ವಿಡಿಯೋ: ದೇವೇ ಗೌಡ್ರಿಗೆ 'ಮೋದಿ ಮೋದಿ' ಘೋಷಣೆಯ ಸ್ವಾಗತ!
Recommended Video
ಮಂಡ್ಯ, ಏಪ್ರಿಲ್ 25: ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿಗೆ ದೇವೇಗೌಡರು ತೆರಳುತ್ತಿದ್ದ ಸಂದರ್ಭದಲ್ಲಿ, ಮಠದ ಆವರಣದಲ್ಲೇ ಅವರಿಗೆ 'ಮೋದಿ ಮೋದಿ' ಎಂಬ ಘೋಷಣೆಯೊಂದಿಗೆ ಸ್ವಾಗತ ಕೋರಲಾಗಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೇವೇಗೌಡರಿದ್ದ ಕಾರು ಮತ್ತು ಅವರ ಬೆಂಗಾವಲು ವಾಹನಗಳು ತೆರಳುತ್ತಿದ್ದಂತೆಯೇ ರಸ್ತೆಯ ಪಕ್ಕ ನೆರೆದಿದ್ದ ಜನರು 'ಮೋದಿ ಮೋದಿ' ಎಂದು ಘೋಷಣೆ ಕೂಗುವ ಮೂಲಕ ದೇವೇಗೌಡರಿಗೆ ಇರಿಸುಮುರಿಸುಂಟಾಗುವಂತೆ ಮಾಡಿದ್ದಾರೆ. ಮಾತ್ರವಲ್ಲ, 'ನಿಖಿಲ್ ಎಲ್ಲಿದೀಯಪ್ಪ?' ಎಂದೂ ಘೋಷಣೆ ಕೂಗಿದ್ದಾರೆ. ಈ ವಿಡಿಯೋವನ್ನು ಬಿಜೆಪಿಯ ಬಿ ವೈ ವಿಜಯೇಂದ್ರ ಅವರೂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದರು.
Warm welcome to H D Devegowda by the students of the Adichunchanagiri mutt when he has visited the Mutt.
— Chowkidar Vijayendra Yeddyurappa (@BYVijayendra) April 24, 2019
Don’t you still believe in the mood of the people?@BJP4India @BJP4Karnataka #BharatBoleNaMoNaMo #PhirEkBaarModiSarkaar #ModiHiAayega pic.twitter.com/RWL6zbbaBI
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಆದರೆ ಈ ವಿಡಿಯೋ ಎಷ್ಟರ ಮಟ್ಟಿಗೆ ನಿಖರವಾದುದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.
ಜೆಡಿಎಎಸ್ ಐಟಿ ವಿಂಗ್ ಸ್ಪಷ್ಟನೆ
ಆದರೆ ಈ ವಿಡಿಯೋ ಚಿತ್ರೀಕರಿಸಿದ್ದು ಆದಿಚುಂಚನಗಿರಿಯಲ್ಲಲ್ಲ, ಬದಲಾಗಿ ಚಿಕ್ಕಮಗಳೂರಿನಲ್ಲಿ. ಮಾಧ್ಯಮಗಳಲ್ಲಿ ಈ ವಿಡಿಯೋವನ್ನು 'ಆದಿಚುಂಚನಗಿರಿ' ಎಂದು ತೋರಿಸಲಾಗುತ್ತಿದೆ. ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಸರ್ವ ಭಕ್ತರನ್ನು ಪ್ರೀತಿಯಿಂದ ಕಾಣುವ ಗೌರವಿಸುವ ಸಂಸ್ಥಾನ ಶ್ರೀ ಕ್ಷೇತ್ರದಲ್ಲಿನ ಭಕ್ತರು ಹಾಗು ವಿದ್ಯಾರ್ಥಿಗಳು ಎಂದಿಗೂ ಈ ಪರಿಯ ವಿಕೃತಿ ಮೆರೆಯುವುದಿಲ್ಲ ಎಂದು ಜೆಡಿಎಸ್ ಐಟಿ ವಿಂಗ್ ಸ್ಪಷ್ಟನೆ ನೀಡಿದೆ.

ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನದ ಮುನ್ನಾದಿನ(ಏಪ್ರಿಲ್ 22) ಬೆಂಗಳೂರಿನ ಯಶವಂತಪುರ ರೈಲ್ವೇ ನಿಲ್ದಾಣದಲ್ಲೂ ಜನರು 'ಮೋದಿ ಮೋದಿ' ಎಂದು ಘೋಷಣೆ ಕೂಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications