ಮಂಡ್ಯದ ತೋಟದ ಮನೆಯಲ್ಲಿ ಕಾರ್ಮಿಕರ ಜೋಡಿ ಕೊಲೆ
ಮಂಡ್ಯ, ಸೆಪ್ಟೆಂಬರ್ 4: ತೋಟದ ಮನೆಯಲ್ಲಿ ಮಲಗಿದ್ದ ಇಬ್ಬರ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ಮಂಡ್ಯದ ಯಲಿಯೂರು ಸಮೀಪದ ತೋಟದ ಮನೆಯಲ್ಲಿ ನಡೆದಿದೆ.
Recommended Video
BBMP Election ಮುಂದೂಡಲು ಪಾಲಿಕೆ ಪಾಲಿಟಿಕ್ಸ್!! | Oneindia Kannada
ಕೊಲೆಯಾದ ಇಬ್ಬರನ್ನು ರಾಮಮೂರ್ತಿ (46), ಬಸವರಾಜು (44) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಇಟ್ಟಿಗೆ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇವರು ಮಲಗಿದ್ದ ವೇಳೆ ರಾತ್ರಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕೊಲೆಗೆ ಕಾರಣ ಇನ್ನೂ ತಿಳಿದಯಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications