ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

100 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ

|
Google Oneindia Kannada News

ಮಂಡ್ಯ, ಮಾರ್ಚ್ 25 : ಮಂಡ್ಯದಲ್ಲಿ ಲೋಕಸಭಾ ಚುನಾವಣೆ ಕಾವು ಏರ ತೊಡಗಿದೆ, ಜೊತೆಗೆ ಬಿಸಿಲಿನ ಝಳವೂ ಹೆಚ್ಚಾಗಿದೆ. ಕಾವೇರಿ ನದಿ ಪಾತ್ರದ ಪ್ರಮುಖ ಜಲಾಶಯ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ 100 ಅಡಿಗೆ ಕುಸಿದಿದೆ.

ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಭಾನುವಾರ 100 ಅಡಿಗೆ ಕುಸಿದಿದೆ. 49.454 ಟಿಎಂಸಿ ನೀರು ಸಂಗ್ರಹ ಮಾಡುವ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 23.007 ಟಿಎಂಸಿ ನೀರಿನ ಸಂಗ್ರಹವಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೇಸಿಗೆಯ ಬಿಸಿಲು ಮತ್ತು ಹಲವು ತಿಂಗಳುಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗಿಲ್ಲ. ಆದ ಕಾರಣ ಜಲಾಶಯಕ್ಕೆ ಒಳ ಹರಿವು ಕಡಿಮೆಯಾಗಿದೆ. ಸದ್ಯ ಜಲಾಶಯದಲ್ಲಿರುವ ನೀರಿನಲ್ಲಿ 14 ಟಿಎಂಸಿಯಷ್ಟು ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಬಹುದಾಗಿದೆ.

ಕೆ ಆರ್ ಎಸ್ ನಲ್ಲಿ ಹೆಚ್ಚು ನೀರಿನ ಸಂಗ್ರಹ : ರೈತರ ಮೊಗದಲ್ಲಿ ಸಂತಸಕೆ ಆರ್ ಎಸ್ ನಲ್ಲಿ ಹೆಚ್ಚು ನೀರಿನ ಸಂಗ್ರಹ : ರೈತರ ಮೊಗದಲ್ಲಿ ಸಂತಸ

Water level at KRS dips to 100 feet no need for alarm

ಕಳೆದ ವರ್ಷ ಇದೇ ದಿನದಲ್ಲಿ ಕೆಆರ್‌ಎಸ್ ಜಲಾಶಯದಲ್ಲಿ 80.59 ಅಡಿ ನೀರಿನ ಸಂಗ್ರಹವಿತ್ತು. ಪ್ರಸ್ತುತ ಇರುವ ನೀರಿನ ಸಂಗ್ರಹದಲ್ಲಿ ಜುಲೈ ತನಕ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕದ ಮತದಾರರೆ, ನಿಮ್ಮ ಕ್ಷೇತ್ರ ಯಾವುದು? ಕಳೆದ ಬಾರಿ ಗೆದ್ದವರು, ಸೋತವರು ಯಾರು?

ಕೆಆರ್‌ಎಸ್ ಮಂಡ್ಯ ಜಿಲ್ಲೆಯ ಜನರಿಗೆ ಮಾತ್ರ ಜೀವನಾಡಿಯಾಗಿಲ್ಲ. ಬೆಂಗಳೂರು ನಗರಕ್ಕೆ ಕೆಆರ್‌ಎಸ್‌ನಿಂದಲೇ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಕೃಷಿಗಾಗಿ ಸಹ ಸಾವಿರಾರು ರೈತರು ಕಾವೇರಿ ಜಲಾಶಯವನ್ನು ಅವಲಂಬಿಸಿದ್ದಾರೆ.

ಈ ವರ್ಷದ ಮಳೆಗಾಲದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗಿತ್ತು. ಕೆಆರ್‌ಎಸ್ ಭರ್ತಿಯಾಗಿ ಪ್ರತಿ ದಿನ 1 ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಹರಿಯಬಿಡಲಾಗಿತ್ತು.

English summary
The water-level in Krishnaraja Sagar dam Mandya dipped to 100 feet. KRS which is the lifeline of several districts including Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X