India
  • search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ಯಾಟೇ ಹುಡ್ಗಿ ಹಳ್ಳಿ ಲೈಫ್ ಶೋನ ಪೂರ್ಣಿಮಾಗೆ ಹಳ್ಳಿ ಆಸ್ಪತ್ರೆಯಲ್ಲಿಯೇ ಹೆರಿಗೆ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜೂ26: ಪ್ಯಾಟೇ ಹುಡ್ಗಿ ಹಳ್ಳಿಗೆ ಬಂದು ಹೆರಿಗೆ ಮಾಡಿಸಿಕೊಂಡ್ರು. ಇದೇನೆಂದು ಆಚ್ಚರಿಪಡುತ್ತೀರಾ, ಈ ಸ್ಟೋರಿ ಓದಿ ನಿಮಗೇ ತಿಳಿಯುತ್ತೆ. ಕಳೆದ ಕೆಲ ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಂಡ್ಯದ ಹುಡುಗಿ ಪೂರ್ಣಿಮಾ ಅವರೇ ಹಳ್ಳಿಗೆ ಬಂದು ಹೆರಿಗೆ ಮಾಡಿಸಿಕೊಂಡ ನಟಿಯಾಗಿದ್ದಾರೆ.

ಪ್ಯಾಟೇ ಹುಡ್ಗಿ ಹಳ್ಳಿ ಲೈಫ್ ಎಂಬ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಮಂಡ್ಯದ ಹುಡುಗಿ ಪೂರ್ಣಿಮಾ ಅವರು ತಮ್ಮದೇ ಆದ ಒಂದಷ್ಟು ಪ್ಯಾನ್ ಪಾಲೋವರ್ಸ್ ಸಹ ಹೊಂದಿದ್ದಾರೆ. ರಿಯಾಲಿಟಿ ಶೋ ಎಲ್ಲರ ಮನೆ ಮಾತಾಗಿತ್ತು. ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮುಗಿದ ನಂತರ ದಾರಾವಾಹಿ ಹಾಗೂ ಸಿನಿಮಾಗಳಲ್ಲೂ ನಟಿಸಿದ್ದರು.

ಬೇಬಿ ಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಆವರಣದಲ್ಲಿ ಚಿರತೆ ಪ್ರತ್ಯಕ್ಷಬೇಬಿ ಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಆವರಣದಲ್ಲಿ ಚಿರತೆ ಪ್ರತ್ಯಕ್ಷ

ತಾಯಿ -ಮಗುವಿಗೆ ತೊಂದರೆ ಅಂತ ಹೇಳಿದ ಬೆಂಗಳೂರು ವೈದ್ಯರು

ಬೆಂಗಳೂರಿನ ನಿವಾಸಿಯೇ ಆಗಿದ್ದ ಪೂರ್ಣಿಮಾ ಇತ್ತೀಚೆಗೆ ಗರ್ಭಿಣಿಯಾಗಿದ್ದರು. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಹೆರಿಗೆ ದಿನ ಹತ್ತಿರವಾಗುತ್ತಿದ್ದಂತೆ ವೈದ್ಯರು ಪ್ಲಸಂಟಾ ಕೆಳಗೆ ಬಂದಿದೆ. ಹೀಗಾಗಿ ಹೆರಿಗೆ ಮಾಡಿದರೆ ತಾಯಿ ಮತ್ತು ಮಗುವಿಗೆ ತೊಂದರೆಯಾಗಬಹುದು ಎಂದು ಎಚ್ಚರಿಕೆ ನೀಡಿದ್ದರು. ಇದರಿಂದ ಗಾಬರಿಗೊಂಡ ಪೂರ್ಣಿಮಾ ಇದರಿಂದ ಆತಂಕಗೊಂಡಿದ್ದ ಪೂರ್ಣಿಮಾ ಬೆಂಗಳೂರಿನ ಅನೇಕ ಆಸ್ಪತ್ರೆಗಳಿಗೆ ಹೋಗಿ ಪ್ರಸೂತಿ ತಜ್ಞರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಂಡಿದ್ದರು. ಆದರೆ ಎಲ್ಲಾ ವೈದ್ಯರು ಪ್ಲಸಂಟಾ ಕೆಳಗೆ ಬಂದಿರುವುದರಿಂದ ಹೆರಿಗೆ ವೇಳೆ ಸಮಸ್ಯೆಯಾಗಲಿದೆ ಎಂದು ಸಲಹೆ ನೀಡಿದ್ದರು.

ನಟಿಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ

ಪ್ಯಾಟೆ ವೈದ್ಯರ ಮಾತಿಗೆ ಹೆದರಿದ ಪೂರ್ಣಿಮಾ ಮಂಡ್ಯ ತಾಲೂಕು ಕೀಲಾರ ಗ್ರಾಮದ ತಮ್ಮ ಹತ್ತಿರದ ಸಂಬಂಧಿಯೊಬ್ಬರ ಬಳಿ ಬೆಂಗಳೂರಿನಲ್ಲಿ ವೈದ್ಯರು ಹೇಳಿದ್ದನ್ನು ತಿಳಿಸಿ ಅಳಲು ತೋಡಿಕೊಂಡರು. ಕೀಲಾರ ಗ್ರಾಮದಲ್ಲೇ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಅಲ್ಲಿ ವೈದ್ಯರು ಚೆನ್ನಾಗಿ ನೋಡುತ್ತಾರೆ. ಎಲ್ಲ ರೀತಿಯ ಸೌಕಯಗಳೂ ಇವೆ ಎಂದು ಸಂಬಂಧಿಕರು ಪೂರ್ಣಿಮಾಗೆ ತಿಳಿಸಿದರು.

ಅಪರಿಚಿತ ವಾಹನ ಡಿಕ್ಕಿ-ಹೆದ್ದಾರಿ ದಾಟುತ್ತಿದ್ದ ಜಿಂಕೆ ಸಾವುಅಪರಿಚಿತ ವಾಹನ ಡಿಕ್ಕಿ-ಹೆದ್ದಾರಿ ದಾಟುತ್ತಿದ್ದ ಜಿಂಕೆ ಸಾವು

ಅವರ ಮಾತಿನಂತೆ ಬೆಂಗಳೂರಿನಿಂದ ಪೂರ್ಣಿಮಾ ತಾಲೂಕಿನ ಕೀಲಾರ ಗ್ರಾಮಕ್ಕೆ ಆಗಮಿಸಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡರು. ವೈದ್ಯರು ನಟಿ ಪೂರ್ಣಿಮಾಗೆ ಧೈರ್ಯ ಹೇಳಿ, ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿದ್ದಾರೆ. ಸದ್ಯ ನಟಿ ಪೂರ್ಣಿಮಾ ಅವರಿಗೆ ಗಂಡು ಮಗು ಜನನವಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇದಾದ ಬಳಿಕ ಹಳ್ಳಿ ವೈದ್ಯರ ಬಗ್ಗೆ ನಟಿ ಪೂರ್ಣಿಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

pyate hudgir halli life fame actress blessed with a baby boy at mandya government hospital

ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸಿಗದ ಚಿಕಿತ್ಸೆ ಹಳ್ಳಿಯಲ್ಲೇ ಸಿಗುತ್ತೆ!

ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸಿಗದ ಚಿಕಿತ್ಸೆ ಹಳ್ಳಿಯಲ್ಲೇ ಸಿಗುತ್ತೆ. ಬೆಂಗಳೂರಿನಲ್ಲಿ ಎಲ್ಲಾ ಕಡೆ ಸಮಸ್ಯೆ ಇದೆ ಅಂತಲೇ ಹೇಳಿದ್ದರು. ಆದರೆ ಕೀಲಾರದಂತಹ ಸಣ್ಣ ಹಳ್ಳಿಯಲ್ಲಿ ವೈದ್ಯರು ಯಶಸ್ವಿಯಾಗಿ ಶಸ ಚಿಕಿತ್ಸೆ ಮಾಡಿ ನನ್ನ ಮಗು ಮತ್ತು ನನ್ನನ್ನು ಜೋಪಾನ ಮಾಡಿದ್ದಾರೆ. ಅದೂ ಅಲ್ಲದೆ ಕೀಲಾರ ಪ್ರಾಥಮಿಕ ಆರೋಗ್ಯ ಕೇಂದ್ರವೂ ತುಂಬಾ ಚೆನ್ನಾಗಿದೆ ಸ್ವಚ್ಛವಾಗಿದೆ ಎಂದು ಪೂರ್ಣಿಮಾ ಮೆಚ್ಚುಗೆಯ ಮಾತುಗಳನ್ನಾಡಿದರು.

"ಮಂಡ್ಯ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಒಳ್ಳೆಯ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದಾಗಿ ರಾಮನಗರ, ಚಾಮರಾಜನಗರ, ತುಮಕೂರು ಹಾಗೂ ಹಾಸನ ಜಿಲ್ಲೆಗಳಿಂದಲೂ ಹೆರಿಗಾಗಿ ಮಂಡ್ಯ ಜಿಲ್ಲೆಗೆ ಆಗಮಿಸುತ್ತಾರೆ," ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಎನ್.ಧನಂಜಯ ತಿಳಿಸಿದ್ದಾರೆ.

English summary
pyate hudgir halli life fame actress purnima blessed with a baby boy at government hospital mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X