ನಾನು ಯಾವ ಪಕ್ಷಕ್ಕೂ ಸೇರಲ್ಲ, ನನಗೆ ಯಾವ ಹೈಕಮಾಂಡ್ ಇಲ್ಲ ಎಂದ ಸುಮಲತಾ

Recommended Video

      Sumalatha Ambareesh not joining any party | Oneindia Kannada

      ಮಂಡ್ಯ, ಅಕ್ಟೋಬರ್ 11: ಸುಮಲತಾ ಅಂಬರೀಶ್ ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಸೇರುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಬೇಸರ ವ್ಯಕ್ತಪಡಿಸಿದ್ದರು. ಅದಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.

      'ನಾನು ಅವತ್ತೂ ಹೇಳಿದ್ದೇನೆ ಇಂದೂ ಹೇಳುತ್ತಿದ್ದೇನೆ ಯಾವುದೇ ಕಾರಣಕ್ಕೂ ಯಾವುದೇ ಪಕ್ಷವನ್ನೂ ಸೇರಲ್ಲ, ನನಗೆ ಯಾವ ಹೈಕಮಾಂಡ್ ಇಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಪಾಲ್ಗೊಂಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು.

      ಇದೀಗ ಎಲ್ಲರ ಕುತೂಹಲ, ಆತಂಕ, ಆಕ್ರೋಶಕ್ಕೆ ಕೊನೆ ದೊರೆತಿದೆ. ಅಷ್ಟೇ ಅಲ್ಲದೆ ಅಂದಿನ ಸಭೆಗೆ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಸಚ್ಚಿದಾನಂದ ಕೂಡ ಭಾಗಿಯಾಗಿದ್ದರು.

      ನಾನು ಈ ವಿಚಾರದಲ್ಲಿ ತಟಸ್ಥವಾಗಿಯೂ ಇರಬಹುದಲ್ಲ. ಹೀಗೆ ಮಾಡಿ, ಹಾಗೆ ಮಾಡಿ ಅಂತ ಹೇಳಲು ನನಗೆ ಹೈಕಮಾಂಡ್ ಇಲ್ಲ. ನನ್ನನ್ನು ಕೆಣಕಿದರೆ ಪಬ್ಲಿಸಿಟಿ ಸಿಗಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ.

      ನಾನು ಸ್ಪಷ್ಟವಾಗಿದ್ದೇನೆ, ಬೇರೆಯವರಿಂದ ಗೊಂದಲ

      ನಾನು ಸ್ಪಷ್ಟವಾಗಿದ್ದೇನೆ, ಬೇರೆಯವರಿಂದ ಗೊಂದಲ

      'ನಾನು ಮೊದನಿಂದದಲೂ ಸ್ಪಷ್ಟವಾಗಿದ್ದೇ‌ನೆ. ನನ್ನ ವಿಚಾರವಾಗಿ ಬೇರೆಯವರಿಂದ ಗೊಂದಲ ಮೂಡುತ್ತಿದೆ. ನನ್ನ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ ಎನ್ನುವುದು ಗೊತ್ತಿದೆ. ಬೇರೆಯವರ ನಿರ್ಧಾರಕ್ಕೆ ಉತ್ತರ ಕೊಡುವ ಅಗತ್ಯವೂ ಇಲ್ಲ. ಹೀಗಾದಗ ವದಂತಿ ಹರಡುವುದು ಸಾಮಾನ್ಯ' ಎಂದರು.

