• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರವಾಹ ಪೀಡಿತರ ನೆರವಿಗೆ ಧಾವಿಸಿದ ಸುಮಲತಾ: ಇಂದು ಮಂಡ್ಯದಲ್ಲಿ ಸಭೆ

|
   Karnataka Flood: ಪ್ರವಾಹ ಪೀಡಿತರ ನೆರವಿಗೆ ಧಾವಿಸಿದ ಸುಮಲತಾ

   ಮಂಡ್ಯ, ಆಗಸ್ಟ್ 14: ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅವರು ತಡವಾಗಿಯಾದರೂ ಪ್ರವಾಹ ಪೀಡಿತರ ನೆರವಿಗೆ ಧಾವಿಸಿದ್ದಾರೆ. ನೆರೆ ಪೀಡಿತ ಮಂಡ್ಯದ ಭಾಗಗಳಿಗೆ ಸುಮಲತಾ ಅವರು ಇಂದು ಭೇಟಿ ನೀಡಲಿದ್ದಾರೆ.

   ಕಾವೇರಿ ತೀರದ ಮಂಡ್ಯದ ಹಲವು ಭಾಗಗಳು ನೆರೆಯಿಂದ ತೊಂದರೆಗೆ ಒಳಗಾಗಿದ್ದು, ನಿಮಿಷಾಂಬಾ ದೇವಾಲಯ, ಶ್ರೀರಂಗಪಟ್ಟಣ ಸಂತೆಮಾಳ, ದೊಡ್ಡಪಾಳ್ಯ, ಎಣ್ಣೆಕೊಪ್ಪಲು ಮುಂತಾದ ಗ್ರಾಮಗಳು ನೆರೆಯಿಂದ ತೊಂದರೆಗೆ ಸಿಲುಕಿವೆ. ಬೆಳೆ ನಾಶ, ಜಾನುವಾರು ಹಾನಿಗಳನ್ನು ಜನರು ಅನುಭವಿಸಿದ್ದಾರೆ.

   ಲೋಕಸಭೆಯಲ್ಲಿ ಸುಮಲತಾ ಮೊದಲ ಭಾಷಣ: ಏನೇನು ಹೇಳಿದರು?

   ಈ ಎಲ್ಲ ಗ್ರಾಮಗಳಿಗೆ ಸುಮಲತಾ ಅವರು ಭೇಟಿ ಮಾಡಲಿದ್ದು, ಸ್ಥಳೀಯರೊಂದಿಗೆ ಸುಮಲತಾ ಅವರು ಸಭೆ ನಡೆಸಲಿದ್ದಾರೆ. ಸ್ಥಳೀಯರೊಂದಿಗೆ ಸಭೆ ಬಳಿಕ, ಅಧಿಕಾರಿಗಳೊಂದಿಗೂ ಸುಮಲತಾ ಅವರು ಸಭೆ ನಡೆಸಲಿದ್ದಾರೆ. ಜೊತೆಗೆ ಇಂದೇ ನೆರೆ ಸಂತ್ರಸ್ಥರಿಗೆ ಪರಿಹಾರ ಘೋಷಿಸುವ ಸಾಧ್ಯತೆಯೂ ಇದೆ.

   ಕಾವೇರಿ ನೀರು: ಸುಮಲತಾ ಮೇಲೆ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯದ ಬಾಣ

   ಮಂಡ್ಯ ಕ್ಷೇತ್ರ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆದ್ದ ನಂತರ ಸುಮಲತಾ ಅವರು ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಆರೋಪಗಳಿದ್ದವು.

   English summary
   MP Sumalatha Abareesh is visiting flood-affected places of Mandya on Wednesday. She will have a meeting with local people and officials.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X