ಮಂಡ್ಯದ ಮಹಾಕವಿಯನ್ನು ಮರೆತೇ ಬಿಟ್ರಾ ಜನ? ಯಾರು ಈ ಕವಿ?
ಮಂಡ್ಯ, ಮೇ 08: ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಾತ್ ಕನ್ನಡದ ನುಡಿಹಬ್ಬ ಮಂಡ್ಯದಲ್ಲಿ ನಡೆಯಲಿದೆ. ಈ ಸಂದರ್ಭ 17ನೇ ಶತಮಾನದಲ್ಲಿ ಜಿಲ್ಲೆಯಲ್ಲಿ ಹುಟ್ಟಿ ಸುಮಾರು 16 ಕೃತಿಗಳನ್ನು ರಚಿಸಿ ಮಹಾಕವಿ ಎನಿಸಿಕೊಂಡಿದ್ದ ಷಡಕ್ಷರದೇವ (ಷಡಕ್ಷರ)ನ ಬಗ್ಗೆ ಗಮನಹರಿಸಿ ಆತನ ಹುಟ್ಟೂರನ್ನು ಅಭಿವೃದ್ಧಿಗೊಳಿಸಿ ಆತನನ್ನು ಮುಂದಿನ ತಲೆಮಾರು ನೆನಪಿಟ್ಟುಕೊಳ್ಳುವಂತೆ ಮಾಡಿ ಗೌರವ ಸಲ್ಲಿಸಬೇಕಾಗಿದೆ.
ಇವತ್ತು ಹರಿಹರ, ರಾಘವಾಂಕ ಕವಿಗಳಂತೆಯೇ ಮಹಾಕವಿ ಷಡಕ್ಷರದೇವನು ಕಾವ್ಯ ಕೃತಿಗಳ ಮೂಲಕ ರಾಜಮಹಾರಾಜರ ಗಮನಸೆಳೆದಿದ್ದಲ್ಲದೆ, ರಾಜ ಕವಿಯಾಗಿ ಬದುಕಿ ಬಾಳಿದವರು. ಇಂತಹ ಕವಿ ಹುಟ್ಟಿದ ಊರನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಮೂಲಕ ಎಲ್ಲರೂ ಅವರನ್ನು ನೆನಪಿಸಿಕೊಳ್ಳುವಂತೆ ಮಾಡಬೇಕಾಗಿದೆ. ಇನ್ನು ಷಡಕ್ಷರದೇವ ಕವಿ ಬಗ್ಗೆ ಹೇಳಬೇಕೆಂದರೆ ಈತ ಮಳವಳ್ಳಿ ತಾಲೂಕಿನ ಧನಗೂರು ಗ್ರಾಮದವನು ಎನ್ನಲಾಗಿದ್ದು, ಈಗ ಜನ್ಮ ಸ್ಥಳ ನಿರ್ಲಕ್ಷ್ಯಕೊಳ್ಳಗಾಗಿದ್ದು ಕವಿಯನ್ನು ಮರೆತಂತೆ ಭಾಸವಾಗುತ್ತಿದೆ.

ಧನಗೂರು ಗ್ರಾಮದಲ್ಲಿ ಜನಿಸಿದ ಷಡಕ್ಷರ ಕವಿ ಪಾಂಡಿತ್ಯ ಹೊಂದಿದ್ದು, ಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದರಲ್ಲದೆ, ಇಲ್ಲಿದ್ದ ವೀರಶೈವ ಮಠಕ್ಕೆ ಮಠಾಧಿಪತಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಜತೆಗೆ ಇಲ್ಲಿ ಜನಿಸಿದ ಅವರು ಕಾಲಕ್ರಮೇಣ ಚಾಮರಾಜನಗರಕ್ಕೆ ತೆರಳಿದ್ದರು. ಅಲ್ಲಿನ ಮಠದಲ್ಲಿದ್ದ ಮಹಾಕವಿ ಷಡಕ್ಷರದೇವ ಅವರು ಶಿಷ್ಯರಿಗೆ ಪಾಠಗಳನ್ನು ಬೋಧಿಸುತ್ತಿದ್ದರಲ್ಲದೆ, ಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ಇವರ ಕಾಲಾವಧಿಯಲ್ಲಿ ಸುಮಾರು 16 ಕೃತಿಗಳನ್ನು ರಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಲ್ಲು ಮಂಟಪವನ್ನು ಕೆಡವಿದ ಪಾಳೇಗಾರ
ಇವರ ರಚನೆಯ ಕೃತಿಗಳ ಪೈಕಿ ರಾಜಶೇಖರ ವಿಲಾಸಂ, ಶಬರ ಶಂಕರ ವಿಲಾಸಂ, ಋಷಬೇಂದ್ರ ವಿಜಯಂ, ಕರ್ಣರಸಾಯನ, ಶಿವಾದಿತ್ಯ ರತ್ನಾವಳಿ, ಭಕ್ತಾದಿತ್ಯ ರತ್ನಾವಳಿ ಪ್ರಮುಖವಾಗಿವೆ. ಇವರ ಕಾಲದಲ್ಲಿ ಧನಗೂರು ಸಮೃದ್ಧವಾಗಿತ್ತು. ಇಲ್ಲಿ ಕಾಡು, ಕಣಿವೆ, ಕೆರೆ-ಕಟ್ಟೆಗಳು ಶ್ರೀಗೌರೀಶ್ವರ, ವೀರಭದ್ರೇಶ್ವರ ದೇವಾಲಯ, ಗವಿಮಠ ಹೀಗೆ ನಿಸರ್ಗ ಸಂಪತ್ತಿನಿಂದ ತುಂಬಿತ್ತು ಎನ್ನುವುದು ಅವರ ಕೃತಿಗಳಲ್ಲಿ ಗೊತ್ತಾಗುತ್ತದೆ.