      ಬಿಜೆಪಿ ಕಚೇರಿಗೆ ತೆರಳಿದ್ದಕ್ಕೆ ಸ್ಪಷ್ಟನೆ

      ಬಿಜೆಪಿ ಕಚೇರಿಗೆ ತೆರಳಿದ್ದಕ್ಕೆ ಸ್ಪಷ್ಟನೆ

      ಬಿಜೆಪಿ ಕಚೇರಿಗೆ ತೆರಳಿದ್ದಕ್ಕೆ ಸ್ಪಷ್ಟನೆ ನೀಡಿದ ಸುಮಲತಾ, 'ಬಿಜೆಪಿಯವರು ಆಹ್ವಾನ ನೀಡಿದ್ದರು ಹೋಗಿದ್ದೆ. ಇಂದು ಕಾಂಗ್ರೆಸ್​​ನವರು ಕರೆದಿದ್ದರು ಬಂದಿದ್ದೇನೆ. ನಾನು ಸ್ವತಂತ್ರ ಅಭ್ಯರ್ಥಿ. ನನಗೆ ಯಾರೂ ಹೇಳಿಕೊಡುವ ಅವಶ್ಯಕತೆ ಇಲ್ಲ. ಅಲ್ಲಿಗೆ ಹೋಗಬೇಡಿ, ಇಲ್ಲಿಗೆ ಹೋಗಬೇಡಿ ಎಂದು ನನಗೆ ಹೇಳಬೇಡಿ. ನನಗೆ ಎಲ್ಲರೂ ಸಹಾಯ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರೂ ಮತ ಹಾಕಿದ್ದಾರೆ. ನಾಳೆ ಅವರೂ ಬನ್ನಿ ಎಂದು ಹೇಳಬಹುದು. ಆಗ ನಾನು ಹೋಗುತ್ತೇನೆ,' ಎಂದು ನಿಲುವನ್ನು ಸ್ಪಷ್ಟಪಡಿಸಿದರು.

      ಮತದಾರರನ್ನು ಕೇಳಿಯೇ ಮುಂದಿನ ನಿರ್ಧಾರ

      ಮತದಾರರನ್ನು ಕೇಳಿಯೇ ಮುಂದಿನ ನಿರ್ಧಾರ

      ಮುಂದೆ ಏನೇ ನಿರ್ಧಾರ ಮಾಡಿದರು ಸುಮಲತಾ ಮತದಾರರನ್ನು ಕೇಳಿ ನಿರ್ಧಾರ ಮಾಡುತ್ತಾರಂತೆ. "ನನ್ನ ನಿರ್ಧಾರವನ್ನು ಜನರೇ ತೀರ್ಮಾನ ಮಾಡುತ್ತಾರೆ. ನನಗೆ ಪ್ರಧಾನಿ ನರೇಂದ್ರ ಮೋದಿ ಆಗಲಿ ಗೃಹ ಸಚಿವ ಅಮಿತ್ ಶಾ ಯಾವುದೇ ಕಂಡಿಶನ್ ಹಾಕಿಲ್ಲ. ನಿಮ್ಮ ಕೆಲಸವಿದ್ದರೆ ಮಾಡಿಕೊಡೋಣ ಎಂದಿದ್ದಾರೆ ಅಷ್ಟೆ. ಅಂಬರೀಶ್ ಅವರೇ ನನಗೆ ಸ್ಫೂರ್ತಿ. ಅವರಂತೆಯೇ ಪಕ್ಷಾತೀತವಾಗಿ ಕೆಲಸ ಮಾಡುವೆ," ಎಂದು ಹೇಳುವು ಮೂಲಕ ಬಿಜೆಪಿ ಸೇರುವುದಿಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದರು.

      ಕೆಆರ್ ಪೇಟೆ ಉಪ ಚುನಾವಣೆ ಯಾರಿಗೆ ಮತ

      ಕೆಆರ್ ಪೇಟೆ ಉಪ ಚುನಾವಣೆ ಯಾರಿಗೆ ಮತ

      ಕೆಆರ್​ ಪೇಟೆ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಈ ಉಪ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡುತ್ತೀರಿ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, ಆದರೆ ನನ್ನಿಂದ ಇಂಥ ಪ್ರಶ್ನೆಗಳಿಗೆ ಯಾವುದೇ ಉತ್ತರ ಸಿಗುವುದಿಲ್ಲ ಎಂದು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+