ಪಕ್ಷಕ್ಕಾಗಿ ದುಡಿಯುತ್ತಾ ಬಂದ ನಾಯಕರು ಮತ್ತು ಕಾರ್ಯಕರ್ತರನ್ನು ಕೆರಳಿಸಿತು. ಇಂತಹದೊಂದು ಬೆಳವಣಿಗೆ ಕ್ಷೇತ್ರದಲ್ಲಿ ಆಗುತ್ತದೆ. ಕಾಂಗ್ರೆಸ್ ಕಾರ್ಯಕರ್ತರು ತಿರುಗಿ ಬೀಳುತ್ತಾರೆ ಎಂಬ ಸಣ್ಣ ಆಲೋಚನೆಯನ್ನು ಮಾಡದ ಡಾ.ನಾರಾಯಣಗೌಡ ಮತ್ತು ಕಾಂಗ್ರೆಸ್‌ನ ರಾಜ್ಯ ನಾಯಕರು ಇದೀಗ ಆಗಿರುವ ಬೆಳವಣಿಗೆಯಿಂದ ತಲೆಕೆಡಿಸಿಕೊಳ್ಳುವಂತಾಗಿದೆ.

What Is The Minister KC Narayana Gowda Next Move In Politics

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯ ರಾಜಕಾರಣ ಸ್ವಲ್ಪ ಭಿನ್ನವಾಗಿದೆ. ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಅವರನ್ನು ಸೆಳೆಯುವ ತಂತ್ರಗಳನ್ನು ರಾಜಕೀಯ ಪಕ್ಷಗಳು ಮಾಡುತ್ತಲೇ ಬರುತ್ತಿವೆ. ಆದರೆ ಒಕ್ಕಲಿಗರು ಅದರಲ್ಲೂ ರೈತಾಪಿ ವರ್ಗವನ್ನು ಸೆಳೆದ ಜೆಡಿಎಸ್ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆದರೆ ಜೆಡಿಎಸ್‌ನಿಂದ ಬಿಜೆಪಿಯತ್ತ ಮುಖ ಮಾಡಿದ ನಾರಾಯಣಗೌಡರು ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆದ ಶಾಸಕ ಎಂಬ ಖ್ಯಾತಿಗೊಳಗಾಗಿದ್ದರು.

ಚುನಾವಣೆ ಸಮೀಪಿಸುತ್ತಿದಂತೆ ಪಕ್ಷಾಂತರಕ್ಕೆ ಮುಂದಾದ ಸಚಿವ ನಾರಾಯಣ ಗೌಡ

ಇದೀಗ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಬಿಜೆಪಿಯಿಂದ ಒಂದು ಕಾಲನ್ನು ಹೊರ ಇಟ್ಟ ನಾರಾಯಣ ಗೌಡರು ಕಾಂಗ್ರೆಸ್ ಭವ್ಯ ಸ್ವಾಗತದೊಂದಿಗೆ ತಮ್ಮನ್ನು ಬರಮಾಡಿಕೊಳ್ಳುತ್ತದೆ ಎಂಬ ಭ್ರಮೆಯಲ್ಲಿದ್ದರು. ಆದರೆ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಎದ್ದಿರುವ ಅಸಮಾಧಾನ ಇಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದೆ. ಇತ್ತ ಬಿಜೆಪಿ ನಾಯಕರು ಅವರನ್ನು ಅನುಮಾನದಿಂದ ನೋಡುವಂತಾಗಿದೆ. ಅತ್ತ ಕಾಂಗ್ರೆಸ್‌ಗೆ ಹೋದರೂ ಕ್ಷೇತ್ರದ ನಾಯಕರು ಮತ್ತು ಕಾರ್ಯಕರ್ತರ ವಿರೋಧ ಎದುರಿಸಿ ಗೆಲುವು ಸಾಧಿಸುವುದು ಅಷ್ಟೇನು ಸುಲಭವಲ್ಲ. ಜೊತೆಗೆ ಸೇಡು ತೀರಿಸಿಕೊಳ್ಳಲು ಜೆಡಿಎಸ್ ನಾಯಕರು ಕಾಯುತ್ತಿರುವುದು ಸುಳ್ಳೇನಲ್ಲ.

ಒಂದು ವೇಳೆ ಕ್ಷೇತ್ರದ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಹೆದರಿ ಬಿಜೆಪಿಯಲ್ಲಿ ಉಳಿದರೂ ಅವರಿಗೆ ಪಕ್ಷದಲ್ಲಿ ಮೊದಲಿನ ಗೌರವ ಸಿಗುವುದು ಕಷ್ಟವೇ. ಜತೆಗೆ ಅವರನ್ನು ಅನುಮಾನದಿಂದಲೇ ನೋಡುವುದಂತು ಖಚಿತ. ಸದ್ಯ ಇದೆಲ್ಲವನ್ನು ಗಮನಿಸಿದರೆ ಡಾ.ನಾರಾಯಣಗೌಡರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮುಂದೇನು ಎನ್ನುವುದನ್ನು ಕಾಲವೇ ಹೇಳಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+