ಇಲ್ಲಿನ ವಾತಾವರಣದಲ್ಲಿ ಅವರು ಓಡಾಡುತ್ತಿದ್ದರಲ್ಲದೆ, ಕಲ್ಲುಮಂಟಪದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಆ ಕಲ್ಲು ಮಂಟಪವನ್ನು ನಂತರದ ಕಾಲಾವಧಿಯಲ್ಲಿ ಅಂದಿನ ಪಾಳೇಗಾರ ಫಿರಂಗಿ ಬಳಸಿ ಕೆಡವಿ ಹಾಕಿದ ಎಂದು ಹೇಳಲಾಗಿದ್ದು ಅಳಿದುಳಿದ ಭಾಗ ಹಾಗೆಯೇ ಇದೆ.
ಮಂಡ್ಯದಲ್ಲಿ ಜನ್ಮ ಚಾಮರಾಜನಗರದಲ್ಲಿ ಲಿಂಗೈಕ್ಯ
ಇಲ್ಲಿನ ಮಠವು ಗುರುಪರಂಪರೆಯ ಹಾದಿಯಲ್ಲಿ ಸಾಗಿಬಂದಿತ್ತು ಎಂದು ಹೇಳಲಾಗಿದ್ದು, ಅದರಂತೆ ಸುಮಾರು 16 ಗುರುಗಳ ಪೈಕಿ 11ಗುರುಗಳ ಸಮಾಧಿ ಇಲ್ಲಿ ಪತ್ತೆಯಾಗಿವೆ. ಈ ಸಮಾಧಿಗಳಿಗೆ ಈಗಲೂ ಪೂಜಾ ಕೈಂಕರ್ಯಗಳನ್ನು ನಡೆಸುತ್ತಾ ಬರಲಾಗುತ್ತಿದೆ. ಮಹಾಕವಿಯನ್ನು ಹೊಂದಿದ್ದ ಧನಗೂರನ್ನು ಇವತ್ತಿಗೂ ಷಡಕ್ಷರ ಕವಿಯ ಊರು ಎಂದೇ ಪರಿಚಯಿಸಲಾಗುತ್ತಿದೆ.
ಷಡಕ್ಷರ ಕವಿಯು ತಮ್ಮದೇ ವಿದ್ವತ್ ನಿಂದ ಸುತ್ತಮುತ್ತಲ ಊರುಗಳಲ್ಲಿ ಖ್ಯಾತಿ ಪಡೆದಿದ್ದರು. ಇವರ ಬಗ್ಗೆ ತಿಳಿದ ಅಂದಿನ ರಾಜರು ಅವರನ್ನು ಚಾಮರಾಜನಗರ ಜಿಲ್ಲೆಯ ಯಳಂದೂರಿಗೆ ಕರೆಯಿಸಿಕೊಂಡು ರಾಜಗುರುವನ್ನಾಗಿ ನೇಮಿಸಿ ರಾಜಾಶ್ರಯ ನೀಡಿದರು. ಹೀಗಾಗಿ ಅಲ್ಲಿಯೇ ನೆಲೆಸಿದ ಅವರು ಯಳಂದೂರಿನಲ್ಲಿರುವ ಮಠದಲ್ಲಿ ಲಿಂಗೈಕ್ಯರಾದರು. ಅವರ ಸ್ಮಾರಕವು ಇವತ್ತಿಗೂ ಯಳಂದೂರಿನ ರಾಷ್ಟ್ರೀಯ ಹೆದ್ದಾರಿ 209ರ ಪಕ್ಕದಲ್ಲಿಯೇ ಇರುವುದನ್ನು ಕಾಣಬಹುದಾಗಿದೆ.

