ಕೆ.ಆರ್.ಪೇಟೆ ತಹಶೀಲ್ದಾರ್ ನಾಪತ್ತೆ, ಅಪಹರಣ ಶಂಕೆ
ಮಂಡ್ಯ, ಆಗಸ್ಟ್ 03 : ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಹಶೀಲ್ದಾರ್ ಕೆ.ಮಹೇಶ್ ಚಂದ್ರ ನಾಪತ್ತೆಯಾಗಿದ್ದಾರೆ. ರಾಜ್ಯದ ಕಂದಾಯ ಇಲಾಖೆ ಹಿರಿಯ ಅಧಿಕಾರಿಯಾದ ಅವರು ಅಪಹರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಕೆ.ಮಹೇಶ್ ಚಂದ್ರ ಅವರ ಕಾರು ಮೈಸೂರಿನ ಬಳಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಕಾರನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಗುರುವಾರ ರಾತ್ರಿಯಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಕಾರಿನ ಬಳಿ ಅವರ ಒಂದು ಶೂ, ಶರ್ಟ್‌ನ ಗುಂಡಿಗಳು ಪತ್ತೆಯಾಗಿವೆ. ಬಲವಂತವಾಗಿ ಕೆ.ಮಹೇಶ್ ಚಂದ್ರ ಅವರನ್ನು ಯಾರೋ ಕರೆದುಕೊಂಡು ಹೋಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಒಂದು ವಾರದ ಹಿಂದೆ ಕೆ.ಮಹೇಶ್ ಚಂದ್ರ ಅವರು ಕೆ.ಆರ್.ನಗರದಿಂದ ಕೆ.ಆರ್.ಪೇಟೆಗೆ ವರ್ಗಾವಣೆಗೊಂಡಿದ್ದರು. ಗುರುವಾರ ಸಂಜೆ 7.30ಕ್ಕೆ ವಿಭಾಗಾಧಿಕಾರಿಯೊಂದಿಗೆ ಸಭೆ ಮುಗಿಸಿ, 8.45ಕ್ಕೆ ಮನೆಯತ್ತ ಹೊರಟಿದ್ದರು.
ತಾಯಿಗೆ ಅನಾರೋಗ್ಯವಿದೆ ಎಂದು ಶುಕ್ರವಾರ ಮತ್ತು ಶನಿವಾರ ಅವರು ರಜೆ ಪಡೆದಿದ್ದರು. ಆದರೆ, ಗುರುವಾರ ಪ್ರವಾಸಿ ಮಂದಿರದ ಹೊರಟ ಅವರು ಮನೆ ಸೇರಿಲ್ಲ. ಅವರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ.
ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೆ.ಮಹೇಶ್ ಚಂದ್ರ ಅವರನ್ನು ಯಾರೋ ಅಪಹರಣ ಮಾಡಿರಬಹುದು ಎಂದು ಶಂಕಿಸಿದ್ದು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications