ನಿಖಿಲ್ ಗೆಲುವಿಗೆ 150 ಕೋಟಿ: ತಪ್ಪೊಪ್ಪಿಕೊಂಡ ಜೆಡಿಎಸ್ ಮುಖಂಡರು?

Recommended Video

      Mandya: ನಿಖಿಲ್ ಕುಮಾರಸ್ವಾಮಿ ಬಗ್ಗೆ ಹೊರಬಿತ್ತು ಆಘಾತಕಾರಿ ಭವಿಷ್ಯ

      ಮಂಡ್ಯ, ಏ 18: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ, ಇಬ್ಬರು ಜೆಡಿಎಸ್ ಮುಖಂಡರ ನಡುವೆ ನಡೆದ ಆಡಿಯೋ ಸಂಭಾಷಣೆ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಯೊಂದು ಹೊರಬಿದ್ದಿದೆ.

      ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ 150 ಕೋಟಿ ಖರ್ಚು ಮಾಡಲಾಗುತ್ತಿದೆ ಎನ್ನುವ ವೈರಲ್ ಆಡಿಯೋಗೆ ಸಂಬಂಧಿಸಿದಂತೆ, ಚುನಾವಣಾ ಆಯೋಗದ ಅಧಿಕಾರಿಗಳು ಇಬ್ಬರು ಮುಖಂಡರನ್ನು ತೀವ್ರ ವಿಚಾರಣೆಗೊಳಪಡಿಸಿದ್ದರು.

      ವಿಚಾರಣೆಯ ವೇಳೆ, ಆಡಿಯೋದಲ್ಲಿರುವ ಧ್ವನಿ ನಮ್ಮದೇ, ನಮ್ಮ ಸಂಭಾಷಣೆಯ ವೇಳೆ ಇತರ ಮುಖಂಡರೂ ನಮ್ಮ ಜೊತೆಗಿದ್ದರು ಎಂದು ಇಬ್ಬರು ಮುಖಂಡರು ತಪ್ಪೊಪ್ಪಿಕೊಂಡಿದ್ದಾರೆಂದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

      ಮಂಡ್ಯದ ಹಾಲೀ ಜೆಡಿಎಸ್ ಸಂಸದ ಶಿವರಾಮೇಗೌಡರ ಪುತ್ರ ಚೇತನ್ ಗೌಡ ಮತ್ತು ಜೆಡಿಎಸ್ ಮುಖಂಡ ಪಿ ರಮೇಶ್ ನಡುವೆ ನಡೆದ ಮಾತುಕತೆ ಇದಾಗಿತ್ತು. ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ನೂರೈವತ್ತು ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಈ ಇಬ್ಬರು ನಡೆಸಿದ ದೂರವಾಣಿ ಮಾತುಕತೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

      ಆಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ನಿರ್ಧಾರ

      ಆಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ನಿರ್ಧಾರ

      ಸಾಮಾಜಿಕ ತಾಣದಲ್ಲಿ ಇದು ಭಾರೀ ಸುದ್ದಿಯಾದ ನಂತರ, ಆಯೋಗ ಚೇತನ್, ರಮೇಶ್ ಅವರನ್ನು ವಿಚಾರಣೆಗೊಳಪಡಿಸಿ, ಈಗ ಆಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ. ಇಬ್ಬರು ಮುಖಂಡರು ಆಡಿಯೋ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದರೂ, ವಿಧಿವಿಜ್ಞಾನ ಪ್ರಯೋಗಾಲಯದಿಂದ ಬರುವ ವರದಿ ಅಧಿಕೃತವಾಗಲಿರುವುದರಿಂದ, ಐಟಿ ಮತ್ತು ಚುನಾವಣಾ ಆಯೋಗ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.

      ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸುಮಾರು 150 ಕೋಟಿ ಖರ್ಚು

      ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸುಮಾರು 150 ಕೋಟಿ ಖರ್ಚು

      ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸುಮಾರು 150 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂಬ ಮಾಹಿತಿಯುಳ್ಳ ಸ್ಫೋಟಕ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಜೆಡಿಎಸ್ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಶಿವರಾಮೇಗೌಡ ಅವರ ಪುತ್ರ ಚೇತನ್ ಮತ್ತು ಜೆಡಿಎಸ್ ಕಾರ್ಯಕರ್ತ ಪಿ ರಮೇಶ್ ಎಂಬುವವರ ನಡುವಿನ ಸಂಭಾಷಣೆಯ ಆಡಿಯೋ ಇದು ಎನ್ನಲಾಗುತ್ತಿದ್ದು, ಈ ಆರೋಪವನ್ನು ಚೇತನ್ ಗೌಡ ತಳ್ಳಿಹಾಕಿದ್ದರು.

      ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರತಿ ಬೂತ್ ಗೆ 5 ಲಕ್ಷ ರೂ.ವರೆಗೆ ಖರ್ಚು

      ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರತಿ ಬೂತ್ ಗೆ 5 ಲಕ್ಷ ರೂ.ವರೆಗೆ ಖರ್ಚು

      ಆಡಿಯೋದಲ್ಲಿ, ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರತಿ ಬೂತ್ ಗೆ 5 ಲಕ್ಷ ರೂ.ವರೆಗೆ ಖರ್ಚು ಮಾಡಲು ಈ ಆಡಿಯೋದಲ್ಲಿ ಸಂಭಾಷಣೆ ನಡೆದಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ ಶಿವರಾಮೇಗೌಡರು, ಇದರಲ್ಲಿರುವುದು ನನ್ನ ಮಗನ ಧ್ವನಿಯಲ್ಲ, ಇದು ವಿರೋಧಿಗಳ ಕುತಂತ್ರ ಎಂದಿದ್ದರು.

      ಮಿಮಿಕ್ರಿ ಮಾಡಿಸಿ ಆಡಿಯೋ ಮಾಡಿಸೋದೇನು ಕಷ್ಟದ ಕೆಲಸವಲ್ಲ

      ಮಿಮಿಕ್ರಿ ಮಾಡಿಸಿ ಆಡಿಯೋ ಮಾಡಿಸೋದೇನು ಕಷ್ಟದ ಕೆಲಸವಲ್ಲ

      ಸುಮಲತಾ ಸಿನಿಮಾ ಕ್ಷೇತ್ರದಿಂದ ಬಂದವರು. ಅವರಿಗೆ ಮಿಮಿಕ್ರಿ ಮಾಡಿಸಿ ಆಡಿಯೋ ಮಾಡಿಸೋದೇನು ಕಷ್ಟದ ಕೆಲಸವಲ್ಲ. ಆದರೆ ನಾನು ನೇರವಾಗಿ ಯಾರ ಮೇಲೂ ಆರೋಪ ಮಾಡಲ್ಲ. ಚುನಾವಣೆಯೊಳಗೆ ಇನ್ನೂ ಎಷ್ಟು ಆಡಿಯೋ ಹೊರಬರಬೇಕೋ! ಈ ಆಅಡಿಯೋದಲ್ಲಿರುವುದು ಖಂಡಿತ ನನ್ನ ಮಗನ ಧ್ವನಿಯಲ್ಲ ಎಂದು ಶಿವರಾಮೇಗೌಡರು ಆರೋಪಿಸಿದ್ದರು.

      ನನ್ನನ್ನು ಸೋಲಿಸಲು ಸಾಕಷ್ಟು ತಂತ್ರಗಳು ನಡೆಯುತ್ತಿವೆ

      ನನ್ನನ್ನು ಸೋಲಿಸಲು ಸಾಕಷ್ಟು ತಂತ್ರಗಳು ನಡೆಯುತ್ತಿವೆ

      ಮಂಡ್ಯದಲ್ಲಿ ನನ್ನನ್ನು ಸೋಲಿಸಲು ಸಾಕಷ್ಟು ತಂತ್ರಗಳು ನಡೆಯುತ್ತಿವೆ. ಆಡಿಯೋದಲ್ಲಿ ಹೇಳಲಾದ ವಿಷಯದ ಬಗ್ಗೆ ನನಗೆ ಮೊದಲೇ ಸಂಶಯವಿತ್ತು. ಸಾಕಷ್ಟು ಅಕ್ರಮ ನಡೆಯುತ್ತಿದೆ ಎಂಬ ಅನುಮಾನವಿತ್ತು. ಆದ್ದರಿಂದ ನಾನು ಈ ಬಗ್ಗೆ ಚುನಾವಣಾ ಆಯೋಗದ ಬಳಿ ಪ್ರಸ್ತಾಪಿಸಿದ್ದೆ ಎಂದು ಸುಮಲತಾ ಪ್ರತಿಕ್ರಿಯೆ ನೀಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+