ಸುಮಲತಾಗೆ ಬೆಂಬಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಉಚ್ಛಾಟನೆ
Recommended Video

ಮಂಡ್ಯ, ಏಪ್ರಿಲ್ 10: ಮಂಡ್ಯ ಲೋಸಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲಿಸಿದ ಕಾರಣ ಏಳು ಕಾಂಗ್ರೆಸ್ ಮುಖಂಡರನ್ನು ಉಚ್ಛಾಟನೆ ಮಾಡಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸುಮಲತಾ ಅವರನ್ನು ಬೆಂಬಲಿಸಿದರೆ ಉಚ್ಛಾಟನೆಯ ಶಿಕ್ಷೆ ನೀಡಲಾಗುವುದು ಎಂದು ಮೊದಲಿನಿಂದಲೂ ಎಚ್ಚರಿಕೆ ನೀಡಲಾಗುತ್ತಿತ್ತು, ಇಂದು ಅಂತಿಮವಾಗಿ ಉಚ್ಛಾಟನೆ ಮಾಡಲಾಗಿದೆ.
ಹೆಚ್.ಅಪ್ಪಾಜಪ್ಪ, ಮಂಡ್ಯ ಗ್ರಾಮಾಂತರ, ಎ.ಎಸ್.ರಾಜೀವ್, ಭಾರತೀ ನಗರ, ಪುಟ್ಟರಾಮು, ಮಳವಳ್ಳಿ ಗ್ರಾಮಾಂತರ, ಕೆ.ಜೆ.ದೇವರಾಜ್, ಮಳವಳ್ಳಿ ನಗರ, ಎಂ.ಪ್ರಸನ್ನ, ನಾಗಮಂಗಲ ನಗರ, ಕೆ.ಆರ್.ರವೀಂದ್ರ ಬಾಬು, ಕೆ.ಆರ್.ಪೇಟೆ, ಎಸ್.ಬಿ.ಪ್ರಕಾಶ್, ಮೇಲುಕೋಟೆ ಉಚ್ಛಾಟನೆ ಮಾಡಲಾಗಿರುವ ಏಳೂ ಮಂದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಇವರೆಲ್ಲರೂ ಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ. ಅದೇ ಆರೋಪದ ಮೇಲೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ವೈ.ಘೋರ್ಪಡೆ ಅವರು ಉಚ್ಛಾಟನೆ ಆದೇಶ ಹೊರಡಿಸಿದ್ದಾರೆ.
ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿಯು ಬೆಂಬಲ ಸೂಚಿಸಿದ್ದು, ಹಲವು ಕಾಂಗ್ರೆಸ್ ಸ್ಥಳೀಯ ಮುಖಂಡರು ಸಹ ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ. ಇದು ಕುಮಾರಸ್ವಾಮಿ ಹಾಗೂ ಕೆಪಿಸಿಸಿಗೆ ಮುಜುಗರ ತಂದಿದೆ.











Click it and Unblock the Notifications