ನಿರ್ಲಕ್ಷ್ಯಕ್ಕೊಳಗಾದ ಕವಿಯ ಜನ್ಮಸ್ಥಳ
ಷಡಕ್ಷರ ರಚನೆಯ ಗ್ರಂಥಗಳನ್ನು ಹೊರ ತರಲು ಹಾಗೂ ಧನಗೂರಿನಲ್ಲಿ ಅವರ ಸ್ಮಾರಕ ನಿರ್ಮಿಸಲು ಯಳಂದೂರಿನ ದುಗಟ್ಟಿ ವೀರಭದ್ರಪ್ಪರವ ಶ್ರಮ ಶ್ಲಾಘನೀಯವಾಗಿದೆ. ಕವಿ ತಾಳೆಗರಿಯಲ್ಲಿ ಬರೆದ ರಾಜಶೇಖರ ವಿಲಾಸಂ ಕೃತಿಯನ್ನಯ ಧರ್ಮಸ್ಥಳದ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿಡುವ ಕೆಲಸವನ್ನು ಮಾಡಲಾಗಿದೆ. ಒಂದು ವೇಳೆ ಷಡಕ್ಷರ ಕವಿಯ ಜನ್ಮ ಸ್ಥಳವನ್ನು ಅಭಿವೃದ್ಧಿಗೊಳಿಸಿದ್ದರೆ ಅದು ಇವತ್ತು ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರುತ್ತಿತ್ತೇನೋ? ಆದರೆ ಆ ಕೆಲಸ ಆಗಲೇ ಇಲ್ಲ.
ಒಂದು ಕಾಲದಲ್ಲಿ ಕನ್ನಡದ ಸಾಹಿತ್ಯವನ್ನು ಶ್ರೀಮಂತವಾಗಿಸಿದ ಕವಿ ಷಡಕ್ಷರ ಜನ್ಮ ಪಡೆದು, ಬೆಳೆದು ಬದುಕು ಕಟ್ಟಿಕೊಂಡಿದ್ದ ಊರು, ಅವರು ವಾಸವಿದ್ದ ಸ್ಥಳ ಎಲ್ಲವೂ ಕಾಲಕ್ರಮೇಣ ಅವನತಿಯನ್ನು ಕಂಡಿದೆ. ಷಡಕ್ಷರ ಕವಿಯ ಗದ್ದಿಗೆ ನಿರ್ಲಕ್ಷ್ಯಕ್ಕೊಳಗಾಗಿದೆ. ಮಠ ಅವಸಾನದ ಅಂಚಿನಲ್ಲಿದೆ. ಉಳಿದಂತೆ ಪ್ರಾಚೀನ ಕಲ್ಲು ಮಂಟಪ, ಹಲಸಹಳ್ಳಿ ಗವಿಮಠ, ಹಿರಿಯ ಶ್ರೀಗಳ ಗದ್ದಗೆಗಳು ಹಾಗೂ ದೇವಾಲಯಗಳು ನಿರ್ವಹಣೆಯ ಕೊರತೆ ಎದುರಿಸುತ್ತಿವೆ.
ಕವಿಯನ್ನು ಸ್ಮರಿಸುವ ಕೆಲಸವಾಗುತ್ತಾ?
ಈ ಬಾರಿ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವುದರಿಂದ 16ನೇ ಶತಮಾನದಲ್ಲಿಯೇ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದ ಕವಿ ಷಡಕ್ಷರದೇವನ ಜನ್ಮ ಸ್ಥಳದತ್ತ ಗಮನಹರಿಸಿ ಅವರ ಬದುಕು ಮತ್ತು ಸಾಹಿತ್ಯವನ್ನು ಯುವ ತಲೆಮಾರಿಗೆ ಮುಟ್ಟಿಸುವ ಮತ್ತು ಹುಟ್ಟೂರನ್ನು ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣವನ್ನಾಗಿ ಮಾಡುವ ಕಾರ್ಯದತ್ತ ಗಮನಹರಿಸ ಬೇಕಾಗಿದೆ. ಇದು ಮಹಾಕವಿಗೆ ನೀಡುವ ಗೌರವವಾಗಲಿದೆ. ಇದೆಲ್ಲವೂ ಸಾಧ್ಯವಾಗುತ್ತಾ? ಕಾದು ನೋಡಬೇಕಿದೆ.
-
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ












Click it and Unblock the Notifications